Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮನೆ ಹರಾಜು ಮಾಡಲು ಹೋಗಿ ಬಡತನವನ್ನು ಕಂಡು ಸ್ವಂತ ಹಣದಲ್ಲೇ 4 ವರ್ಷ ಸಾಲ ಕಟ್ಟಿದ ಅಧಿಕಾರಿ
ದೇಶಪ್ರಮುಖ

ಮನೆ ಹರಾಜು ಮಾಡಲು ಹೋಗಿ ಬಡತನವನ್ನು ಕಂಡು ಸ್ವಂತ ಹಣದಲ್ಲೇ 4 ವರ್ಷ ಸಾಲ ಕಟ್ಟಿದ ಅಧಿಕಾರಿ

Share
2 Min Read
SHARE

newsics.com/ನ್ಯೂಸಿಕ್ಸ್

ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆಗೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿದ್ದಾರೆ.

ಕಾನೂನು ಪ್ರಕಾರ ಮನೆಯನ್ನು ಹರಾಜು ಹಾಕುವ ಬದಲು, ಆ ಬಡ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸಿ, ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದೇ ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ ಎಲ್ಲರ ಮನ ಗೆದ್ದಿದ್ದಾರೆ.

ಈ ಘಟನೆ ನಡೆದಿರುವುದು ನೆರೆರಾಜ್ಯ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ. ಕೊಯಿಲಾಂಡಿ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ರಿಕವರಿ ಆಫೀಸರ್ ಆಗಿದ್ದ ಮರ್ಸಿ ಚೆರಿಯಾನ್ ಅವರೇ ಈ ಕಥೆಯ ರಿಯಲ್ ಹೀರೋಯಿನ್. ಬಾಲೋವರಿ ಪಂಚಾಯತ್‌ನ ಪುತ್ತೂರ್‌ವಟ್ಟಂ ನಿವಾಸಿ ಜಾನು ಮತ್ತು ಅವರ ಮಗಳು ಪ್ರಮೀಳಾ ಎಂಬುವವರೇ ಈ ಮಾನವೀಯತೆಯ ಲಾಭ ಪಡೆದ ದುರ್ದೈವಿಗಳು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಈ ತಾಯಿ-ಮಗಳು ಅನಿವಾರ್ಯವಾಗಿ ತಮ್ಮ ಪುಟ್ಟ ಮನೆಯನ್ನು ಅಡವಿಟ್ಟು 75,000 ರೂಪಾಯಿ ಸಾಲ ಪಡೆದಿದ್ದರು. ಆದರೆ, ಬಡತನದ ಕಾರಣದಿಂದ ಅವರಿಗೆ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಲೇ ಇಲ್ಲ.

ನಿಯಮಗಳ ಪ್ರಕಾರ ಬ್ಯಾಂಕ್, ಸಾಲ ವಸೂಲಾತಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿ ಮನೆಯನ್ನು ಹರಾಜು ಹಾಕಲು ನಿರ್ಧರಿಸಿತು. ಈ ಜಾಗವನ್ನು ಅಳತೆ ಮಾಡಿ, ಜಪ್ತಿ ಪ್ರಕ್ರಿಯೆ ನಡೆಸುವ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿ ಮರ್ಸಿ ಚೆರಿಯಾನ್ ಅವರಿಗೆ ವಹಿಸಲಾಗಿತ್ತು. ಕರ್ತವ್ಯದ ಭಾಗವಾಗಿ ಜಾನು ಅವರ ಮನೆಗೆ ಭೇಟಿ ನೀಡಿದ ಮರ್ಸಿಗೆ, ಅಲ್ಲಿನ ಕಷ್ಟದ ಪರಿಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು. ಆ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ತಕ್ಷಣವೇ ಅವರು ಒಂದು ಧೈರ್ಯದ ನಿರ್ಧಾರ ಮಾಡಿದರು; ಆ ಸಾಲದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳಲು ನಿರ್ಧರಿಸಿದರು.

ಕಳೆದ 2022ರಲ್ಲಿ, 80,000 ರೂಪಾಯಿಗೆ ಆ ಸಾಲವನ್ನು ನವೀಕರಿಸಿದ ಮರ್ಸಿ ಚೆರಿಯಾನ್, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ತಮ್ಮ ಸ್ವಂತ ಹಣದಿಂದ 1500 ರೂಪಾಯಿಗಳ ಕಂತನ್ನು ಬ್ಯಾಂಕ್‌ಗೆ ಪಾವತಿಸುತ್ತಾ ಬಂದರು. ಇತ್ತೀಚೆಗೆ ಅವರ ನಿವೃತ್ತಿಯ ದಿನ ಹತ್ತಿರ ಬಂದಾಗ, ಇನ್ನು ಮುಂದೆ ಕಂತು ಪಾವತಿ ವಿಳಂಬವಾಗಬಾರದು ಎಂದು ಯೋಚಿಸಿದ ಮರ್ಸಿ, ಬಾಕಿ ಉಳಿದಿದ್ದ ಇಡೀ 41,000 ರೂಪಾಯಿಗಳನ್ನು ಒಂದೇ ಬಾರಿಗೆ ಪಾವತಿಸಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದರು.

ಬಾಕಿ ಹಣವನ್ನೆಲ್ಲಾ ಪಾವತಿಸಿದ ಮರ್ಸಿ, ಆ ಕುಟುಂಬದ ಮನೆಯ ಮೂಲ ಪತ್ರಗಳನ್ನು (ರಜಿಸ್ಟರ್ಡ್ ಡಾಕ್ಯುಮೆಂಟ್ಸ್) ಬ್ಯಾಂಕ್‌ನಿಂದ ಬಿಡಿಸಿ ತಂದು ಅವರಿಗೆ ಹಿಂದಿರುಗಿಸಿದರು. ತಮ್ಮ ಅಧಿಕೃತ ಸೇವೆಯ ಕೊನೆಯ ದಿನ, ಮರ್ಸಿ ಚೆರಿಯಾನ್ ಅವರು ಬ್ಯಾಂಕ್‌ನಿಂದ ಬೀಳ್ಕೊಡುಗೆ ಪಡೆಯುವಾಗ ಜಾನು ಮತ್ತು ಪ್ರಮೀಳಾ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದರು.

ಬಿಯರ್ ಇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೀವ್ರ ಕೊರತೆ!

TAGGED:An officer who went to auction a house and found himself in poverty paid off a 4-year loan with his own money
Share This Article
Facebook Twitter Copy Link Print
Previous Article ಬಿಯರ್ ಇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೀವ್ರ ಕೊರತೆ!
Next Article Peddi First Review ಪೆದ್ದಿ ಫಸ್ಟ್ ರಿವ್ಯೂ : ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?