Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Summer Health Tips ಬಿಸಿಲ ಬೇಗೆ ತಣಿಸಿಕೊಳ್ಳಲು ಈ ತಂಪು ಪಾನೀಯಗಳನ್ನು ಸೇವಿಸಿ
ಪ್ರಮುಖಆರೋಗ್ಯ

Summer Health Tips ಬಿಸಿಲ ಬೇಗೆ ತಣಿಸಿಕೊಳ್ಳಲು ಈ ತಂಪು ಪಾನೀಯಗಳನ್ನು ಸೇವಿಸಿ

Share
2 Min Read
SHARE

newsics.com/ನ್ಯೂಸಿಕ್ಸ್

ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಎಲ್ಲರ ಬಯಕೆ. ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿ ಸುವಂಥ ಒಂದಿಷ್ಟು ಪೇಯಗಳು ಇಲ್ಲಿವೆ.

https://youtube.com/shorts/xzgXqaAsbcA?si=TkhVxPE1WLxdWyg8

ಸಬ್ಜಾ ಬೀಜಗಳು : ರಾತ್ರಿ ಇಡೀ ನೀರಿನಲ್ಲಿ ನೆನೆಸಿದ ಸಬ್ಜಾ ಬೀಜಗಳನ್ನು ಮರುದಿನ ಬೆಳಿಗ್ಗೆ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿ.

 

ನೈಸರ್ಗಿಕ ತಂಪು ಪಾನೀಯ: ಗಸಗಸೆ, ಶ್ರೀಗಂಧ ಅಥವಾ ಮಲ್ಲಿಗೆ ಹೂವುಗಳನ್ನು ನೀರಿನಲ್ಲಿ ನೆನೆಸಿ, ಆ ನೀರನ್ನು ಕುಡಿಯುವುದರಿಂದ ದೇಹಕ್ಕೆ ನೈಸರ್ಗಿಕ ತಂಪು ದೊರೆಯುತ್ತದೆ ಮತ್ತು ಬಿಸಿಲಿನಿಂದ ಉಂಟಾಗುವ ಆಯಾಸ ದೂರವಾಗುತ್ತದೆ.

ಬಿಳಿ ಈರುಳ್ಳಿ: ಬೇಸಿಗೆಯಲ್ಲಿ ಬಿಳಿ ಈರುಳ್ಳಿ ಸೇವನೆಯು ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದ್ರವಾಹಾರಕ್ಕೆ ಆದ್ಯತೆ: ಕೇವಲ ನೀರು ಮಾತ್ರವಲ್ಲದೆ ಮಜ್ಜಿಗೆ, ಎಳನೀರು ಮತ್ತು ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.

ಹೆಸರುಕಾಳಿನ ಎಸರು: ಹೆಸರು ಕಾಳನ್ನು ಆರೆಂಟು ತಾಸುಗಳ ಕಾಲ ನೆನೆಸಿ, ಸ್ವಲ್ಪ ಏಲಕ್ಕಿಯೊಂದಿಗೆ ರುಬ್ಬಿಕೊಳ್ಳಿ. ತಿಳಿಯಾದ ಎಸರು ಬೇಕೆಂದರೆ ರುಬ್ಬಿದ್ದನ್ನು ಶೋಧಿಸಿಕೊಳ್ಳಿ. ಇದನ್ನೆ ರುಚಿಗೆ ಬೇಕಾದಷ್ಟು ತಂಪಾದ ಹಾಲು, ಏಲಕ್ಕಿ, ಬೆಲ್ಲ ಸೇರಿಸಿಕೊಂಡು ಸವಿಯಬಹುದು

ರಾಗಿ ತಿಳಿ: ಯಾವುದೇ ಧಾನ್ಯಗಳ ತಿಳಿಗಳು ದೇಹಕ್ಕೆ ತಂಪೆರೆಯುತ್ತವೆ. ಕೇವಲ ರಾಗಿಯೆಂದಲ್ಲ, ಅಕ್ಕಿ, ಗೋದಿ ಮುಂತಾದ ನಿಮ್ಮಿಷ್ಟದ ಯಾವುದೇ ಧಾನ್ಯಗಳ ತಿಳಿಯನ್ನು ಈ ದಿನಗಳಲ್ಲಿ ಸೇವಿಸುವುದರಿಂದ ದಾಹವೂ ನೀಗುತ್ತದೆ, ದೇಹಕ್ಕೆ ಬೇಕಾದ ಪೋಷಣೆಯೂ ಲಭಿಸುತ್ತದೆ. ತಿನ್ನುವುದೇ ಬೇಡ ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಈ ಮೂಲಕ ಕಾಪಾಡಿಕೊಳ್ಳಬಹುದು.

ಹಣ್ಣಿನ ರಸಗಳು: ಕಲ್ಲಂಗಡಿಯಿಂದ ಹಿಡಿದು, ಅನಾನಸ್‌, ಕಿತ್ತಳೆ, ದ್ರಾಕ್ಷಿ ಮುಂತಾದ ಯಾವುದೇ ರಸಭರಿತ ಹಣ್ಣುಗಳನ್ನು ಜ್ಯೂಸರ್‌ಗೆ ಹಾಕಿದರೆ ಶುದ್ಧ ಹಣ್ಣಿನ ರಸ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಕೃತಕ ಬಣ್ಣ, ಪರಿಮಳದ ಜ್ಯೂಸ್‌ ಖರೀದಿಸುವ ಬದಲು, ಇಂಥ ಶುದ್ಧ ಹಣ್ಣಿನ ರಸಗಳು ಆರೋಗ್ಯಕ್ಕೆ ಬೇಕಾದ ಆರೈಕೆಯನ್ನು ನೀಡುತ್ತವೆ.

https://www.newsics.com/2026/05/02/plane-crash-5-people-including-pickleball-players-die/

TAGGED:Drink these cool drinks to beat the heat
Share This Article
Facebook Twitter Copy Link Print
Previous Article ವಿಮಾನ ಪತನ: ಪಿಕಲ್ ಬಾಲ್ ಆಟಗಾರರು ಸೇರಿ 5 ಜನ ಸಾವು
Next Article ಪತ್ನಿಯ ಅಕ್ರಮ ಸಂಬಂಧ: ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮ*ಹ*ತ್ಯೆ

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?