newsics.com/ನ್ಯೂಸಿಕ್ಸ್
ಕರ್ನಾಟಕ ಸಿಎಂ ಬದಲಾವಣೆ ಹಿಂದಿನ ಅಸಲಿ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಎನ್ನಲಾಗ್ತಿದೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸಿದ್ದು ವಿರುದ್ಧ ಖರ್ಗೆ ರಣತಂತ್ರ ರೂಪಿಸಿದ್ರಾ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿ ಪುತ್ರನ ರಾಜಕೀಯ ಭವಿಷ್ಯ ಭದ್ರಗೊಳಿಸಲು ಡಿಕೆ ಶಿವಕುಮಾರ್ಗೆ ಮಲ್ಲಿಕಾರ್ಜುನ ಖರ್ಗೆ ಸಾಥ್ ಕೊಟ್ಟರು ಎನ್ನಲಾಗ್ತಿದೆ.
ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯವಾಗಿ ಬೆಳಸೋ ಒಂದೇ ಒಂದು ಕಾರಣಕ್ಕೆ ಖರ್ಗೆ ಅವರು ಡಿಕೆ ಶಿವಕುಮಾರ್ ಜೊತೆ ಸೇರಿ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದಾರೆ ಎನ್ನಲಾಗ್ತಿದೆ. ಡಿಕೆ ಶಿವಕುಮಾರ್ ಕ್ಯಾಬಿನೆಟ್ನಲ್ಲಿ ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಿದ್ದಾರೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ಬಂದಿವೆ.
ಖರ್ಗೆಗೆ ಡಿಕೆಶಿ ಕೊಟ್ಟ ಮಾತೇನು?
ತನ್ನ ನೇತೃತ್ವದ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನ ಮುಂದಿನ ಸಿಎಂ ಆಗುವ ರೀತಿ ಬೆಳೆಸೋ ಭರವಸೆಯನ್ನ ಡಿಕೆಶಿ ಕೊಟ್ಟಿದ್ದಾರಂತೆ. ಮಲ್ಲಿಕಾರ್ಜುನ್ ಖರ್ಗೆಗೆ ಮಾತು ಕೊಟ್ಟು ಕಟ್ಟಿ ಹಾಕಿದ್ರಾ ಡಿಸಿಎಂ ಡಿಕೆ ಶಿವಕುಮಾರ್? ಎನ್ನುವ ಪ್ರಶ್ನೆ ಮೂಡಿದೆ. ಡಿಕೆಶಿ ಮಾತು ಹಾಗೂ ಮಗನ ಭವಿಷ್ಯದ ದೃಷ್ಟಿಯಿಂದ ಖರ್ಗೆ ಅವರು ಸಿಎಂ ಬದಲಾವಣೆ ಗೇಮ್ ಪ್ಲಾನ್ನ ಪ್ರಮುಖ ನಾಯಕರಾದ್ರು ಎನ್ನಲಾಗ್ತಿದೆ.
ಡಿಕೆ ಶಿವಕುಮಾರ್ ಅವರನ್ನ ಸಿಎಂ ಸ್ಥಾನಕ್ಕೇರಿಸಿ ಮಗನ ಭವಿಷ್ಯ ಭದ್ರ ಮಾಡಲು ಮುಂದಾದ ಮಲ್ಲಿಕಾರ್ಜುನ ಖರ್ಗೆ ಅವ್ರು ಅದಕ್ಕಾಗಿಯೇ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮೂಲಕ ಖರ್ಗೆ ಅಂದುಕೊಂಡ ಕೆಲಸ ಸಾಧಿಸಿದ್ದಾರೆ ಎನ್ನಲಾಗ್ತಿದೆ.
ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಡಿಕೆಶಿ ಕನಸು ನನಸಾಗಿದೆ. ಹೀಗಾಗಿ ನೆಚ್ಚಿನ ನಾಯಕಿಗೆ ಧನ್ಯವಾದ ತಿಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದು, ಇಂದೇ ಸೋನಿಯಾ ಗಾಂಧಿ ಅವರ ಭೇಟಿಯಾಗಲಿದ್ದಾರೆ. ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಡಿಕೆಶಿ ಧನ್ಯವಾದ ಹೇಳಲಿದ್ದಾರಂತೆ.