newsics.com/ನ್ಯೂಸಿಕ್ಸ್
ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮುಂಬೈನಲ್ಲಿ ಅಬ್ದುಲ್ಲಾ ದಕೋಡಿಯಾ ಕುಟುಂಬ ತಡ ರಾತ್ರಿ ಕಲ್ಲಂಗಡಿ ಹಣ್ಣು ತಿಂದು ಬೆಳಗ್ಗೆ ಮೃತಪಟ್ಟ ಘಟನೆ ಕೋಲಾಹಲಕ್ಕೆ ಕಾರಣಾಗಿತ್ತು. ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರವಲ್ಲ, ಈ ಸಾವಿನ ಹಿಂದೆ ವಿಷದ ಅಂಶ ಇದೆ ಅನ್ನೋ ಮಾಹಿತಿಗಳು ಬಯಲಾಗಿದೆ.
https://www.newsics.com/2026/05/02/price-hike-hits-auto-drivers-too-auto-gas-price-hiked-by-rs-5-73/
ಅಬ್ದುಲ್ಲಾ ದಕೋಡಿಯಾ ಕುಟುಂಬ ಕಲ್ಲಂಗಣಿ ಹಣ್ಣು ತಿಂದು ಸಾವನ್ನಪ್ಪಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣಾಗಿತ್ತು. ಸದ್ಯ ಫೊರೆನ್ಸಿಕ್ ಪರೀಕ್ಷೆ ಬೆರೆ ಕತೆ ಹೇಳುತ್ತಿದೆ. ಮೃತರ ದೇಹದ ಮೆದುಳು, ಹೃದಯ ಸೇರಿದಂತೆ ಕೆಲ ಭಾಗಗಳು ಹಸಿರು ಬಣ್ಣಕ್ಕೆ ತಿರುಗಿದೆ. ಈ ವರದಿಯನ್ನು ವೈದ್ಯರ ವಿಶ್ಲೇಶಿಸಿದ್ದಾರೆ. ಫುಡ್ ಪಾಯ್ಸನ್‌ನಿಂದ ಈ ರೀತಿ ಆಗಲು ಸಾಧ್ಯವಿಲ್ಲ. ಇದು ಪ್ರಮುಖ ವಿಷಕಾರಿ ವಸ್ತು ದೇಹದೊಳಕ್ಕೆ ಸೇರಿದೆ ಎಂಬ ಮಾಹಿತಿಗಳು ಬಯಲಾಗಿದೆ.
ಅಬ್ದುಲ್ಲಾ ದಕೋಡಿಯಾ ದೇಹದಲ್ಲಿನ ವಿಷಕಾರಿ ಅಂಶಗಳ ಕುರಿತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದೆ. ಈ ವೈದ್ಯಕೀಯ ವರದಿಯ ಪ್ರಾಥಮಿಕ ಮಾಹಿತಿ ಪ್ರಕಾರ ನೋವಿನ ಮಾತ್ರೆ(ಮೊರ್ಫೈನ್), ಪೊಟೆಂಟ್ ಪೈನ್‌ಕಿಲ್ಲರ್ಸ್ ಸೇರಿದಂತೆ ಕೆಲ ಅಪಯಕಾರಿ ಅಂಶಗಳು ಅಬ್ದುಲ್ಲಾ ದಕೋಡಿಯಾ ದೇಹದಲ್ಲಿ ಪತ್ತೆಯಾಗಿದೆ ಅನ್ನೋ ವರದಿ ಬಹಿರಂಗವಾಗಿದೆ.
ಇದೇ ವೇಳೆ ರಾಜ್ಯ ಆಹಾರ ಸಚಿವಾಲಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತ ವರದಿ, ಪರೀಕ್ಷೆಗಳ ವರದಿ ತರಿಸಿಕೊಂಡಿದ್ದಾರೆ. ಇತ್ತ ಈ ಸಾವಿನ ಹಿಂದೆ ನೇರವಾಗಿ ಕಲ್ಲಂಗಡಿ ಹಣ್ಣ ಹಾಗೂ ಅದರಲ್ಲಿನ ವಿಷಕಾರಕ ಅಂಶಗಳು ಕಾಣುತ್ತಿಲ್ಲ ಎಂದಿದ್ದಾರೆ. ಅಧಿಕೃತ ವರದಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
https://www.newsics.com/2026/05/02/price-hike-hits-auto-drivers-too-auto-gas-price-hiked-by-rs-5-73/