newsics.com/ನ್ಯೂಸಿಕ್ಸ್
ಕಾರಿನ ಬಾನೇಟ್ ಮೇಲೆ ವ್ಯಕ್ತಿ ನೇತಾಡುತ್ತಿದ್ದರೂ ಕಾರು ನಿಲ್ಲಿಸದೇ ಚಾಲನೆ ಮಾಡಿದ ಆರೋಪದ ಮೇಲೆ ಆರ್ಟಿಐ ಕಾರ್ಯಕರ್ತ ನನ್ನು ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗಂಗರಾಜು ಬಂಧಿತ ಆರ್ ಟಿಐ ಕಾರ್ಯಕರ್ತ. ಧನಂಜಯ್ ಎಂಬುವರನ್ನು ಗಂಗರಾಜು ಅವರು ಸಬ್ ರಿಜಿಸ್ಟ್ರಾರ್ ಕಚೇರಿ ಬಳಿಯಿಂದ ಕುವೆಂಪುನಗರ ಪೊಲೀಸ್ ಠಾಣೆವರೆಗೆ ಸುಮಾರು ಮುಕ್ಕಾಲು ಕಿ.ಮೀವರೆಗೆ ಕಾರಿನ ಬಾನೆಟ್ ಮೇಲೆಯೇ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಂಗರಾಜು ಅವರು ಕೊನೆಗೆ ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಕಾರು ನಿಲ್ಲಿಸಿದ್ದಾರೆ. ಆ ಬಳಿಕ ಬಾನೆಟ್ ಮೇಲಿಂದ ಕೆಳಗೆ ಬಿದ್ದ ಧನಂಜಯ ಅವರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗಂಗರಾಜು ನನ್ನ ಮೇಲೆ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಧನಂಜಯ್ ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಪ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಗಂಗರಾಜು ಅವರನ್ನು ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೋದಿಯವರನ್ನು ಪ್ರಶ್ನಿಸಿದ ಬೆನ್ನಲ್ಲೇ ಪತ್ರಕರ್ತೆಯ ಸಾಮಾಜಿಕ ಖಾತೆಗಳನ್ನು ಬ್ಲಾಕ್ ಮಾಡಿದ ಮೆಟಾ