newsics.com/ನ್ಯೂಸಿಕ್ಸ್
ಕಲಬುರಗಿ: ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕ್ರೂಸರ್ ವಾಹನದಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಸಮೀಪ ನಡೆದಿದೆ.
ತೋಲಾ ಸಾಬ್ ಕಾಶ್ವಾರ್(27) ಹುಸೇನ್ ಷಾ(48), ಮೆಹಬೂಬ್ ಅಲಿ(45), ರಸೂಲ್ ಬೀ(42), ಫಾತಿಮಾ ಅಲಿ(38) ಮೃತಪಟ್ಟವರು ಎಂದು ಹೇಳಲಾಗಿದೆ.
ಕುಟುಂಬದವರು ಕ್ರೂಸರ್ ನಲ್ಲಿ ಯಾದಗಿರಿಗೆ ಹೋಗಿ ವಾಪಸ್ ಬರುವಾಗ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಚಲಿಸುವ ರೈಲಿನಿಂದ ಹಸುಗೂಸನ್ನು ಹೊರಗೆಸೆದ ಹೆತ್ತ ತಾಯಿ; ಹಳಿಯ ಮೇಲೆ ಬಿದ್ದು ಛಿದ್ರಗೊಂಡ ಶಿಶು