newsics.com/ನ್ಯೂಸಿಕ್ಸ್
ಅಮೆರಿಕಾ- ಇರಾನ್ ಯುದ್ಧದಿಂದ ಕಚ್ಚಾತೈಲ ಬೆಲೆ ಗಗನಕ್ಕೇರಿದೆ. ಇದರಿಂದ ರೂಪಾಯಿ ಮೌಲ್ಯ ಕೂಡ ಕುಸಿಯುತ್ತಿದೆ. ಈಗ ಪ್ರಧಾನಿ ಮೋದಿ ದೇಶದ ಜನರಿಗೆ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ನೀಡಿದ್ದಾರೆ. ಜತೆಗೆ ಚಿನ್ನ ಖರೀದಿಯನ್ನ ಒಂದು ವರ್ಷ ಮುಂದೂಡಿ ಎಂದು ಜನರಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಹೂಡಿಕೆ ತಜ್ಞರು ವಿಶ್ಲೇಷಿಸಿದ್ದಾರೆ.
https://youtube.com/shorts/KY0wlwc-Du0?si=-28u12qk1-aiTIHP
ನರೇಂದ್ರ ಮೋದಿ ಅವರು ಹೇಳಿರುವುದು ಸರಿ ಇದೆ. ಕಳೆದ ವರ್ಷದ ದೇಶದ ಆಮದು-ರಫ್ತು ಗಮನಿಸಿದರೆ ಭಾರತವು 23 ರಿಂದ 25 ಸಾವಿರ ಕೋಟಿ ರು. ಮೌಲ್ಯ(ಶೇ.30)ದ ಕಚ್ಚಾತೈಲ ಆಮದು ಮಾಡಿಕೊಂಡಿದೆ.
ಮೋದಿ ಅವರ ಹೇಳಿಕೆಯಿಂದ ಖಂಡಿತವಾಗಿಯೂ ಚಿನ್ನದ ದರ ಹೆಚ್ಚಳವಾಗುವುದಿಲ್ಲ. ಏಕೆಂದರೆ ಬಂಗಾರದ ಬೆಲೆ ನಿರ್ಧಾರವಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಡಾಲರ್ ಎದುರು ರುಪಾಯಿ ಬೆಲೆ ಕುಸಿದರೆ ಮಾತ್ರ. ಆದರೆ ಚಿನ್ನದ ಆಮದು ಇದೇ ರೀತಿ ಮುಂದುವರಿದರೆ ಖಂಡಿತವಾಗಿಯೂ ದರ ಅಧಿಕವಾಗಲಿದೆ.
ಇದರಲ್ಲಿ ಯಾವುದೇ ಸಂಶಯ ಬೇಡ. ಕಳೆದೆರಡು ವರ್ಷದಲ್ಲಿ ಚಿನ್ನದ ಬೆಲೆ ಶೇ.150 ರಿಂದ 200 ರವರೆಗೂ ಅಧಿಕವಾಗಿದೆ. ಖರೀದಿ ಕಡಿಮೆಯಾದರೆ ಮಾತ್ರ ಚಿನ್ನದ ದರದಲ್ಲಿ ಇಳಿಕೆಯಾಗಲು ಸಾಧ್ಯ. ಆದ್ದರಿಂದಲೇ ಚಿನ್ನ ಖರೀದಿ ಮುಂದೂಡುವಂತೆ ಪ್ರಧಾನಿ ಕರೆ ನೀಡಿದ್ದಾರೆ.
ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬ ಮುನ್ಸೂಚನೆ ದೊರೆತಿದ್ದರಿಂದಲೇ ಕೇಂದ್ರ ಸರ್ಕಾರ ಚಿನ್ನದ ಶೇಖರಣೆಗೆ ಆದ್ಯತೆ ನೀಡಿತು. ನಮ್ಮಲ್ಲಿ ಪ್ರಸ್ತುತ 690 ಬಿಲಿಯನ್ ಡಾಲರ್ ವಿದೇಶಿ ವಿನಿಮಯವಿದೆ.
ಒಂದು ಡಾಲರ್‌ಗೆ 95 ರು. ಮೌಲ್ಯವಿದೆ. ನಾವು ಆಮದು ಪ್ರಮಾಣ ಹೆಚ್ಚಿಸುತ್ತಾ ಹೋದರೆ ರುಪಾಯಿ ಮೌಲ್ಯ ಡಾಲರ್ ಎದುರು 105 ರಿಂದ 110 ರು. ಆಗುತ್ತದೆ. ಈ ಕುಸಿತ ವಿದೇಶಿ ವಿನಿಮಯದ ಮೇಲೆ ಭಾರೀ ಹೊಡೆತ ನೀಡಲಿದ್ದು, ಔಷಧಿ ಸೇರಿ ಅಗತ್ಯ ವಸ್ತುಗಳಿಗೂ ಅಧಿಕ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.