newsics.com/ನ್ಯೂಸಿಕ್ಸ್
ನವದೆಹಲಿ: ಕೇಂದ್ರ ಸರ್ಕಾರವು ಆಮದು ಸುಂಕವನ್ನು ಶೇ. 10ಕ್ಕೆ ಹೆಚ್ಚಿಸಿದ್ದು, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನ ಮತ್ತು ಬೆಳ್ಳಿ ಇನ್ನು ಮುಂದೆ ದುಬಾರಿಯಾಗಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಆಭರಣಗಳ ಬೆಲೆ ಮತ್ತಷ್ಟು ಏರಿಕೆಯಾಗುವುದು ಖಚಿತವಾಗಿದೆ.
https://youtube.com/shorts/wvfyhGYwVVw?si=koK0hviI-H0dDOsr
ಈ ಹೊಸ ಸುಂಕದ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಚಿನ್ನದ ಮೇಲಿನ ಮೂಲ ಆಮದು ಸುಂಕವು ಕಡಿಮೆ ಇತ್ತು, ಆದರೆ ಈಗ ಅದನ್ನು ಶೇ. 10ಕ್ಕೆ ನಿಗದಿಪಡಿಸಲಾಗಿದೆ. ಬೆಳ್ಳಿಯ ಮೇಲಿನ ಸುಂಕವನ್ನೂ ಸಹ ಇದೇ ಮಟ್ಟಕ್ಕೆ ಏರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಮತ್ತು ವ್ಯಾಪಾರ ಕೊರತೆ ಹೆಚ್ಚುತ್ತಿರುವುದರಿಂದ, ಚಿನ್ನದ ಆಮದನ್ನು ನಿಯಂತ್ರಿಸಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ಆಮದು ಸುಂಕ ಹೆಚ್ಚಳವಾದರೆ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು 1,500 ರಿಂದ 2,500 ರೂಪಾಯಿಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದೆ.
ಕೇವಲ ಬಂಗಾರ ಮಾತ್ರವಲ್ಲದೆ, ಬೆಳ್ಳಿಯ ಆಮದು ಕೂಡ ಕಷ್ಟವಾಗುವುದರಿಂದ ಬೆಳ್ಳಿ ಆಭರಣ ಮತ್ತು ವಸ್ತುಗಳ ಬೆಲೆ ಏರಿಕೆಯಾಗಲಿದೆ.
https://www.newsics.com/2026/05/13/vijays-ordeal-today-motion-of-confidence-sought-in-session/