newsics.com/ನ್ಯೂಸಿಕ್ಸ್
ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಚಹಾ ಕುಡಿಯುವುದು ಹಲವರ ಅಭ್ಯಾಸ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಭಾವನೆ. ಆದರೆ ಈ ಚಹಾವೇ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗುತ್ತಿದೆ ಎಂದು ತಜ್ಞರು ಈಗ ಎಚ್ಚರಿಸುತ್ತಿದ್ದಾರೆ.
ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ ಸೇವಿಸಬೇಕು. ಅದರ ನಂತರ ಚಹಾ ಕುಡಿಯುವುದರಿಂದ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಹೇಳುತ್ತವೆ. ನೀವು ಕೂಡ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ. ಈ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದರೆ ನೀವೆಂದೂ ಈ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಬ್ಯಾಕ್ಟೀರಿಯಾದ ಬೆಳವಣಿಗೆ: ಕೋಣೆಯ ಉಷ್ಣಾಂಶದಲ್ಲಿ ಚಹಾವನ್ನು ದೀರ್ಘಕಾಲದವರೆಗೆ ಬಿಡುವುದರಿಂದ ಅದರೊಳಗೆ ಬ್ಯಾಕ್ಟೀರಿಯಾಗಳು ದ್ವಿಗುಣವಾಗಲು ಅನುವು ಮಾಡಿಕೊಡುತ್ತದೆ. ಮತ್ತೆ ಬಿಸಿ ಮಾಡಿದರೂ ಸಹ, ಚಹಾದಲ್ಲಿರುವ ಅನೇಕ ಹಾನಿಕಾರಕ ಅಂಶಗಳು ಸಂಪೂರ್ಣವಾಗಿ ಹೊರಹಾಕಲ್ಪಡುವುದಿಲ್ಲ.
ಪೋಷಕಾಂಶಗಳ ಸವಕಳಿ: ಚಹಾದಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಹಾಗೂ ಪ್ರಯೋಜನಕಾರಿ ಸಂಯುಕ್ತಗಳು ಮತ್ತೆ ಮತ್ತೆ ಕುದಿಸುವುದರಿಂದ ಕಡಿಮೆಯಾಗುತ್ತವೆ. ಚಹಾದ ಪರಿಮಳ ಮಾತ್ರ ಹೊಂದಿರುತ್ತದೆ.
ರುಚಿ & ಸುವಾಸನೆಯ ಕ್ಷೀಣತೆ: ಹಲವಾರು ಬಾರಿ ಮತ್ತೆ ಮತ್ತೆ ಬಿಸಿ ಮಾಡಿದ ಚಹಾವು ಕಹಿ ಮತ್ತು ಹಳಸಿದ ರುಚಿಯನ್ನು ಪಡೆಯುತ್ತದೆ. ಅದು ಸಂಪೂರ್ಣವಾಗಿ ತನ್ನ ಮೂಲ ತಾಜಾತನವನ್ನು ಕಳೆದುಕೊಳ್ಳುತ್ತದೆ.
ಹೊಟ್ಟೆಯ ಕಾಯಿಲೆಗಳ ಅಪಾಯ: ಬೆಳಿಗ್ಗೆ ಮಾಡಿದ ಚಹಾವನ್ನು ಪದೇ ಪದೇ ಬಿಸಿ ಮಾಡಿ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಕುಡಿಯುವುದರಿಂದ ವಿವಿಧ ಆರೋಗ್ಯದ ಸಮಸ್ಯೆ ಕಾಡಬಹುದು. ಈ ಚಹಾದಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ಬೆಳೆಯುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಹೊಟ್ಟೆಯಲ್ಲಿ ಜಠರದ ಲೋಳೆಪೊರೆ ಕಿರಿಕಿರಿಗೊಳ್ಳಬಹುದು. ಗ್ಯಾಸ್ಟ್ರಿಕ್, ಆಮ್ಲೀಯತೆ, ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ಯೆ ಹಾಗೂ ಜಠರದುರಿತ ಇಲ್ಲವೇ ಆಮ್ಲದ ಹಿಮ್ಮುಖ ಹರಿವಿನಂತಹ ಸಮಸ್ಯೆಗಳು ಕಾಡುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಯಕೃತ್ತು ದುರ್ಬಲ: ಯಕೃತ್ತು ದುರ್ಬಲವಾಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಕೊಬ್ಬಿನ ಯಕೃತ್ತು ಅಥವಾ ಹೆಪಟೈಟಿಸ್‌ನಂತಹ ಸಮಸ್ಯೆಗಳಿದ್ದರೆ, ಈ ರೀತಿಯ ಚಹಾವನ್ನು ಕುಡಿಯುವುದರಿಂದ ತೊಂದರೆ ಉಂಟಾಗುತ್ತದೆ ಈ ಸಮಯದಲ್ಲಿ ಆಮ್ಲೀಯತೆಯು ಹೆಚ್ಚು ತೊಂದರೆ ನೀಡುತ್ತದೆ,