Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Dilip Raj ಕಿರುತೆರೆ ಕಲಾವಿದರು, ತಂತ್ರಜ್ಞರ ಪಾಲಿಗೆ ಅನ್ನದಾತ ಆಗಿದ್ದ ದಿಲೀಪ್ ರಾಜ್‌
ಕರ್ನಾಟಕಪ್ರಮುಖಮನರಂಜನೆ

Dilip Raj ಕಿರುತೆರೆ ಕಲಾವಿದರು, ತಂತ್ರಜ್ಞರ ಪಾಲಿಗೆ ಅನ್ನದಾತ ಆಗಿದ್ದ ದಿಲೀಪ್ ರಾಜ್‌

Share
1 Min Read
SHARE

newsics.com/ನ್ಯೂಸಿಕ್ಸ್

ದಿಲೀಪ್ ರಾಜ್ ಅವರ ಹಠಾತ್‌ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕ ದಿಗ್ರ್ಭಮೆಗೊಂಡಿದೆ. ಗಟ್ಟಿಮುಟ್ಟಾಗಿದ್ದ, ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದ ದಿಲೀಪ್ ರಾಜ್ ಹೃದಯಾಘಾತದಿಂದ ಸಾವನ್ನಪ್ಪಿರುವುದು ದುರಂತ.

https://youtube.com/shorts/vd_Fn8drod4?si=CvPPZAJu5QmGONhu

ʼಬಾಯ್ ಫ್ರೆಂಡ್ʼ ಚಿತ್ರದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2007ರಲ್ಲಿ ಬಿಡುಗಡೆಯಾದ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಮಿಲನ’ ಚಿತ್ರದಲ್ಲಿನ ವಿಲನ್‌ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. 2016ರಲ್ಲಿ ರಿಲೀಸ್‌ ಆದ ʼಯು ಟರ್ನ್ʼ ಚಿತ್ರದಲ್ಲಿನ ಅವರ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚೆಗೆ ತೆರೆಕಂಡ ಡಾರ್ಲಿಂಗ್‌ ಕೃಷ್ಣ ನಿರ್ದೇಶನ ʼಲವ್‌ ಮಾಕ್ಟೇಲ್‌ 3′ ಸಿನಿಮಾದಲ್ಲಿಯೂ ನಟಿಸಿದ್ದರು.

ಕಿರಿತೆರೆಯಲ್ಲಿಯೂ ಮೋಡಿ ಮಾಡಿದ್ದ ದಿಲೀಪ್‌ ರಾಜ್‌, ʼಜನನಿʼ, ʼಅರ್ಧ ಸತ್ಯʼ, ʼರಂಗೋಲಿʼ, ʼಕುಂಕುಮ ಬಾಗ್ಯʼ, ʼಮಾಂಗಲ್ಯʼ, ʼಮಳೆಬಿಲ್ಲುʼ, ʼಪ್ರೀತಿಗಾಗಿʼ, ʼಹಿಟ್ಲರ್‌ ಕಲ್ಯಾಣʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ʼಹಿಟ್ಲರ್‌ ಕಲ್ಯಾಣʼ ಸಿರೀಯಲ್‌ ನಿರ್ಮಾಣವನ್ನೂ ಮಾಡಿದ್ದರು. ಅಲ್ಲದೆ ʼವಿದ್ಯಾ ವಿನಾಯಕʼ, ʼಪಾರುʼ, ನಾ ನಿನ್ನ ಬಿಡಲಾರೆʼ ಮುಂತಾದ ಧಾರಾವಾಹಿಗಳನ್ನೂ ನಿರ್ಮಿಸಿದ್ದರು.

ಕೆಲ ರಿಯಾಲಿಟಿ ಶೋ ಗಳ ನಿರೂಪಕ ಆಗಿ ಕೂಡ ಕೆಲಸ ಮಾಡಿದ್ರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡುವುದರ ಜೊತೆಗೆ ನಿರ್ಮಾಣ ಸಂಸ್ಥೆ ಕೂಡ ಆರಂಭಿಸಿದ್ದರು. ಸದ್ಯ ‘ಕೃಷ್ಣ ರುಕ್ಕು’ ಸೇರಿದಂತೆ ಎರಡು ಧಾರಾವಾಹಿಗಳ ನಿರ್ಮಾಣ ಮಾಡ್ತಾ ಇದ್ದ ದಿಲೀಪ್ ಅನೇಕ ಕಿರುತೆರೆ ಕಲಾವಿದರು, ತಂತ್ರಜ್ಞರ ಪಾಲಿಗೆ ಅನ್ನದಾತ ಆಗಿದ್ದರು.

ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ. ಪ್ರೀತಿಸಿ ಕೈ ಹಿಡಿದ ಪತ್ನಿ ಶ್ರೀ ವಿದ್ಯಾ , ಇಬ್ಬರೂ ಮುದ್ದಿನ ಮಕ್ಕಳು ಜೊತೆಗೆ ತಮ್ಮ ಕಿರುತೆರೆಯ ದೊಡ್ಡ ಕುಟುಂಬವನ್ನು ಅನಾಥವಾಗಿ ಬಿಟ್ಟು ದಿಲೀಪ್ ಕಣ್ಮರೆ ಆಗಿದ್ದಾರೆ.

https://www.newsics.com/2026/05/15/effect-of-hormuz-conflict-cng-price-hiked-by-rs-2-per-kg/

TAGGED:Dilip Raj was a breadwinner for television artists and technicians.
Share This Article
Facebook Twitter Copy Link Print
Previous Article CNG Price hike ಹಾರ್ಮುಜ್ ಸಂಘರ್ಷದ ಎಫೆಕ್ಟ್ : ಸಿಎನ್‌ಜಿ ಕೆಜಿಗೆ 2 ರೂಪಾಯಿ ಹೆಚ್ಚಳ
Next Article ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?