newsics.com/ನ್ಯೂಸಿಕ್ಸ್
ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಲೈಂಗಿಕ ಆಮಿಷಗಳು ಮತ್ತು ದುಬಾರಿ ಉಡುಗೊರೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮಾಜಿ ಕ್ರಿಕೆಟರೊಬ್ಬರು ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ.
ncupodcast ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿರುವ ಮಾಜಿ ಕ್ರಿಕೆಟರ್ ಮಾಡಿರುವ ಆರೋಪಗಳು ಆಘಾತಕಾರಿಯಾಗಿವೆ. ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಲೈಂಗಿಕ ಆಮಿಷಗಳು ಮತ್ತು ದುಬಾರಿ ಉಡುಗೊರೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಕೇವಲ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಹಿರಿಯ ಆಟಗಾರರು ಅಥವಾ ಪ್ರಭಾವಿಗಳ ಇಚ್ಛೆಯಂತೆ ತಮ್ಮ ಗೆಳತಿಯರನ್ನೇ ಲೈಂಗಿಕ ಆಮಿಷಕ್ಕೆ ಒಡ್ಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಮೂಲಕ ಯುವ ಆಟಗಾರರ ಅಸಹಾಯಕತೆಯನ್ನೇ ಇಲ್ಲಿ ಬಂಡವಾಳ ಮಾಡಿಕೊಳ್ಳಲಾಗುತ್ತಿದೆ,’ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟರ್ ಕ್ರಿಕೆಟ್‌ನ ಒಳರಾಜಕೀಯದ ಬಗ್ಗೆ ಭಯಾನಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ‘ಕೆಲವು ಹಿರಿಯ ಆಟಗಾರರು ತಮ್ಮ ಜೂನಿಯರ್ ಆಟಗಾರರಿಗೆ ತಮ್ಮ ಗರ್ಲ್‌ಫ್ರೆಂಡ್ಸ್ ಕಳುಹಿಸುವಂತೆ ಒತ್ತಾಯಿಸುತ್ತಾರೆ. ನನಗೆ ತಿಳಿದಿರುವ ಕೆಲವು ಆಟಗಾರರು ಅವಕಾಶಕ್ಕಾಗಿ ತಮ್ಮ ಗೆಳತಿಯರನ್ನೇ ಕಳುಹಿಸಿದ ಉದಾಹರಣೆಗಳಿವೆ. ಇದು ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಸ್ಥಳೀಯ ಮಟ್ಟದ ಕ್ರಿಕೆಟ್‌ನಲ್ಲಿಯೂ ನಡೆಯುತ್ತಿದೆ,’ ಎಂದು ಅವರು ಆರೋಪಿಸಿದ್ದಾರೆ.
ಮತ್ತೊಂದು ಆಘಾತಕಾರಿ ವಿಷಯವೆಂದರೆ ‘ಒಬ್ಬ ಆಟಗಾರನು ಮತ್ತೊಬ್ಬ ಆಟಗಾರನ ಪತ್ನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಾನೆ. ಆ ಸಂತ್ರಸ್ತ ಆಟಗಾರನಿಗೆ ಈ ವಿಷಯ ತಿಳಿದಿದ್ದರೂ, ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಸುಮ್ಮನೆ ಇರುತ್ತಾನೆ. ಅಷ್ಟೇ ಅಲ್ಲದೆ ಆ ಕಿರುಕುಳ ನೀಡುವ ಆಟಗಾರನ ಜೊತೆಗೇ ಸಮಯ ಕಳೆಯುವ ಅನಿವಾರ್ಯತೆ ಅವನಿಗೆ ಇರುತ್ತದೆ,’ ಎಂದು ಹೇಳಿದ್ದಾರೆ. ಇದು ಕ್ರಿಕೆಟ್ ಲೋಕದ ಅಮಾನವೀಯ ಮುಖವನ್ನು ತೋರಿಸುತ್ತದೆ.
https://www.instagram.com/reel/DYkBKEvttJE/?igsh=N3Q4cDFqbWh5ZnF0
ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಕೇಸ್ : ಓರ್ವ ಪೊಲೀಸ್ ಅಧಿಕಾರಿ ಸೇರಿ 6 ಸಿಬ್ಬಂದಿಗಳು ಸಸ್ಪೆಂಡ್