Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ashwini vaishnav visit BEML ಬಿಇಎಂಎಲ್‌ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಬುಲೆಟ್ ರೈಲು ಪ್ರಗತಿ ಪರಿಶೀಲನೆ
ಕರ್ನಾಟಕದೇಶಪ್ರಮುಖ

Ashwini vaishnav visit BEML ಬಿಇಎಂಎಲ್‌ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಬುಲೆಟ್ ರೈಲು ಪ್ರಗತಿ ಪರಿಶೀಲನೆ

Share
1 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಘಟಕಕ್ಕೆ ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಭೇಟಿ ನೀಡಿದರು.

ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಹಾಗೂ ಬುಲೆಟ್ ರೈಲಿನ 28 ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.

ಜೊತೆಗೆ ಬಿಇಎಂಎಲ್​​ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಬಿಇಎಂಎಲ್​ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗಕ್ಕಾಗಿ ಬಿಇಎಂಎಲ್​ ಚಾಲಕ ರಹಿತ ಎಂಜಿನ್​​​ ರೈಲು ಕೋಚ್​ಗಳನ್ನು ನಿರ್ಮಿಸುತ್ತಿದೆ. ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್​​ಗಳನ್ನು, ಮೇನಲ್ಲಿ ಓಪನ್ ಮಾಡಲು ಬಿಎಂಆರ್​​ಸಿಎಲ್​​ ತಯಾರಿ ನಡೆಸಿದೆ. ಆದರೆ ಟೆಸ್ಟಿಂಗ್ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ, ಓಪನ್ ‌ಆಗುವುದು ಡೌಟ್ ಎನ್ನಲಾಗುತ್ತಿದೆ.

ಜೂನ್ ಅಥವಾ ಜುಲೈನಲ್ಲಿ ಈ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ. ಪ್ರತಿ ಮಾರ್ಗ ಓಪನ್ ಮಾಡುವ ವೇಳೆ ರೈಲು ಇರುತ್ತಿರಲಿಲ್ಲ, ಆದರೆ ಈ ಬಾರಿ ಪಿಂಕ್ ಲೈನ್​​ಗಾಗಿ ಈಗಾಗಲೇ ಬಿಇಎಂಎಲ್​​ನಿಂದ 5 ರೈಲುಗಳು ತಯಾರಾಗಿವೆ, ಈ ಬಾರಿ ಟೆಸ್ಟಿಂಗ್ ಕೆಲಸ ಮುಗಿಯದ ಹಿನ್ನೆಲೆ, ಮೆಟ್ರೋ ವಿಳಂಬ ಆಗುತ್ತಿದೆ.

ಪಿಂಕ್‌ ಲೈನ್​ಗಾಗಿ ಒಟ್ಟು ಬಿಇಎಂಎಲ್​​ನಲ್ಲಿ 23 ರೈಲುಗಳಿಗೆ ಆರ್ಡರ್ ನೀಡಲಾಗಿದೆ.

ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್​​ಗಳನ್ನು ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳಿವೆ. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​ ಆಗಲಿದೆ ಎನ್ನಲಾಗುತ್ತಿದೆ.

https://x.com/PIBBengaluru/status/2047951441852055622?s=20

https://x.com/PIBBengaluru/status/2047951441852055622?s=20

 

ಮಾನವ ದೇಹವು ಎಷ್ಟು ಶಾಖವನ್ನು ತಡೆದುಕೊಳ್ಳುತ್ತದೆ?

Bride escapes with lover ಪ್ರಿಯಕರನೊಂದಿಗೆ ವಧು‌ ಪರಾರಿ: ಮದುವೆ ಮನೆಯಲ್ಲಿ ಫುಲ್ ಟೆನ್ಶನ್!

 

TAGGED:inspects driverless metro coachesUnion Minister Ashwini Vaishnav visits BEML
Share This Article
Facebook Twitter Copy Link Print
Previous Article ಟಾಕ್ಸಿಕ್’ ಸಿನಿಮಾದ ಬಗ್ಗೆ ನಟ ಯಶ್ ಹೇಳಿದ್ದೇನು?
Next Article ಮದುವೆಯಲ್ಲಿ ಸ್ಟಂಟ್‌ ಮಾಡಲು ಹೋಗಿ ವರನ ಕೈಯಲ್ಲೇ ಸಿಡಿದ ಫೈರ್ ಗನ್ ; ವೈರಲ್ ವಿಡಿಯೋ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?