newsics.com/ನ್ಯೂಸಿಕ್ಸ್
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ‘ಮುಕ್ತಿಮಂದಿರ’ಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ ಕೇವಲ 40 ದಿನಗಳ ಒಳಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ಈಗ ಇಡೀ ರಾಜ್ಯ ರಾಜಕಾರಣದಲ್ಲಿ ದಾರಿ ಸಂಚಲನ ಮೂಡಿಸಿದೆ.
ಕಳೆದ ಏಪ್ರಿಲ್ 19 ರಂದು ಡಿ.ಕೆ. ಶಿವಕುಮಾರ್ ಅವರು ತಮಗೆ ಅತ್ಯಂತ ಆಪ್ತರು ಹಾಗೂ ಪಕ್ಷದ ನಾಯಕರಿಗೂ ಯಾವುದೇ ಮಾಹಿತಿ ನೀಡದೆ ಮುಕ್ತಿಮಂದಿರಕ್ಕೆ ಅತ್ಯಂತ ರಹಸ್ಯವಾಗಿ ಆಗಮಿಸಿದ್ದರು.
ಕೇವಲ ಪೊಲೀಸ್ ಸೆಕ್ಯೂರಿಟಿ (ಭದ್ರತೆ) ನಡುವೆ ಕ್ಷೇತ್ರಕ್ಕೆ ಬಂದಿದ್ದ ಅವರು, ಮುಕ್ತಿಮಂದಿರದ ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಪವಿತ್ರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿದ್ದರು.
LIC shares ಶೇ.2ರಷ್ಟು ಎಲ್‌ಐಸಿ ಷೇರು ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ
ಗರ್ಭಗುಡಿಯಲ್ಲಿ ಜಪ, ತಪ
ಈ ರಹಸ್ಯ ಪೂಜೆಯ ವೇಳೆ ಗರ್ಭಗುಡಿಯೊಳಗೆ ಮಾಧ್ಯಮದವರು ಹಾಗೂ ಸ್ಥಳೀಯ ಮುಖಂಡರಿಗೂ ಪ್ರವೇಶ ನಿರಾಕರಿಸಲಾಗಿತ್ತು.
ಗರ್ಭಗುಡಿಯೊಳಗೆ ಕೇವಲ ಮುಕ್ತಿಮಂದಿರದ ಪೀಠಾಧಿಪತಿಗಳಾದ ಶ್ರೀ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಅರ್ಚಕರಿಗೆ ಮಾತ್ರ ಪ್ರವೇಶವಿತ್ತು.
ವೀರಗಂಗಾಧರ ಶ್ರೀಗಳ ಗದ್ದುಗೆ ಮುಂದೆ ಸುದೀರ್ಘ ಸಮಯ ಕುಳಿತುಕೊಂಡಿದ್ದ ಡಿಕೆಶಿ, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಭಕ್ತಿಯ ಧ್ಯಾನ, ಜಪ ಮತ್ತು ತಪಗಳನ್ನು ಮಾಡಿದ್ದರು.
ರಾಜಕೀಯ ವಲಯ ಅಚ್ಚರಿ!
ಅಂದು ಡಿಕೆಶಿ ಅವರು ಶ್ರೀಗಳ ಸನ್ನಿಧಿಯಲ್ಲಿ ರಾಜ್ಯದ ಅತ್ಯುನ್ನತ ರಾಜಕೀಯ ಅಧಿಕಾರ ಪ್ರಾಪ್ತಿಗಾಗಿ ವಿಶೇಷ ಸಂಕಲ್ಪ ಮಾಡಿದ್ದರು ಎನ್ನಲಾಗಿದ್ದು, ಅದಾಗಿ ಸರಿಯಾಗಿ 40 ದಿನಗಳು ಕಳೆಯುವಷ್ಟರಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದುಬಂದಿದೆ. ಈ ಮೂಲಕ ಮುಕ್ತಿಮಂದಿರ ಕ್ಷೇತ್ರದ ಅದ್ಭುತ ಆಧ್ಯಾತ್ಮಿಕ ಶಕ್ತಿ ಮತ್ತು ಲಿಂಗೈಕ್ಯ ಶ್ರೀಗಳ ಆಶೀರ್ವಾದದ ಪವಾಡ ಈಗ ಮತ್ತೊಮ್ಮೆ ಸಾಬೀತಾದಂತಾಗಿದ್ದು, ಈಗ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಜೂನ್ 1 ಅಥವಾ 3 ರಂದು ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಸಾಧ್ಯತೆ