Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 30 ದಿನಗಳ ಕಾಲ ಸ್ಮಾರ್ಟ್‌ಫೋನ್ ಇಲ್ಲದೆ ಬದುಕಿದ ವ್ಯಕ್ತಿ : ಕೊನೆಗೆ ಏನಾಯಿತು ಗೊತ್ತಾ..?
ಪ್ರಮುಖವಿದೇಶ

30 ದಿನಗಳ ಕಾಲ ಸ್ಮಾರ್ಟ್‌ಫೋನ್ ಇಲ್ಲದೆ ಬದುಕಿದ ವ್ಯಕ್ತಿ : ಕೊನೆಗೆ ಏನಾಯಿತು ಗೊತ್ತಾ..?

Share
2 Min Read
SHARE

newsics.com/ನ್ಯೂಸಿಕ್ಸ್

ಪ್ರಸ್ತುತ ತಾಂತ್ರಿಕ ಯುಗದಲ್ಲಿ, ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ನಾವು ನಮ್ಮ ಫೋನ್‌ಗಳಿಲ್ಲದೆ ಒಂದು ಕ್ಷಣವನ್ನು ಕಳೆಯಲು ಸಹ ಸಾಧ್ಯವಿಲ್ಲ. ನಾವು ಎಷ್ಟರ ಮಟ್ಟಿಗೆ ಫೋನ್‌ಗಳಿಗರ ವೈಸನಿಗಳಾಗಿದ್ದಿವೆಂದರೆ, ಒಂದು ವೇಳೆ ಊಟ ಮಾಡುವುದನ್ನು ಬಿಟ್ಟರೂ ಮೊಬೈಲ್‌ ಹಿಡಿಯುವುದನ್ನು ಬಿಡುವುದಿಲ್ಲ. ಈ ರೀತಿ ಇರುವಾಗ ಒಬ್ಬ ವ್ಯಕ್ತಿಯು 30 ದಿನಗಳವರೆಗೆ ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವ ಸವಾಲನ್ನು ತೆಗೆದುಕೊಂಡಿದ್ದನು.

ನಾಥನ್ ಕೋವಿ  ಎಂಬ ವ್ಯಕ್ತಿ ಇತ್ತೀಚೆಗೆ ಸಾಮಾಜಿಕ ಜಾಲತಾಣ X ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ತಿಂಗಳ ಕಾಲ ಐಫೋನ್ ಸೇರಿದಂತೆ ಯಾವುದೇ ಆಧುನಿಕ ಸ್ಮಾರ್ಟ್‌ಫೋನ್ ಬಳಸದ ಅವರು, ಅದರ ಬದಲು ಸಾಮಾನ್ಯ ಫ್ಲಿಪ್‌ಫೋನ್ ಬಳಸಿದ್ದರು.

ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿವೆ ಎಂಬುದನ್ನು ಅರಿಯಲು ಅವರು ಈ ಪ್ರಯೋಗ ಆರಂಭಿಸಿದ್ದರು. ಆರಂಭದಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವುದು ತುಂಬಾ ಕಷ್ಟವಾಗಬಹುದು, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಭಾವಿಸಿದ್ದರು.ಆದರೆ ಒಂದು ತಿಂಗಳ ಅನುಭವದ ಬಳಿಕ ಅವರ ಅಭಿಪ್ರಾಯ ಸಂಪೂರ್ಣ ಬದಲಾಗಿದೆ.ಜನರು ಸ್ಮಾರ್ಟ್‌ಫೋನ್‌ಗೆ ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ವ್ಯಸನಿಗಳಾಗಿದ್ದಾರೆ. ಫ್ಲಿಪ್‌ಫೋನ್ ಬಳಸಿದಾಗ, ಒಂದು ಕೊಠಡಿಯಲ್ಲಿ ಮೊಬೈಲ್ ನೋಡದೇ ಇರುವ ಏಕೈಕ ವ್ಯಕ್ತಿ ನೀವೇ ಆಗಿರುವುದನ್ನು ಗಮನಿಸುತ್ತೀರಿ ಎಂದು ಅವರು ಬರೆದುಕೊಂಡಿದ್ದಾರೆ.

