ಕಾಲಿವುಡ್ ರವಿ ಮೋಹನ್‌ಅವರ ಕೌಟುಂಬಿಕ ಕಲಹ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪತ್ನಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ನಟ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ರವಿ ಮೋಹನ್ – ಆರತಿ ವಿಚ್ಛೇದನಕ್ಕೆ ಮುಂದಾಗಿದ್ದು, ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ.
ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿರುವಾಗಲೇ ನಟ ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆಗಿನ ಅವರ ಸ್ನೇಹದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಕಳೆದ ಕೆಲ ಸಮಯದಿಂದ ಕೆನಿಶಾ ಫ್ರಾನ್ಸಿಸ್ – ರವಿ ಮೋಹನ್ ನಡುವಿನ ಸ್ನೇಹ ಸಂಬಂಧ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ರವಿ ಮೋಹನ್ ಮಾತ್ರ ನಾವಿಬ್ರೂ ಒಳ್ಳೆಯ ಸ್ನೇಹಿತರು ಎನ್ನುವ ಮಾತುಗಳನ್ನಷ್ಟೇ ಹೇಳುತ್ತಾ ಬಂದಿದ್ದಾರೆ.
ಆದರೆ ಆರತಿ – ರವಿ ಮೋಹನ್ ನಡುವಿನ ಸಂಬಂಧ ಹದಗೆಡಲು ಕೆನಿಶಾ ಫ್ರಾನ್ಸಿಸ್ ಅವರೇ ಕಾರಣವೆನ್ನುವ ಆರೋಪಗಳಿವೆ.
ಈ ಪರಿಸ್ಥಿತಿಯ ನಡುವೆ ಶನಿವಾರ (ಮೇ 16) ಸುದ್ದಿಗೋಷ್ಠಿ ನಡೆಸಿದ ರವಿ ಮೋಹನ್, ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಭಾವುಕರಾಗಿ ಮಾತನಾಡಿದ್ದಾರೆ.
ಕೆನಿಶಾ ಅವರನ್ನು ಅನೇಕರನ್ನು ಟ್ರೋಲ್ ಮಾಡಿದ್ದಾರೆ. ರವಿ ಮೋಹನ್ ಜತೆಗಿನ ಒಡನಾಟದಿಂದಲೇ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ.
ಈ ಹಿನ್ನೆಲೆ ಗಾಯಕಿ ಕೆನಿಶಾ ಚೆನ್ನೈ ತೊರೆಯುವ ನಿರ್ಧಾರ ಮಾಡಿದ್ದು, ರವಿ ಮೋಹನ್ ಅವರಿಂದ ಅಂತರ ಕಾಯ್ದುಕೊಳ್ಳುತ್ತೇನೆ ಎಂದಿದ್ದಾರೆ.
ರವಿ ಮೋಹನ್ ಎಲ್ಲಾ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾವುಕರಾಗಿದ್ದಾರೆ.
“ಕೆನಿಶಾ ಕೇವಲ ಒಳ್ಳೆಯ ಗೆಳತಿ.. ಅವರನ್ನೂ ಓಡಿಸಿಬಿಟ್ಟರು!”
ಪತ್ನಿ ಆರತಿಗೆ ವಿಚ್ಛೇದನ ಘೋಷಿಸಿದ ನಂತರ ರವಿ ಮೋಹನ್ ಅವರು ಕೆನಿಶಾ ಜೊತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಟೀಕೆಗೆ ಒಳಗಾಗಿತ್ತು. ಇದರ ಬೆನ್ನಲ್ಲೇ ಕೆನಿಶಾ ತಮಗೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯಿಸಿ, ತಾವು ರವಿ ಮೋಹನ್ ಹಾಗೂ ಚೆನ್ನೈನಿಂದ ದೂರ ಹೋಗುತ್ತಿರುವುದಾಗಿ ಪ್ರಕಟಿಸಿದ್ದರು. ಇದು ಈ ವಿವಾದವನ್ನು ಮತ್ತಷ್ಟು ಕಾವೇರುವಂತೆ ಮಾಡಿತ್ತು.
ಈ ಬಗ್ಗೆ ಇಂದು ಮುಕ್ತವಾಗಿ ಮಾತನಾಡಿದ ರವಿ ಮೋಹನ್, “ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡ ಏಕೈಕ ವ್ಯಕ್ತಿ ಎಂದರೆ ಅದು ಕೆನಿಶಾ ಮಾತ್ರ. ನಾನು ನನ್ನ ವೈವಾಹಿಕ ಜೀವನದಿಂದ ಏಕೆ ಹೊರಬರಬೇಕಾಯಿತು ಎಂಬ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ನನಗೆ ಮಾನವೀಯತೆಯಿಂದ ಪ್ರೀತಿ ಮತ್ತು ಬೆಂಬಲ ನೀಡಿದರು. ಆದರೆ, ಆ ಸಂಬಂಧವನ್ನು ಅತ್ಯಂತ ಕೀಳಾಗಿ ಬಿಂಬಿಸಿ, ಕೊನೆಗೆ ಅವರು ಚೆನ್ನೈ ಬಿಟ್ಟು ಹೋಗುವ ಪರಿಸ್ಥಿತಿಗೆ ತಳ್ಳಿಬಿಟ್ಟರು,” ಎಂದು ಬೇಸರ ವ್ಯಕ್ತಪಡಿಸಿದರು.
“ನನ್ನನ್ನು ಸತತವಾಗಿ ಕೆಣಕುತ್ತಿದ್ದಾರೆ” – ರವಿ ಮೋಹನ್ ಆಕ್ರೋಶ
“ಕೆನಿಶಾ ಅವರ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳು ಮಾಡಿ ಇಲ್ಲಿಂದ ಕಳುಹಿಸಿದ್ದಾರೆ. ಸೌಮ್ಯವಾಗಿದ್ದ ನನ್ನನ್ನು ಕೆಲವರು ಸತತವಾಗಿ ಕೆಣಕುತ್ತಲೇ ಇದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ” ಎಂದು ರವಿ ಮೋಹನ್ ಆಕ್ರೋಶ ಹೊರಹಾಕಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಎನ್‌ಟಿಎ ತಜ್ಞೆ ಮನೀಷಾ ಮಂಢಾರೆ ಸಿಬಿಐ ಬಲೆಗೆ!