Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಮನೆ ಮಾಲೀಕ : ಯುವತಿ ವಿಡಿಯೋ ವೈರಲ್
ಕರ್ನಾಟಕಪ್ರಮುಖವೈರಲ್

ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಮನೆ ಮಾಲೀಕ : ಯುವತಿ ವಿಡಿಯೋ ವೈರಲ್

Share
2 Min Read
SHARE

newsics.com/ನ್ಯೂಸಿಕ್ಸ್

ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಭಾರಿ ದುಬಾರಿಯಾಗುತ್ತಿದ್ದು, ಅದರಲ್ಲೂ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ. ಇದರ ನಡುವೆ ಬಾಡಿಗೆ ಮತ್ತು ಮನೆ ಮಾಲೀಕರು-ಬಾಡಿಗೆದಾರರ ನಡುವಿನ ಕಿರಿಕಿರಿಗಳ ಬಗ್ಗೆ ಆಗಾಗ ಆನ್‌ಲೈನ್‌ನಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ದಿಶಾಕಾ ಎಂಬ ಯುವತಿಯೊಬ್ಬರು ತಮ್ಮ ಮನೆ ಮಾಲೀಕರು ತಿಂಗಳಿಗೆ ₹4,000 ಬಾಡಿಗೆ ಏರಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿದ ವಿಡಿಯೋ ಒಂದು, ಬೆಂಗಳೂರಿನ ಬಾಡಿಗೆ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಬೆಂಗಳೂರಿನಲ್ಲಿ ಬಾಡಿಗೆ ಪರಿಸ್ಥಿತಿ ಯಾಕೆ ಇಷ್ಟೊಂದು ಕೆಟ್ಟದಾಗಿದೆ? ನಿಮಗೂ ಇಂಥ ಅನುಭವ ಆಗಿದೆಯಾ?” ಎಂಬ ಶೀರ್ಷಿಕೆಯೊಂದಿಗೆ ದಿಶಾಕಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ದಿಶಾಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಅವರ ಮಾಲೀಕರು ಮೊದಲು, ‘ನನ್ನ ತಮ್ಮ ಊರಿಗೆ ಬರುತ್ತಿದ್ದಾನೆ, ಹಾಗಾಗಿ ನೀವು ಮನೆ ಖಾಲಿ ಮಾಡಬೇಕು’ ಎಂದು ಹೇಳಿದ್ದಾರೆ. ಆದರೆ, ಆಸುಪಾಸಿನಲ್ಲಿ ಬಾಡಿಗೆ ದರ ಹೆಚ್ಚಾಗಿದ್ದೇ ಇದಕ್ಕೆ ನಿಜವಾದ ಕಾರಣ ಎಂದು ಯುವತಿಗೆ ನಂತರ ತಿಳಿಯಿತು.

ನನ್ನ ಓನರ್ ನನಗೆ ಸುಳ್ಳು ಹೇಳಿದರು. ಇದ್ದಕ್ಕಿದ್ದಂತೆ ತಿಂಗಳಿಗೆ 4 ಸಾವಿರ ರೂಪಾಯಿ ಬಾಡಿಗೆ ಜಾಸ್ತಿ ಮಾಡಿದರು. ಕಾರಣ ಕೇಳಿದ್ದಕ್ಕೆ, ತಮ್ಮ ಊರಿಗೆ ಬರುತ್ತಿದ್ದಾನೆ, ಅವನನ್ನು ಈ ಮನೆಯಲ್ಲಿ ಇರಿಸಬೇಕು ಅಂದರು, ಎಂದು ದಿಶಾಕಾ ವಿಡಿಯೋದಲ್ಲಿ ಹೇಳಿದ್ದಾರೆ.

ನಾನು ವಾಸವಿರುವ ಇಡೀ ಬಿಲ್ಡಿಂಗ್ ಅವರದ್ದೇ. ಆದರೂ ನನ್ನನ್ನೇ ಯಾಕೆ ಖಾಲಿ ಮಾಡಲು ಹೇಳುತ್ತಿದ್ದಾರೆ ಎಂಬ ಅನುಮಾನ ಬಂತು,” ಎಂದು ಅವರು ವಿವರಿಸಿದ್ದಾರೆ. ನಂತರ ಮಾಲೀಕರ ಬಳಿ ಚರ್ಚಿಸಿದಾಗ, ಆ ಏರಿಯಾದಲ್ಲಿ ಒಂದು ಬೆಡ್‌ರೂಮ್ ಮನೆಗಳಿಗೆ ಈಗ ತಿಂಗಳಿಗೆ ₹26,000 ದಿಂದ ₹28,000 ಬಾಡಿಗೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಇದು ನನ್ನೊಬ್ಬಳ ಕಥೆನಾ ಅಥವಾ ಬೆಂಗಳೂರಿನಲ್ಲಿ ಇದು ಸಾಮಾನ್ಯವಾ ಅಂತ ತಿಳಿಬೇಕಿತ್ತು. ಮನೆ ಮಾಲೀಕರು ದುಡ್ಡಿನ ವಿಚಾರದಲ್ಲಿ ಸಿಕ್ಕಾಪಟ್ಟೆ ಕಿರಿಕಿರಿ ಮಾಡ್ತಾರೆ ಅಂತ ಗೊತ್ತು. ಈಗ ನಾನು ತಿಂಗಳಿಗೆ 4 ಸಾವಿರ ರೂಪಾಯಿ ಹೆಚ್ಚಿಗೆ ಕೊಡ್ತಾ ಇದ್ದೀನಿ, ಇದು ನಿಜಕ್ಕೂ ಹುಚ್ಚುತನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

https://www.instagram.com/reel/DYMvFoIzyDt/?igsh=MWs3dHppdGFqbGxueA==

ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?

 

TAGGED:000 by lyingLandlord raises rent by ₹4
Share This Article
Facebook Twitter Copy Link Print
Previous Article ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?
Next Article Supreme Court ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 38ಕ್ಕೆ ಹೆಚ್ಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ

Popular Posts

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

You Might Also Like

ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?