newsics.com/ನ್ಯೂಸಿಕ್ಸ್
ಬೆಂಗಳೂರು : ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪದ ಬ್ಯಾನರ್ ಗೋದಾಮಿನಲ್ಲಿ ಬೆಂಕಿ ಹತ್ತಿಕೊಂಡು ಸುಮಾರು 50 ಯುವತಿಯರು ಪಿಜಿಯಿಂದ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
https://youtube.com/shorts/eOoYZp9a9F0?si=CP6V90gKWCTFTFCS
ಬೆಂಕಿ ಗೋದಾಮಿಗೆ ಹತ್ತಿಕೊಂಡು ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡಕ್ಕೂ ವ್ಯಾಪಿಸಲು ಶುರುವಾಗಿತ್ತು. ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿದ ತಕ್ಷಣ, ಪಿಜಿಯಲ್ಲಿ ವಾಸವಿದ್ದ ಯುವತಿಯರು ಪ್ರಾಣದ ಹಂಗು ತೊರೆದು ಕಟ್ಟಡದಿಂದ ಹೊರಗೆ ಜಿಗಿದು ಓಡಿದ್ದಾರೆ.
ಕೆಲವರು ಜೀವ ಉಳಿಸಿಕೊಳ್ಳಲು ಜಿಗಿದು ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ.
https://www.newsics.com/2026/04/28/a-man-went-to-the-bank-carrying-his-dead-sisters-skeleton/