newsics.com/ನ್ಯೂಸಿಕ್ಸ್
ಕಾಲ ಬದಲಾದಂತೆ ಮೊಬೈಲ್ಗಳು ಕೂಡ ಅಪ್ಡೇಟ್ ಆಗುತ್ತಿವೆ. ನಾನಾ ಬಗೆಯ ಹೊಸ ಹೊಸ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಎಲ್ಲ ಆಂಡ್ರಾಯ್ಡ್ , ಐಫೋನ್ಗಳ ಪ್ರೊಸೆಸರ್, RAM ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್ಫೋನ್ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್‌ಗಳು, ಫೋಲ್ಡರ್ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾತ್ರವಲ್ಲದೆ ಫೋನ್ ಸ್ಟೋರೇಜ್ ಅನ್ನೂ ಫುಲ್ ಮಾಡಿಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ನೀವು ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೂ ಕೂಡ ನಿಮಗೆ ಸ್ಪೇಸ್ ಸಾಕಾಗದೆ ಕಿರಿಕಿರಿ ಆಗುವ ಸಂಭವ ಕೂಡ ಇದೆ. ಫೋನ್ ಸ್ಟೋರೇಜ್ ಸ್ಪೇಸ್ ಉಳಿದಷ್ಟು ನಿಮ್ಮ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸಬಹುದು.ಸ್ಟೋರೇಜ್ ಖಾಲಿ ಮಾಡುವುದು ಹೇಗೆ?
ಇಲ್ಲಿದೆ 5 ಸುಲಭ ಟಿಪ್ಸ್:
1. ಅನಿಗತ್ಯ ಆಪ್‌ಗಳನ್ನು ಡಿಲೀಟ್ ಮಾಡಿ :
ನಮ್ಮ ಫೋನ್‌ನಲ್ಲಿ ನಾವು ತಿಂಗಳುಗಟ್ಟಲೆ ಬಳಸದ ಅನೇಕ ಆಪ್‌ಗಳಿರುತ್ತವೆ. ಇವು ಫೋನ್‌ನ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಮೊದಲು ಅಂತಹ ಅನಗತ್ಯ ಆಪ್‌ಗಳನ್ನು ಗುರುತಿಸಿ ಡಿಲೀಟ್ ಮಾಡಿ.
2. ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ :
ಪ್ರತಿ ಆಪ್ ತನ್ನದೇ ಆದ ‘ಕ್ಯಾಶ್’ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಫೋನ್ ಸೆಟ್ಟಿಂಗ್ಸ್‌ನಲ್ಲಿರುವ ‘ಸ್ಟೋರೇಜ್’ ವಿಭಾಗಕ್ಕೆ ಹೋಗಿ ಈ ಕ್ಯಾಶ್ ಮೆಮೊರಿಯನ್ನು ಕ್ಲಿಯರ್ ಮಾಡುವುದರಿಂದ ಗಣನೀಯ ಪ್ರಮಾಣದ ಜಾಗ ಉಳಿಯುತ್ತದೆ.
3. ವಾಟ್ಸಾಪ್ ಮೀಡಿಯಾ ನಿರ್ವಹಣೆ :
ನಮಗೆ ಬರುವ ಹೆಚ್ಚಿನ ವಿಡಿಯೋ ಮತ್ತು ಫೋಟೋಗಳು ವಾಟ್ಸಾಪ್ ಮೂಲಕವೇ ಬರುತ್ತವೆ. ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ‘Manage Storage’ ಆಯ್ಕೆಗೆ ಹೋಗಿ, ದೊಡ್ಡ ಗಾತ್ರದ ಫೈಲ್‌ಗಳನ್ನು ಮತ್ತು ಅನಗತ್ಯ ವಿಡಿಯೋಗಳನ್ನು ತಕ್ಷಣ ಡಿಲೀಟ್ ಮಾಡಿ.
4. ಗೂಗಲ್ ಫೋಟೋಸ್ ಬಳಸಿ:
ಫೋನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಥವಾ ಕ್ಲೌಡ್ ಸ್ಟೋರೇಜ್‌ಗೆ ಅಪ್‌ಲೋಡ್ ಮಾಡಿ. ಒಮ್ಮೆ ಬ್ಯಾಕಪ್ ಆದ ನಂತರ ಫೋನ್ ಗ್ಯಾಲರಿಯಿಂದ ಅವುಗಳನ್ನು ಡಿಲೀಟ್ ಮಾಡಬಹುದು. ಇದರಿಂದ ಫೋನ್ ಮೆಮೊರಿ ಫ್ರೀ ಆಗುತ್ತದೆ.
5. ಡೌನ್‌ಲೋಡ್ ಫೋಲ್ಡರ್ ಪರಿಶೀಲಿಸಿ:
ನಾವು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಪಿಡಿಎಫ್ ಫೈಲ್‌ಗಳು, ಸಾಂಗ್‌ಗಳು ಮತ್ತು ಡಾಕ್ಯುಮೆಂಟ್‌ಗಳು ಡೌನ್‌ಲೋಡ್ ಫೋಲ್ಡರ್‌ನಲ್ಲಿ ಉಳಿದಿರುತ್ತವೆ. ಕೆಲಸ ಮುಗಿದ ನಂತರ ಇವುಗಳನ್ನು ಡಿಲೀಟ್ ಮಾಡುವುದನ್ನು ಮರೆಯಬೇಡಿ.