newsics.com/ನ್ಯೂಸಿಕ್ಸ್
ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಜನಪ್ರಿಯ ನಟನಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಡ್ರ್ಯಾಗನ್ ಚಿತ್ರತಂಡ ವಿಶೇಷ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ತಮ್ಮ ನಾಯಕ ನಟ ಮತ್ತು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಟ್ಟಿದೆ.
ಪ್ರಶಾಂತ್ ನೀಲ್ ಜೂನಿಯರ್ ಎನ್ಟಿಆರ್ ಸಹಯೋಗದ ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.
ಇದೀಗ ತಮ್ಮ ಮನೆಗೆ ಅಸಾಹಿ ಮತ್ತು ಯೂಹಿ ಎಂಬ ಎರಡು ಮುದ್ದಾದ ಸಾಕು ಗಿಳಿಗಳನ್ನು ಸ್ವಾಗತಿಸಿದ್ದಾರೆ. ಈ ಹೆಸರುಗಳಿಗೆ ಜಪಾನ್ ಜೊತೆ ವಿಶೇಷ ನಂಟಿದ್ದು, ಆರ್‌ಆರ್‌ಆರ್ ಮತ್ತು ‘ದೇವರ’ ಚಿತ್ರದ ಪ್ರಚಾರದ ನಂತರ ಎನ್ಟಿಆರ್ ಜಪಾನ್ ಮೇಲೆ ಹೊಂದಿರುವ ಪ್ರೀತಿಯ ಸಂಕೇತವಾಗಿದೆ.
‘ನನ್ನ ಮುದ್ದಿನ ಹಕ್ಕಿಗಳಾದ ಅಸಾಹಿ ಮತ್ತು ಯೂಹಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಇದು ಜಪಾನ್ ದೇಶದ ಮೇಲಿನ ನನ್ನ ಪ್ರೀತಿಯ ಸಂಕೇತ’ ಎಂದು ಎನ್ಟಿಆರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾ ಜಪಾನ್‌ನಲ್ಲಿ ಬಿಡುಗಡೆಯಾದ ದಿನದಿಂದಲೂ ಜೂನಿಯರ್ ಎನ್ಟಿಆರ್ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ‘ದೇವರ’ ಚಿತ್ರದ ಪ್ರಚಾರಕ್ಕಾಗಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾಗ ಸಿಕ್ಕ ಅಭೂತಪೂರ್ವ ಸ್ಪಂದನೆ ಅವರ ಮನ ಗೆದ್ದಿತ್ತು. ಇದೇ ಕಾರಣಕ್ಕೆ ತಮ್ಮ ಹೊಸ ಸಾಕುಪ್ರಾಣಿಗಳಿಗೆ ಜಪಾನಿ ಮೂಲದ ಹೆಸರುಗಳನ್ನು ಇಟ್ಟಿದ್ದಾರೆ.
https://www.instagram.com/p/DYjcKj5mLaJ/?igsh=MXMzNndtcW80cDA4
Vastu Tips For Mobile ಮಲಗುವಾಗ ಮೊಬೈಲ್ ಫೋನ್ ತಲೆ ಹತ್ತಿರ ಇಟ್ಕೋತೀರಾ? ಹಾಗಾದ್ರೆ ಅಪಾಯ ಫಿಕ್ಸ್!