newsics.com/ನ್ಯೂಸಿಕ್ಸ್
ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ದಿನನಿತ್ಯ ನಾವು ನೋಡುವ, ಕೇಳುವ ಹಾಗೂ ಕೆಲವೊಮ್ಮೆ ಅನುಭವಿಸುವ ಇಂತಹ ಪದಗಳನ್ನು ಬಳಸಿ ಒಂದು ಫ್ಯಾಮಿಲಿ ಇಮೇಜ್ ಸೃಷ್ಟಿಸಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ.
ಒಂದು ಕುಟುಂಬ, ಅದರಲ್ಲಿ ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್ ಮ್ಯಾಚ್ ನೋಡುತ್ತಿದ್ದಾರೆ. ಅಲ್ಲಿ ಪುರುಷ ಹೈಟ್ ಇದ್ದಾರೆ, ಆ ಮಹಿಳೆ ಪುರುಷನಿಗಿಂತ ಸ್ವಲ್ಪ ಕಡಿಮೆ ಎತ್ತರ ಇದ್ದಾರೆ, ಚಿಕ್ಕ ಮಗ ಸಹಜವಾಗಿ ಅಲ್ಲಿ ಎಲ್ಲರಿಗಿಂತ ಚಿಕ್ಕವನು. ಅವರೆಲ್ಲರಲ್ಲಿ, ಅಲ್ಲಿ ಹಾಕಿರುವ ವುಡನ್ ಬೇಲಿ ಮೇಲಿಂದ ಆ ಪುರುಷನಿಗೆ ಮ್ಯಾಚ್ ಕಾಣಿಸುತ್ತದೆ.
ಆದರೆ ಎಲ್ಲರಿಗೂ ನಿಂತಿರುವ ನೆಲದ ಮೇಲೆ ಕಾಳಿನ ಕೆಳಗೆ ಮರದ ಮಣೆಯ ಸಪೋರ್ಟ್ ಇದೆ. ಪುರುಷನ ಹೈಟ್‌ಗೆ ಮರದ ಮಣೆ ಇಲ್ಲದೆಯೂ ಕಾಣಿಸುವಂತಿದೆ, ಅದರೆ ಮಹಿಳೆಗೆ ಕೆಳಗೊಂದು ಮರದ ಮಣೆ ಹಾಕಿದಾಗ ಕಾಣಿಸುತ್ತಿದೆ. ಆದರೆ, ಆ ಪುಟ್ಟ ಹುಡುಗನಿಗೆ ಮರದ ಸಪೋರ್ಟ್ ಇದ್ದರೂ ಏನೂ ಕಾಣಿಸುವುದಿಲ್ಲ.
ಈಗ ಅವರೇನು ಮಾಡಬೇಕೋ ಅದನ್ನು ಮಾಡಿದ್ದಾರೆ. ಪರುಷ ಅಂದರೆ ತಂದೆ ಆ ಮಗು ಎಂದರೆ ತನ್ನ ಮಗನಿಗೆ ತನ್ನ ಕಾಲಿನ ಕೆಳಗೆ ಇದ್ದ ಆ ಮರದ ಮಣೆಯನ್ನು ಕೊಟ್ಟು ತಾನು ಬರಿಯ ನೆಲದ ಮೇಲೆ ನಿಂತು ನೋಡುತ್ತಿದ್ದಾರೆ. ಅಲ್ಲಿಗೆ ಮಗನಿಗೆ ಎರರಡು ಮಣೆ, ತಾಯಿಗೆ ಒಂದು ಮಣೆ ಹಾಕಿದಾಗ ಮ್ಯಾಚ್ ಕಾಣಿಸುತ್ತಿದ್ದರೆ ಅಪ್ಪನಿಗೆ ಮಣೆ ಇಲ್ಲದೆಯೂ ಅಲ್ಲಿನ ದೃಶ್ಯ ಕಾಣಿಸುತ್ತಿದೆ. ಈ ಫೋಟೋ ಮೇಲೆ ಟೆಕ್ಸ್ ಕೂಡ ಹಾಕಲಾಗಿದೆ. ಅದೀಗ ಸಹಜವಾಗಿಯೇ ಹಲವರ ಗಮನ ಸೆಳೆಯುತ್ತಿದೆ.
ಅಲ್ಲಿನ ಫೋಟೋಗಳು ಹಾಗೂ ಅವುಗಳ ಮೇಲಿರುವ ಕ್ಯಾಪ್ಶನ್‌ಗಳು ಬಹಳಷ್ಟು ಮಾತುಗಳನ್ನು ಹೇಳುತ್ತಿವೆ. ಸಮಾನತೆ, ಅಗತ್ಯತೆ ಹಾಗೂ ಅನಿವಾರ್ಯತೆ ಎಂಬಂತಿರುವ ನ್ಯಾಯ ಈ ಎಲ್ಲ ಅಂಶಗಳ ಮೇಲೆ ಅವು ಬೆಳಕು ಚೆಲ್ಲುತ್ತಿವೆ. ನ್ಯಾಯ ಎಂಬುದು ಎಲ್ಲರಿಗೂ ಅಗತ್ಯವಾಗಿ ಸಿಗಬೇಕು ಎಂಬರ್ಥದಲ್ಲಿ ಈ ಪೋಸ್ಟ್ ವೈರಲ್ ಅಗುತ್ತಿದೆ.
Vijay ಸಾಮಾನ್ಯ ಸರ್ಕಾರಿ ನೌಕರನಂತೆ ಮನೆಯಿಂದಲೇ ಲಂಚ್ ಬಾಕ್ಸ್ ಜೊತೆ ಸಚಿವಾಲಯಕ್ಕೆ ಬಂದ ವಿಜಯ್