newsics.com/ನ್ಯೂಸಿಕ್ಸ್
ಆಸ್ಪತ್ರೆಯ ಸರಕು ಸಾಗಣೆ ಲಿಫ್ಟ್ ನಲ್ಲಿ ತಲೆ ಸಿಲುಕಿಕೊಂಡಿದ್ದರಿಂದ 50 ವರ್ಷದ ಮಹಿಳಾ ಗುತ್ತಿಗೆ ಉದ್ಯೋಗಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಡಾ. ವಸಂತರಾವ್ ಪವಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://youtube.com/shorts/eOoYZp9a9F0?si=CP6V90gKWCTFTFCS
ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಶಿವಾಜಿ ಅಹಿರೆ, ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಸಾಗಿಸಲು ಬಳಸುವ ಲಿಫ್ಟ್‌ನೊಳಗೆ ಇಣುಕಿ ನೋಡಿದ್ದಾರೆ. ಆ ಸಮಯದಲ್ಲಿ ಲಿಫ್ಟ್ ಇದ್ದಕ್ಕಿದ್ದಂತೆ ಚಲಿಸಿದ್ದರಿಂದ ಅವರ ತಲೆ ಅದರಲ್ಲಿ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ತಲೆ ಬಲವಾಗಿ ಸಿಲುಕಿದ್ದರಿಂದ ಅವರು ಕೆಲ ನಿಮಿಷಗಳ ಕಾಲ ನರಕಯಾತನೆ ಅನುಭವಿಸಿದರು.
ಸಂತ್ರಸ್ತ ಮಹಿಳೆಯನ್ನು ತಕ್ಷಣವೇ ಐಸಿಯು (ICU) ಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