Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿ 99 ಸಾವಿರ ರೂ ಕಳೆದುಕೊಂಡ ವ್ಯಕ್ತಿ
ಕರ್ನಾಟಕಪ್ರಮುಖ

ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿ 99 ಸಾವಿರ ರೂ ಕಳೆದುಕೊಂಡ ವ್ಯಕ್ತಿ

Share
1 Min Read
SHARE

newsics.com/ನ್ಯೂಸಿಕ್ಸ್

ಬೆಳಗಾವಿ : ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 99 ಸಾವಿರ ರೂಪಾಯಿ ಹಣವನ್ನು ವಂಚಕರು ಎಗರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಸಂಜೀವ್ ಮುತ್ತೆಪ್ಪಗೋಳ ಅವರು ವಂಚನೆಗೆ ಒಳಗಾದ ವ್ಯಕ್ತಿ. ಮಾರ್ಚ್ 27ರಂದು ಬಾಡಿಗೆ ಆಧಾರದಲ್ಲಿ ಕಾರ್ ಬುಕ್ ಮಾಡಲು ಇವರು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ “ಲಕ್ಷ್ಮೀ ಕಾರ್ ರೆಂಟಲ್ ಗೋವಾ” ಎಂಬ ವೆಬ್ಸೈಟ್ಗೆ ಸಂಬಂಧಿಸಿದ ನೀಲಂ ರಜಪೂತ್ ಎಂಬಾತನನ್ನು ಸಂಪರ್ಕಿಸಿದ್ದಾರೆ.
ಬೆಳಗಾವಿ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್ ಬೇಕೆಂದು ವಿಚಾರಿಸಿದಾಗ, 800 ರೂ. ಬಾಡಿಗೆ ಆಗುತ್ತದೆ. ಮೊದಲು ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕಾರ್ ಬುಕ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ “ಕಾರ್ ರೆಂಟಲ್” ಹೆಸರಿನ ಆ್ಯಪ್ ಲಿಂಕ್ನ್ನು ಕಳುಹಿಸಿದ್ದಾನೆ.
ಆತನ ಸೂಚನೆಯಂತೆ ಸಂಜೀವ್ ಅವರು ಆ್ಯಪ್ ಡೌನ್ಲೋಡ್ ಮಾಡಲು ಪ್ರಯತ್ನಿಸಿದರೂ ಅದು ಸರಿಯಾಗಿ ಡೌನ್ಲೋಡ್ ಆಗಿರಲಿಲ್ಲ. ನಂತರ ವಂಚಕನ ಸೂಚನೆಯಂತೆ ಫೋನ್ಪೇ ಮೂಲಕ 149 ರೂ. ಪಾವತಿಸಿದ್ದಾರೆ. ಆದರೂ ಕಾರ್ ಬುಕ್ಕಿಂಗ್ ಖಚಿತವಾಗದ ಹಿನ್ನೆಲೆಯಲ್ಲಿ ಮತ್ತೆ ವಂಚಕನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ.
ಈ ವೇಳೆ ಆ್ಯಪ್ ಡೌನ್ಲೋಡ್ ಪ್ರಕ್ರಿಯೆ ತಿಳಿಸುವ ನೆಪದಲ್ಲಿ ಗೂಗಲ್ ಮೀಟ್ ಮೂಲಕ ಮೊಬೈಲ್ ಸ್ಕ್ರೀನ್ ಶೇರ್ ಮಾಡುವಂತೆ ಹೇಳಿದ್ದಾನೆ. ದೂರುದಾರರು ತಿಳಿಯದಂತೆ ಅವರ ಮೊಬೈಲ್ ಹಾಗೂ ಬ್ಯಾಂಕ್ ವಿವರಗಳಿಗೆ ಪ್ರವೇಶ ಪಡೆದ ವಂಚಕ, ಖಾತೆಯಲ್ಲಿದ್ದ 99 ಸಾವಿರ ರೂ. ಹಣವನ್ನು ಎಗರಿಸಿದ್ದಾನೆ.
ಈ ಕುರಿತು ಬೆಳಗಾವಿ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಚಾರ್ಜ್ ಹಾಕುವ ವಿಷಯಕ್ಕೆ ಜಗಳ; ಮಾವನನ್ನು ಹತ್ಯೆಗೈದ ಅಳಿಯ

TAGGED:000 after booking car rental onlineMan loses Rs 99
Share This Article
Facebook Twitter Copy Link Print
Previous Article ಮೊಬೈಲ್ ಚಾರ್ಜ್ ಹಾಕುವ ವಿಷಯಕ್ಕೆ ಜಗಳ; ಮಾವನನ್ನು ಹತ್ಯೆಗೈದ ಅಳಿಯ
Next Article ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ

Popular Posts

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

You Might Also Like

ಪ್ರಮುಖಕರ್ನಾಟಕ

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read
ಪ್ರಮುಖದೇಶ

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read
ಪ್ರಮುಖವಿದೇಶ

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read
ಪ್ರಮುಖCrimeಕರ್ನಾಟಕ

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?