newsics.com/ನ್ಯೂಸಿಕ್ಸ್
ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ 2026ರ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರ ತನಿಖಾ ದಳ, ಬಂಧಿತ ಐವರು ಆರೋಪಿಗಳನ್ನು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶರಾದ ಅಜಯ್ ಗುಪ್ತಾ ಅವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ.
https://youtube.com/shorts/KY0wlwc-Du0?si=-28u12qk1-aiTIHP
ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಸಿಬಿಐ ಈ ಐವರನ್ನು ಬಂಧಿಸಿದೆ. ಶುಭಮ್ ಖೈರ್ನಾರ್: ಮಹಾರಾಷ್ಟ್ರದ ನಾಸಿಕ್ ನಿವಾಸಿ, ಮಂಗಿಲಾಲ್ ಬಿವಾಲ್, ವಿಕಾಸ್ ಬಿವಾಲ್ ಮತ್ತು ದಿನೇಶ್ ಬಿವಾಲ್: ರಾಜಸ್ಥಾನದ ಜೈಪುರ ಮೂಲದ ಒಂದೇ ಕುಟುಂಬದ ಸದಸ್ಯರು, ಯಶ್ ಯಾದವ್: ಹರಿಯಾಣದ ಗುರುಗ್ರಾಮದ ನಿವಾಸಿ.
ಈ ಪ್ರಶ್ನೆಪತ್ರಿಕೆ ಸೋರಿಕೆ ಜಾಲವು ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಮತ್ತು ಪುಣೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪುಣೆಯ ಆಯುರ್ವೇದ ವೈದ್ಯರೊಬ್ಬರಿಂದ ಸೋರಿಕೆಯಾದ ಪತ್ರಿಕೆಯು ನಾಸಿಕ್‌ನ ಶುಭಮ್ ಖೈರ್ನಾರ್ ಮೂಲಕ ಇತರೆ ಆರೋಪಿಗಳಿಗೆ ತಲುಪಿದೆ ಎಂದು ಶಂಕಿಸಲಾಗಿದೆ. ಈ ಮಾಹಿತಿಯನ್ನು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗುಂಪುಗಳ ಮೂಲಕ ಹಂಚಿಕೊಳ್ಳಲಾಗಿತ್ತು.
ರಾಜಸ್ಥಾನದ ದಿನೇಶ್ ಬಿವಾಲ್ ಎಂಬಾತ ಸುಮಾರು 30 ಲಕ್ಷ ರೂಪಾಯಿ ನೀಡಿ ಪ್ರಶ್ನೆಪತ್ರಿಕೆ ಖರೀದಿಸಿದ್ದ ಎನ್ನಲಾಗಿದ್ದು, ಸಿಬಿಐ ಈ ಹಣಕಾಸಿನ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
https://www.newsics.com/2026/05/14/actor-darshans-fate-in-the-supreme-court-tomorrow/