Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Bengal Politics: ಮಮತಾ ಬ್ಯಾನರ್ಜಿ ಸುಪ್ರೀಂ ಮೊರೆ! ಸುವೇಂದು ಪ್ರಮಾಣವಚನ ಸಮಾರಂಭಕ್ಕೆ ಬ್ರೇಕ್​?
ದೇಶಪ್ರಮುಖ

Bengal Politics: ಮಮತಾ ಬ್ಯಾನರ್ಜಿ ಸುಪ್ರೀಂ ಮೊರೆ! ಸುವೇಂದು ಪ್ರಮಾಣವಚನ ಸಮಾರಂಭಕ್ಕೆ ಬ್ರೇಕ್​?

Share
2 Min Read
SHARE

newsics.com/ನ್ಯೂಸಿಕ್ಸ್

ಪಶ್ಚಿಮ ಬಂಗಾಳ ರಾಜಕೀಯದಲ್ಲಿ  ದೊಡ್ಡ ಗೊಂದಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡ ನಂತರವೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರ 15 ವರ್ಷಗಳ ಆಡಳಿತಕ್ಕೆ ತೆರೆ ಎಳೆದಿವೆ.

https://youtube.com/shorts/gjYZnQ_VPsc?si=qVOf4mHBsp6RN8ZV
ಅತ್ತ ಬಿಜೆಪಿ ಭಾರೀ ಬಹುಮತದಿಂದ ಗೆದ್ದು, ಮೇ 9 ರಂದು ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಬಂಗಾಳ ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174(2)(ಬಿ) ವಿಧಿ ಬಳಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ಮಮತಾ ಬ್ಯಾನರ್ಜಿ ಅವರ ಮುಂದಿನ ನಡೆಯ ಮೇಲೆ ನೆಟ್ಟಿದೆ.

 

ಮಮತಾ  ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಕಾಲಿಘಾಟ್‌ನಲ್ಲಿ ನಡೆದ ಸಭೆಯಲ್ಲಿ ಅವರು ಈ ಚುನಾವಣೆಯನ್ನು ‘ಕದ್ದ ಜನಾದೇಶ’ ಎಂದು ಕರೆದಿದ್ದಾರೆ. ಚುನಾವಣಾ ಪ್ರಕ್ರಿಯೆ ವಂಚನೆಯಿಂದ ಕೂಡಿದೆ, ತನಿಖೆ ಪೂರ್ಣಗೊಳ್ಳುವವರೆಗೂ ನಾನು ಅಧಿಕಾರ ತೊರೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಬಿಜೆಪಿ ನನನ್ನು ‘ವಜಾಗೊಳಿಸಲಿ’ ಎಂದು ಅವರು ಸವಾಲು ಹಾಕಿದ್ದಾರೆ. ಅವರ ಈ ಹಠಮಾರಿ ನಿಲುವಿನಿಂದ ಬಂಗಾಳದಲ್ಲಿ ಅಪರೂಪದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ.

 

ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಹೋದರೆ ಮೇ 9 ರಂದು ನಡೆಯಲಿರುವ ಪ್ರಮಾಣವಚನ ಸಮಾರಂಭವನ್ನು ತಡೆಯಬಹುದಾ? ಕಾನೂನು ತಜ್ಞರ ಅಭಿಪ್ರಾಯದಲ್ಲಿ, ನ್ಯಾಯಾಲಯವು ಸಾಮಾನ್ಯವಾಗಿ ಜನರು ನೀಡಿದ ಸ್ಪಷ್ಟ ಬಹುಮತದ ಮೇಲೆ ಹಸ್ತಕ್ಷೇಪ ಮಾಡುವುದಿಲ್ಲ. ಬಿಜೆಪಿ ಬಳಿ 207 ಶಾಸಕರ ಬೆಂಬಲವಿದ್ದರೆ, ಸರ್ಕಾರ ರಚನೆ ಪ್ರಕ್ರಿಯೆಯನ್ನು ನಿಲ್ಲಿಸುವ ಸಾಧ್ಯತೆ ಕಡಿಮೆ. ಆದರೆ ಯಾವುದೇ ಗಂಭೀರ ಸಾಂವಿಧಾನಿಕ ಉಲ್ಲಂಘನೆ ಅಥವಾ ವಂಚನೆಯ ಸ್ಪಷ್ಟ ಪುರಾವೆಗಳು ಇದ್ದರೆ, ನ್ಯಾಯಾಲಯ ತಾತ್ಕಾಲಿಕ ಯಥಾಸ್ಥಿತಿ ಆದೇಶಿಸಬಹುದು.

 

ಮಮತಾ ಬ್ಯಾನರ್ಜಿ ಕೇವಲ ನ್ಯಾಯಾಲಯಕ್ಕೆ ಹೋಗುವ ಮಾತು ಅಷ್ಟೇ ಅಲ್ಲ, ತಮ್ಮ ವಕೀಲ ವೃತ್ತಿಯನ್ನು ಪುನರಾರಂಭಿಸುವ ಸೂಚನೆಯನ್ನೂ ನೀಡಿದ್ದಾರೆ. ದಿ ಗಾರ್ಡಿಯನ್ ವರದಿಯ ಪ್ರಕಾರ, ಅವರು ಈ ಸೋಲನ್ನು ‘ಬ್ಲಾಕ್​ ಡೇ’ ಎಂದು ಜನರ ಮುಂದೆ ಇಟ್ಟು, ಜನರ ಬೆಂಬಲಕ್ಕೆ ಯತ್ನಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಭದ್ರತಾ ಪಡೆಗಳ ಪಾತ್ರವನ್ನು ಪ್ರಶ್ನಿಸಲು ಅವರು ಯೋಜಿಸುತ್ತಿದ್ದಾರೆ.

 

ಮೇ 9 ರಂದು ಪ್ರಮಾಣವಚನ ನಡೆಯಲು ರಾಜಭವನ ಸಜ್ಜಾಗಿದೆ. ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ನಾಯಕರು ಕೋಲ್ಕತ್ತಾಗೆ ಬಂದಿದ್ದಾರೆ. ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿ ಜಯೋತ್ಸವದ ಸಿದ್ಧತೆ ಇದೆ. ಆದರೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ತುರ್ತು ಆದೇಶ ಬಂದರೆ, ಈ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಕುತೂಹಲ ಜನರಲ್ಲಿ ಇದೆ.

ಈ ಹೋರಾಟದಲ್ಲಿ ಸಾಂವಿಧಾನಿಕ ಘನತೆಯ ಪ್ರಶ್ನೆಯೋ, ಅಥವಾ ರಾಜಕೀಯ ಅಡಚಣೆ ಸೃಷ್ಟಿಸುವ ಯುಕ್ತಿಯೋ ಎಂಬ ಚರ್ಚೆಯೂ ನಡೆಯುತ್ತಿದೆ.

https://www.newsics.com/2026/05/09/petrol-diesel-prices-likely-to-increase-by-may-15/

TAGGED:Mamata Banerjee moves Supreme Court! Will Suvendu's oath-taking ceremony be interrupted?
Share This Article
Facebook Twitter Copy Link Print
Previous Article Petrol Diesel Price Hike ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆ ಬಿಸಿ : ಮೇ.15ರ ಒಳಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ
Next Article Toe Hair ಕಾಲ್ಬೆರಳುಗಳ ಮೇಲೆ ಬೆಳೆಯುವ ಕೂದಲಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?