newsics.com/ನ್ಯೂಸಿಕ್ಸ್
ಮೇ 1, 2026 ರಿಂದ ಜಾರಿಗೆ ಬರುವಂತೆ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವಾರ್ಷಿಕ ಶುಲ್ಕ ಮತ್ತು ತಡವಾದ ಪಾವತಿ ಶುಲ್ಕಗಳಲ್ಲಿ ಈ ಬದಲಾವಣೆಗಳು ಅನ್ವಯವಾಗಲಿವೆ.
https://youtube.com/shorts/4WeDGkWkv1E?si=V5-kEiXb0VaUEmaX
ಬದಲಾದ ಪ್ರಮುಖ ನಿಯಮಗಳು ಇಲ್ಲಿವೆ:
1. ವಾರ್ಷಿಕ ಶುಲ್ಕ ಮನ್ನಾ ಮಿತಿ ಹೆಚ್ಚಳ
ಎಸ್‌ಬಿಐ ಬಿಪಿಸಿಎಲ್ (SBI BPCL) ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇದು ನಿಜಕ್ಕೂ ಬೇಸರದ ಸಂಗತಿ.
ಹಳೆಯ ನಿಯಮ: ವರ್ಷಕ್ಕೆ 50,000 ರೂ. ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ವಿನಾಯಿತಿ ಸಿಗುತ್ತಿತ್ತು.
ಹೊಸ ನಿಯಮ: ಇನ್ಮುಂದೆ ವಾರ್ಷಿಕ ಶುಲ್ಕ ಮನ್ನಾ ಪಡೆಯಲು ಕನಿಷ್ಠ 1 ಲಕ್ಷ ರೂ. ಖರ್ಚು ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಗ್ರಾಹಕರು 499 ರೂ. ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
2. ಹೆಚ್ಚಾದ ಲೇಟ್ ಪೇಮೆಂಟ್ ಚಾರ್ಜ್
ಬಾಕಿ ಹಣ ಪಾವತಿಸಲು ತಡವಾದರೆ ವಿಧಿಸುವ ಶುಲ್ಕವನ್ನು ಕೂಡ ಬ್ಯಾಂಕ್ ಹೆಚ್ಚಿಸಿದೆ:
ಈ ಹಿಂದೆ 500 ರೂ. ವರೆಗಿನ ಬಾಕಿಗೆ ಯಾವುದೇ ಲೇಟ್ ಫೀ ಇರಲಿಲ್ಲ. ಆದರೆ ಈಗ 100 ರೂ. ಗಿಂತ ಹೆಚ್ಚಿನ ಬಾಕಿ ಇದ್ದರೆ 100 ರೂ. ಶುಲ್ಕ ವಿಧಿಸಲಾಗುತ್ತದೆ.
500 ರೂ. ನಿಂದ 1,000 ರೂ. ವರೆಗಿನ ಬಾಕಿ ಪಾವತಿಯ ಮೇಲೆ ವಿಧಿಸುತ್ತಿದ್ದ 400 ರೂ. ಶುಲ್ಕವನ್ನು ಈಗ 500 ರೂ. ಗೆ ಏರಿಕೆ ಮಾಡಲಾಗಿದೆ.
ಮೇ ತಿಂಗಳಿನಿಂದ ಕೇವಲ ಗ್ಯಾಸ್ ಸಿಲಿಂಡರ್ ಬೆಲೆ ಅಥವಾ ಆನ್‌ಲೈನ್ ಗೇಮಿಂಗ್ ನಿಯಮಗಳು ಮಾತ್ರವಲ್ಲದೆ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಇಂತಹ ಬ್ಯಾಂಕಿಂಗ್ ನಿಯಮಗಳೂ ಬದಲಾಗಿವೆ.