Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ
ಪ್ರಮುಖಮನರಂಜನೆ

ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ

Share
1 Min Read
SHARE

newsics.com/ನ್ಯೂಸಿಕ್ಸ್

ಕೊನೆಗೂ ತಮಿಳುನಾಡು ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್​​ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದೆ. TVK ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಸಂಪಾದಿಸಿದ ಹಿನ್ನೆಲೆ, ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾಳೆ ಚೆನ್ನೈನ ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 10 ಗಂಟೆಗೆ ಸಿಎಂ ಆಗಿ ವಿಜಯ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯ್​ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ವಿಜಯ್ ಹಿರಿಯ ಟಿವಿಕೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ವಿದುತಲೈ ಚಿರತೈಗಲ್ ಕಚ್ಚಿ (VCK), ಭಾರತೀಯ ಕಮ್ಯುನಿಸ್ಟ್ ಪಕ್ಷ (CPI), ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ ನಂತರ ಕಗ್ಗಂಟಾಗಿದ್ದ ಸರ್ಕಾರ ರಚನೆಯ ದಾರಿ ಸುಗಮವಾಗಿತ್ತು. 59 ವರ್ಷಗಳ ಬಳಿಕ ದ್ರಾವಿಡ ರಾಜಕೀಯೇತರ ನಾಯಕನೊಬ್ಬ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವುದು ವಿಶೇಷವಾಗಿದ್ದು, ವಿಜಯ್ ಮೊದಲ ದ್ರಾವಿಡೇತರ ಸಿಎಂ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.

ಏಪ್ರಿಲ್ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಆದರೆ ಈಗ ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಬೆಂಬಲದಿಂದ ಮೈತ್ರಿಕೂಟದ ಬಲ 120ಕ್ಕೆ ಏರಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಒಂದು ಸ್ಥಾನ ತ್ಯಜಿಸಬೇಕಿರುವುದರಿಂದ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್‌ನ 5 ಶಾಸಕರು ಹಾಗೂ ಸಿಪಿಐ, ಸಿಪಿಐ(ಎಂ), ವಿಟಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ವಿಜಯ್​​ರನ್ನು ಬೆಂಬಲಿಸಿದ್ದಾರೆ.

‘ರಾಷ್ಟ್ರಪತಿ ಆಡಳಿತ ತಪ್ಪಿಸಲು ಬೆಂಬಲ’
ಈ ನಡುವೆ ಟಿವಿಕೆಗೆ ಬೆಂಬಲ ಘೋಷಣೆ ಮಾಡಿರುವ ಬಗ್ಗೆ ಚೆನ್ನೈನಲ್ಲಿ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಂದ ವಿಜಯ್​ಗೆ ಅಧಿಕಾರ ತಪ್ಪಿತೆಂಬ ಅಪವಾದ ಬರಬಾರದು. ಅಲ್ಲದೆ ರಾಷ್ಟ್ರಪತಿ ಆಡಳಿತ ತಪ್ಪಿಸಬೇಕಿರುವ ಕಾರಣ ವಿಜಯ್​​ಗೆ ಭೇಷರತ್​​ ಬೆಂಬಲ ಘೋಷಿಸಿದ್ದೇವೆ ಎಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ರಾತ್ರೋರಾತ್ರಿ ಮಾಯವಾದ ಜೋಡೆತ್ತು! ಪೊಲೀಸರ ಮೊರೆ ಹೋದ ರೈತ

TAGGED:Vijay to take oath as Tamil Nadu CM tomorrow
Share This Article
Facebook Twitter Copy Link Print
Previous Article ರಾತ್ರೋರಾತ್ರಿ ಮಾಯವಾದ ಜೋಡೆತ್ತು! ಪೊಲೀಸರ ಮೊರೆ ಹೋದ ರೈತ
Next Article ಪ್ರಮಾಣವಚನಕ್ಕೂ ಮುನ್ನ ದಳಪತಿ ವಿಜಯ್ ಈ ಒಂದು ಕೆಲಸ ಮಾಡಬೇಕೆಂದ ರಾಖಿ ಸಾವಂತ್

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಮನರಂಜನೆ

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read
ಪ್ರಮುಖಕರ್ನಾಟಕಮನರಂಜನೆ

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪ್ರಮುಖದೇಶವಿದೇಶ

FIFA World Cup 2026 ಫಿಫಾ ವಿಶ್ವಕಪ್ ಫೈನಲ್; ಜುಲೈ 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?