ನಾಥನ್ ಕೋವಿ ಅವರ ಪ್ರಕಾರ, ಸ್ಮಾರ್ಟ್‌ಫೋನ್ ತೊರೆದ ಬಳಿಕ ತಮ್ಮ ಮೆದುಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಲು ಆರಂಭಿಸಿತು. ಹಿಂದೆ ದಾರಿಗಳನ್ನು ಹುಡುಕಲು ಮೊಬೈಲ್ ಮ್ಯಾಪ್‌ಗಳ ಮೇಲೆ ಅವಲಂಬಿತರಾಗಿದ್ದ ಅವರು, ಈಗ ರಸ್ತೆ ಹಾಗೂ ಮಾರ್ಗಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನೆನಪಿನ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅವರು ಕಾಗದ ಮತ್ತು ಪೆನ್ ಬಳಕೆ ಹೆಚ್ಚಿಸಿಕೊಂಡಿದ್ದಾರೆ. ಡಿಜಿಟಲ್ ಸಾಧನಗಳಿಗಿಂತ ನೈಜ ವಸ್ತುಗಳತ್ತ ಹೆಚ್ಚು ಆಕರ್ಷಣೆ ಮೂಡಿದೆ ಎಂದು ತಿಳಿಸಿದ್ದಾರೆ.”ಈಗ ನಾನು ನನ್ನ ಮೆದುಳನ್ನು ಹೆಚ್ಚು ಬಳಸುತ್ತಿದ್ದೇನೆ. ಕೆಲವೊಮ್ಮೆ ಬೇಸರವಾದಾಗ ಮೊಬೈಲ್ ಹಿಡಿಯುವುದಿಲ್ಲ. ಬದಲಾಗಿ ಆಲೋಚನೆಗಳಲ್ಲಿ ಮುಳುಗುತ್ತೇನೆ. ಇದು ಒಳ್ಳೆಯ ಅನುಭವವಾಗಿದೆ” ಎಂದು ಅವರು ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಬಳಕೆ ಕಡಿಮೆಯಾದ ನಂತರ ಅವರ ಸಂವಹನ ಶೈಲಿಯಲ್ಲೂ ಬದಲಾವಣೆ ಕಂಡುಬಂದಿದೆ. ಹಿಂದೆ ಸಂದೇಶಗಳ ಮೂಲಕವೇ ಹೆಚ್ಚು ಮಾತನಾಡುತ್ತಿದ್ದ ಅವರು, ಈಗ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ನೇರವಾಗಿ ಕರೆ ಮಾಡಿ ಮಾತನಾಡಲು ಆರಂಭಿಸಿದ್ದಾರೆ. “ಅನೇಕ ಸಂದರ್ಭಗಳಲ್ಲಿ ಕರೆ ಮಾಡುವುದು ಸಂದೇಶ ಕಳುಹಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ನನಗೆ ಈಗ ಅರಿವಾಗಿದೆ” ಎಂದು ಅವರು ಹೇಳಿದ್ದಾರೆ.

Annamalai ಅಣ್ಣಾಮಲೈ ಹೊಸ ಅಭಿಯಾನ : ಬಿಜೆಪಿ ತೊರೆದ ಗಂಟೆಗಳಲ್ಲೇ 8 ಲಕ್ಷ ಜನ ಸೇರ್ಪಡೆ!

 

TAGGED:The man who lived without a smartphone for 30 days
Share This Article
Facebook Twitter Copy Link Print
Previous Article Annamalai ಅಣ್ಣಾಮಲೈ ಹೊಸ ಅಭಿಯಾನ : ಬಿಜೆಪಿ ತೊರೆದ ಗಂಟೆಗಳಲ್ಲೇ 8 ಲಕ್ಷ ಜನ ಸೇರ್ಪಡೆ!
Next Article Heavy Rain ರಾಜ್ಯದಲ್ಲಿ ಮಳೆಯ ಅಬ್ಬರ : ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?