newsics.com/ನ್ಯೂಸಿಕ್ಸ್
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಬೆನ್ನಲೇ ಇದೀಗ ಜನರ ಜೇಬಿಗೆ ಮತ್ತೊಂದು ಕತ್ತರಿ. ಸಿಎನ್‌ಜಿ ದರದಲ್ಲಿ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ.
https://youtube.com/shorts/vd_Fn8drod4?si=CvPPZAJu5QmGONhu
ಇಂದು (ಮೇ 15) ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ಗೆ 3 ರೂ.ನಷ್ಟು ಏರಿಕೆಯಾದ ಬೆನ್ನಲ್ಲೇ ಸಿಎನ್‌ಜಿ ದರ ಕೂಡ ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 77.09 ರೂ.ನಿಂದ 79.09 ರೂ. ಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಈಗಾಗಲೇ ದರ ಹೆಚ್ಚಳ ಮಾಡಿದ್ದು, ಅಲ್ಲಿನ ಬೆಲೆ ಈಗ ಪ್ರತಿ ಕೆಜಿಗೆ 84 ರೂ. ತಲುಪಿದೆ.
ಸಿಎನ್‌ಜಿ ದರ ಏರಿಕೆಯು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಬಾಡಿಗೆ ದರ ಹೆಚ್ಚಿಸಿದರೆ ಜನ ಆಟೋ ಹತ್ತಲ್ಲ, ಹೆಚ್ಚಿಸದಿದ್ದರೆ ನಮಗೆ ಹೊಟ್ಟೆ ತುಂಬಲ್ಲ ಎಂಬುದು ಅವರ ಸಮಸ್ಯೆ. ಬೆಂಗಳೂರಿನಂತಹ ನಗರಗಳಲ್ಲಿ ಈಗಾಗಲೇ ಸಿಎನ್‌ಜಿ ಕೊರತೆಯಿಂದಾಗಿ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು, ಈಗ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.
https://www.newsics.com/2026/05/15/heavy-rain-likely-in-many-parts-of-the-state-for-the-next-4-days/