newsics.com/ನ್ಯೂಸಿಕ್ಸ್
ಚಿನ್ನದ ಬೆಲೆ ಏರಿಕೆಯಿಂದ ಬೇಸತ್ತಿದ್ದ ಆಭರಣ ಪ್ರಿಯರಿಗೆ ಇಂದು ಬಂಪರ್ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗಿದ್ದು, ಆಭರಣ ಖರೀದಿಗೆ ಗ್ರಾಹಕರು ಚಿನ್ನದ ಅಂಗಡಿಯತ್ತ ಮುಖ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು 10% ಹೆಚ್ಚಿಸಿದ ಬೆನ್ನಲ್ಲೇ ಏರುಗತಿಯಲ್ಲಿದ್ದ ದರಕ್ಕೆ ಇಂದು ಜಾಗತಿಕ ಮಾರುಕಟ್ಟೆಯ ಕಾರಣಗಳಿಂದಾಗಿ ಬ್ರೇಕ್ ಬಿದ್ದಿದೆ.
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
10 ಗ್ರಾಂ ಬೆಲೆ: ₹2,240 ಇಳಿಕೆಯಾಗಿದ್ದು, ಪ್ರಸ್ತುತ ₹1,60,090 ತಲುಪಿದೆ.
1 ಗ್ರಾಂ ಬೆಲೆ: ₹224 ಇಳಿಕೆಯಾಗಿ ₹16,009 ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
10 ಗ್ರಾಂ ಬೆಲೆ: ₹2,050 ಭಾರಿ ಕುಸಿತ ಕಂಡು ₹1,46,750 ಕ್ಕೆ ತಲುಪಿದೆ.
1 ಗ್ರಾಂ ಬೆಲೆ: ₹205 ಇಳಿಕೆಯಾಗಿ ₹14,675 ಆಗಿದೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ:
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯೂ ಇಂದು ಗಮನಾರ್ಹ ಕುಸಿತ ಕಂಡಿದೆ. ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ ಸುಮಾರು ₹10,000 ವರೆಗೆ ಇಳಿಕೆಯಾಗಿದ್ದು, ಪ್ರಸ್ತುತ ಕೆಜಿ ಬೆಳ್ಳಿ ₹2.90 ಲಕ್ಷ ರೂಪಾಯಿಗೆ ಲಭ್ಯವಿದೆ.
https://www.newsics.com/2026/05/16/heart-attacks-are-increasing-among-young-people/