Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Porfolio issue ಖಾತೆ ಕ್ಯಾತೆಗೆ ತೇಪೆ: ಫಲಿಸಿತು ಸಿಎಂ ಡಿಕೆ ತಡರಾತ್ರಿಯ ಸಂಧಾನ
ಕರ್ನಾಟಕದೇಶಪ್ರಮುಖ

Porfolio issue ಖಾತೆ ಕ್ಯಾತೆಗೆ ತೇಪೆ: ಫಲಿಸಿತು ಸಿಎಂ ಡಿಕೆ ತಡರಾತ್ರಿಯ ಸಂಧಾನ

Share
1 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಅಭಿವೃದ್ಧಿಯ ವೇಗ ಹೆಚ್ಚಿಸಲು ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ದಿಢೀರ್ ಎದುರಾದ ಖಾತೆ ತಕರಾರು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶ ಕಂಡಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ ಕಾರಣಕ್ಕೆ ಬೇಸರಗೊಂಡಿದ್ದ ರಾಮಲಿಂಗಾ ರೆಡ್ಡಿ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಾತೆ ಹಾಗೂ ಜ್ಯೇಷ್ಠತೆಯ ನಿರ್ಲಕ್ಷ್ಯದ ಕಾರಣಕ್ಕೆ ಮುನಿಯಪ್ಪ ಕೂಡ ಅಸಮಾಧಾನ ಹೊರಹಾಕಿದ್ದರು. ಕೆಲವು ವರ್ಗಾವಣೆ ವಿಚಾರದಲ್ಲಿ ಹಿರಿಯ ಸಚಿವರು ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ತಡರಾತ್ರಿ ಎಲ್ಲವೂ ಸುಖಾಂತ್ಯಗೊಂಡಿತು. ರಾಹುಲ್ ಗಾಂಧಿ ಜತೆ ಮಾತನಾಡಿದ ಬಳಿಕ ಮುನಿಯಪ್ಪ ಅವರ ಮುನಿಸು ತಣಿದರೆ, ತಡರಾತ್ರಿ ಸಿಎಂ ಡಿ.ಕೆ. ಶಿವಕುಮಾರ್ ಜತೆಗಿನ ಸಭೆಯ ಬಳಿಕ ರಾಮಲಿಂಗಾರೆಡ್ಡಿ ರಾಜೀನಾಮೆ ನಿಲುವಿನಿಂದ ಹಿಂದೆ ಸರಿದರು. ಶನಿವಾರ ಬೆಳಗ್ಗೆ ಅವರು ರಾಜೀನಾಮೆ ಪತ್ರ ಹಿಂಪಡೆಯುವ ಸಾಧ್ಯತೆಯಿದೆ.
ಸಚಿವ ಸ್ಥಾನಕ್ಕೆ ರೆಡ್ಡಿ ದಿಢೀರ್ ರಾಜೀನಾಮೆ, ಖಾತೆ ಬದಲಾವಣೆಗೆ ಮುನಿಯಪ್ಪ ಅವರ ಬಹಿರಂಗ ಬೇಡಿಕೆ, ವರ್ಗಾವಣೆ ವಿಚಾರದಲ್ಲಿ ಹಿರಿಯ ಸಚಿವರ ನಿಲುವು ಹಾಗೂ ಸತೀಶ್ ಜಾರಕಿಹೊಳಿ ಅವರ ಮಾತಿನ ಲಹರಿ, ಹಿರಿಯ ನಾಯಕ ಎಚ್‌.ಕೆ. ಪಾಟೀಲರು ಇದು ಎಚ್ಚರಿಕೆ ಗಂಟೆ ಎಂದು ನೀಡಿದ್ದ ಸಂದೇಶ ಸರ್ಕಾರ ಮತ್ತು ಸಂಘಟನೆಗೆ ಸವಾಲೊಡ್ಡಿತ್ತು. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿರಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿದ್ದ ಹೊತ್ತಲ್ಲೇ ನಡೆದ ಈ ಬೆಳವಣಿಗೆ ಮುಜುಗರಕ್ಕೀಡು ಮಾಡಿತ್ತು. ಕೊನೆಯಲ್ಲಿ ಎಲ್ಲವೂ ಸುಖಾಂತ್ಯವಾಯಿತು.

ಜಿಬಿಎ ಚುನಾವಣೆ ಎದುರಿಗಿರುವುದರಿಂದ ಸಾಕಷ್ಟು ಜವಾಬ್ದಾರಿ ಇದೆ, ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಬೆಂಗಳೂರಿನ ವಿಚಾರದಲ್ಲಿ ತಮ್ಮ ಮಾರ್ಗದರ್ಶನದಂತೆಯೇ ಮುಂದುವರಿಯಲಾಗುತ್ತದೆ. ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯಿರಿ. ಮುಂದೆ ಸೂಕ್ತ ಹೊಂದಾಣಿಕೆ ಮಾಡಲಾಗುವುದು. ಹೈಕಮಾಂಡ್ ಒಪ್ಪಿದರೆ ರಾಮಲಿಂಗಾರೆಡ್ಡಿ, ಮುನಿಯಪ್ಪ ಇಬ್ಬರಿಗೂ ಸೂಕ್ತ ಸಂದರ್ಭದಲ್ಲಿ ಹೆಚ್ಚುವರಿ ಖಾತೆ ಹಂಚಿಕೆ ಮಾಡುವ ಭರವಸೆಯನ್ನು ಸಿಎಂ ಡಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರ ತೀರದ ಅಧಿಕಾರ ದಾಹವಾ? ಸಿದ್ದರಾಮಯ್ಯ ಎಫೆಕ್ಟಾ? ಡಿಕೆ ಸರ್ಕಾರಕ್ಕೆ ಸ್ವಪಕ್ಷವೇ ವೈರಿ!

TAGGED:Patch to the ministerial portfolio: CM DK's late-night negotiations bear fruit
Share This Article
Facebook Twitter Copy Link Print
Previous Article IND vs AFG Test ಭಾರತ vs ಅಫ್ಘಾನ್‌ ಟೆಸ್ಟ್‌ ಪಂದ್ಯ : ಐಪಿಎಲ್‌ನ ಸ್ಕ್ವಾಡ್‌ನಲ್ಲಿ ನಾಲ್ವರು ಕನ್ನಡಿಗರು?
Next Article Jamun Fruit ನೇರಳೆ ಹಣ್ಣಿನ ಆರೋಗ್ಯ ಗುಣಗಳು; ರುಚಿಯ ಜೊತೆಗೆ ಆರೋಗ್ಯದ ಖಜಾನೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?