Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಂಡನನ್ನು ಕೊಲ್ಲಲು 10 ಲಕ್ಷ ಸುಪಾರಿ ಕೊಟ್ಟ ಪತ್ನಿ; ನಡೆದಿದ್ದೇನು?
ಪ್ರಮುಖ

ಗಂಡನನ್ನು ಕೊಲ್ಲಲು 10 ಲಕ್ಷ ಸುಪಾರಿ ಕೊಟ್ಟ ಪತ್ನಿ; ನಡೆದಿದ್ದೇನು?

Share
2 Min Read
SHARE

ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವಿಸಿ, ತಾಳಿಕಟ್ಟಿದ ಪತಿಯನ್ನೇ ಕೊಲೆ ಮಾಡಲು ಹಂತಕರನ್ನು ನೇಮಿಸಿಕೊಂಡ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಪ್ರೊದಟ್ಟೂರಿನಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್​ ಮಾಹಿತಿಯ ಪ್ರಕಾರ, ಪ್ರೊದ್ದಟೂರು ಮಂಡಲದ ಲಿಂಗಾಪುರಂ ಗ್ರಾಮದ ರೈತನೊಬ್ಬ ಕೆಲವು ವರ್ಷಗಳ ಹಿಂದೆ ಪ್ರೊದ್ದಟೂರು ಮೂಲದ ಮಹಿಳೆಯನ್ನು ವಿವಾಹವಾದರು.

ದಂಪತಿಗೆ ಮೂವರು ಮಕ್ಕಳಿದ್ದಾರೆ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೀಗಿರುವಾಗ, ಐದು ತಿಂಗಳ ಹಿಂದಷ್ಟೇ ಪತ್ನಿ, ಚಿಕಿತ್ಸೆಗಾಗಿ ಪ್ರೊದ್ದಟೂರಿನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಉದ್ಯೋಗಿಯನ್ನು ಭೇಟಿಯಾದರು. ಈ ಭೇಟಿ ಪರಿಚಯವಾಗಿ, ದಿನಗಳು ಕಳೆದಂತೆ ಅನೈತಿಕ ಸಂಬಂಧವೂ ಬೆಳೆಯಿತು.
ಪತ್ನಿ ಮತ್ತು ಆಕೆಯ ಗೆಳೆಯ, ತಮ್ಮ ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ, ಹೇಗಾದರೂ ಮಾಡಿ ಗಂಡನನ್ನು ಕೊಲ್ಲಬೇಕೆಂದರು ಪ್ಲಾನ್​ ಮಾಡಿದರು. ತನಗೆ ಕೆಲವು ರೌಡಿಗಳ ಪರಿಚಯವಿದೆ ಮತ್ತು ಅವರಿಗೆ ಸ್ವಲ್ಪ ಹಣ ನೀಡಿದರೆ ಕೆಲಸ ಮುಗಿಸುತ್ತಾರೆ ಎಂದು ಆಕೆಯ ಗೆಳೆಯ ಹೇಳಿದ್ದ. ಇದನ್ನು ಕೇಳಿದ ಮಹಿಳೆ, ತನ್ನ ಗೆಳಯನಿಗೆ ದೊಡ್ಡ ಮೊತ್ತದ ಚಿನ್ನ ಮತ್ತು ಹಣವನ್ನು ಕೊಟ್ಟು, ಗಂಡನನ್ನು ಮುಗಿಸಲು ಹೇಳಿದಳು.
ಇದಾದ ಬಳಿಕ ಆಕೆಯ ಗೆಳೆಯ, ರಾಜುಪಾಲಂನಲ್ಲಿರುವ ರೌಡಿಶೀಟರ್ ಒಬ್ಬನನ್ನು ಸಂಪರ್ಕಿಸಿದನು. ಲಿಂಗಾಪುರದ ವ್ಯಕ್ತಿಯನ್ನು ಕೊಂದರೆ 10 ಲಕ್ಷ ರೂ. ನೀಡುವುದಾಗಿ ಹೇಳಿದನು. ಅಲ್ಲದೆ, ಮುಂಗಡವಾಗಿ ಸ್ವಲ್ಪ ಹಣ ನೀಡಿ, ಹೇಗಾದರೂ ಆ ವ್ಯಕ್ತಿಯನ್ನು ಕೊಲ್ಲಬೇಕೆಂದು ಹೇಳಿದನು. ಹಣ ಪಡೆದ ರೌಡಿಶೀಟರ್, ಪ್ರೊದ್ದಟ್ಟೂರಿನ ಹಳೆಯ ಬಸ್ ನಿಲ್ದಾಣದ ಬಳಿ ಹೋಗಿ ತನ್ನ ಪರಿಚಿತ ರೌಡಿಶೀಟರ್​ಗಳಿಗೆ ಏನಾಯಿತು ಎಂದು ವಿವರಿಸಿದನು. ಅಲ್ಲದೆ, ಅವರಿಗೂ ಸ್ವಲ್ಪ ಹಣ ನೀಡಿದನು. ಇದಾದ ನಂತರ, ಆತ ಹಿಂದೂಪುರದ ಪ್ರಮುಖ ಬಾಡಿಗೆ ಗ್ಯಾಂಗ್ ಅನ್ನು ಪ್ರೊದ್ದಟ್ಟೂರಿಗೆ ಕರೆಸಿದನು.

ಬುಧವಾರ ಸಂಜೆ ಹಿಂದೂಪುರದ ಸುಫಾರಿ ಗ್ಯಾಂಗ್ ಲಿಂಗಪುರಂ ನಿವಾಸಿಯನ್ನು ಕೊಲ್ಲಲು ಪ್ರೊದ್ದಟ್ಟೂರಿಗೆ ಬಂದಿಳಿದಿತ್ತು. ನಿನ್ನೆ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಆತನನ್ನು ಕೊಲ್ಲಲು ಯೋಜಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ, ತಕ್ಷಣ ಎಚ್ಚೆತ್ತುಕೊಂಡರು. ಬಳಿಕ ವಿಶೇಷ ತಂಡಗಳನ್ನು ರಚಿಸಿ, ಏಕಕಾಲದಲ್ಲಿ ದಾಳಿ ಮಾಡಿ, ಹಿಂದೂಪುರಂ ಗ್ಯಾಂಗ್, ರಾಜುಪಾಲಂ ರೌಡಿ ಶೀಟರ್, ಲಿಂಗಪುರಂ ಗ್ರಾಮದ ಮಹಿಳೆ ಮತ್ತು ಆಕೆ ಗೆಳೆಯನನ್ನು ಬಂಧಿಸಿದರು. ಸದ್ಯ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಅಂಟಿಸಿದ ಭದ್ರತಾ ಸಿಬ್ಬಂದಿ

TAGGED:Wife gave 10 lakh betel leaves to kill husband; what happened next?
Share This Article
Facebook Twitter Copy Link Print
Previous Article Bikaji Foods Founder no more ಚಿಕಿತ್ಸೆ ವೇಳೆಯೇ ಬಿಕಾಜಿ ಫುಡ್ಸ್ ಸಂಸ್ಥಾಪಕ, ಎಂಡಿ ಶಿವ ರತನ್ ಅಗರ್‌ವಾಲ್ ನಿಧನ
Next Article ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾರತೀಯರ ವಿಡಿಯೋ ವೈರಲ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?