Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ನೀಚಭಂಗ ರಾಜಯೋಗ, ಗಜಕೇಸರಿ, ವಾಶಿ, ಧನ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅದೃಷ್ಟ
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ನೀಚಭಂಗ ರಾಜಯೋಗ, ಗಜಕೇಸರಿ, ವಾಶಿ, ಧನ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅದೃಷ್ಟ

Share
4 Min Read
SHARE

 

newsics.com/ ನ್ಯೂಸಿಕ್ಸ್

ಇಂದು (ಏಪ್ರಿಲ್ 22, ಬುಧವಾರ) ನೀಚಭಂಗ ರಾಜಯೋಗ, ವಾಶಿ ಯೋಗ, ಗಜಕೇಸರಿ ಯೋಗ, ಧನ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ.

ಗ್ರಹಗಳ ಸ್ಥಿತಿಯ ಆಧಾರದ ಮೇಲೆ ಚಂದ್ರನ ಸಂಚಾರವು ಮಿಥುನ ರಾಶಿಯಲ್ಲಿ ಗುರುವಿನೊಂದಿಗೆ ಆಗುವ ಮೂಲಕ ಗಜಕೇಸರಿ ಯೋಗ ನಿರ್ಮಾಣಗೊಳ್ಳುವುದು. ಜತೆಗೆ ಇಂದು ಚಂದ್ರನು ಮಂಗಳನ ಮೇಲೆ ಚತುರ್ಥದೃಷ್ಟಿ ಹಾಯಿಸುವ ಮೂಲಕ ಧನ ಯೋಗದ ನಿರ್ಮಾಣವಾಗಲಿದೆ. ಇದರೊಂದಿಗೆ ಬುಧವಾರ ಸೂರ್ಯನಿಂದ 12ನೇ ಮನೆಯಲ್ಲಿ ಬುಧ ತನ್ನ ಸಂಚಾರ ಮಾಡುವ ಮೂಲಕ ವಾಶಿ ಯೋಗದ ನಿರ್ಮಾಣವಾಗುವುದು. ಇದರೊಂದಿಗೆ ಗುರು ಮತ್ತು ಬುಧನ ನಡುವೆ ರಾಶಿ ಪರಿವರ್ತನೆಯ ಶುಭಯೋಗವು ಕೂಡ ನಿರ್ಮಾಣಗೊಳ್ಳಲಿದೆ. ಬುಧನು ನೀಚಭಂಗ ರಾಜಯೋಗವನ್ನು ನಿರ್ಮಿಸಲಿದ್ದಾನೆ.

ಈ ಶುಭ ಯೋಗಗಳ ಲಾಭವನ್ನು ಕೆಲ ರಾಶಿಗಳ ಜನರು ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ಧಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ರಾಶಿಗಳ ಜತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣೇಶನ ಕೃಪೆಗೆ ನೀವು ಪಾತ್ರರಾಗಬಹುದು, ಇದರಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ, ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.

ಇಂದು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ?

ಮೇಷ ರಾಶಿಗೆ ಸೇರಿದ ಜನರು ಇಂದು ವೃತ್ತಿ ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ಬಹಳ ಶುಭ ಮತ್ತು ಲಾಭದಾಯಕ ದಿನವಾಗಿರುವುದು. ನಿಮ್ಮ ಕೌಶಲ್ಯ ಹಾಗೂ ಸಾಮರ್ಥ್ಯದಿಂದಾಗಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಆರ್ಥಿಕ ಕ್ಷೇತ್ರದಲ್ಲಿ ನಿಮಗೆ ಪ್ರಗತಿಗಾಗಿ ಉತ್ತಮ ಅವಕಾಶಗಳು ದೊರಕುವುದು ಮತ್ತು ಸರ್ಕಾರಿ ಯೋಜನೆಗಳಿಂದ ಲಾಭವನ್ನು ಪಡೆಯುವಿರಿ. ಅನೇಕ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಹಾಯ ದೊರಕುವುದು. ಸಾಮಾಜಿಕ ಕ್ಷೇತ್ರದಲ್ಲಿ ನೀವು ಸಕ್ರಿಯರಾಗಿ ಭಾಗವಹಿಸುವುದರಿಂದ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಗಜಕೇಸರಿ ಯೋಗದ ಪ್ರಭಾವದಿಂದಾಗಿ ನಿಮ್ಮ ನಾಯಕತ್ವದ ಸಾಮರ್ಥ್ಯದಲ್ಲಿ ಹೆಚ್ಚಳವಾಗುವುದರಿಂದ ಅಪಾರ ಲಾಭವನ್ನು ವೃತ್ತಿ ಜೀವನದಲ್ಲಿ ಹೊಂದುವಿರಿ. ನಿಮ್ಮ ಸುಖ, ಸಮೃದ್ಧಿಯೊಂದಿಗೆ ರುಚಿಕರವಾದ ಭೋಜನವನ್ನು ಸವಿಯುವ ಅವಕಾಶ ಲಭಿಸುವುದು.
ಪರಿಹಾರ: ಬೆಲ್ಲ ಮತ್ತು ಕಡಲೆಯನ್ನು ಹಸುವಿಗೆ ತಿನ್ನಲು ನೀಡುವುದರಿಂದ ಶುಭವಾಗಲಿದೆ. ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ಮತ್ತು ಗರಿಕೆಯನ್ನು ಅರ್ಪಿಸಿ.

ಮಿಥುನ ರಾಶಿಗೆ ಸೇರಿದ ಜನರಿಗೆ ಇಂದು ಗುರು ಮತ್ತು ಚಂದ್ರರ ಸಂಯೋಗದಿಂದಾಗಿ ಲಾಭ ದೊರಕುವ ಯೋಗವಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿದೆ. ಆರ್ಥಿಕ ಸ್ಥಿತಿ ನಿಮಗೆ ಅನುಕೂಲಕರವಾಗಿರುವುದು. ನಿಮ್ಮ ಸುಖ, ಸಮೃದ್ಧಿಗಾಗಿ ನೀವು ಹಣವನ್ನು ಖರ್ಚು ಮಾಡುವಿರಿ. ಕುಟುಂಬ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ನೆಲೆಸುವುದು. ಅಧಿಕಾರಿಗಳಿಂದ ಲಾಭವನ್ನು ಪಡೆಯುವಿರಿ. ನಿಮ್ಮ ಗೌರವ, ಖ್ಯಾತಿಯಲ್ಲಿ ಬಹಳಷ್ಟು ವೃದ್ದಿ ಆಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವಿರಿ. ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪಾರ ಲಾಭವನ್ನು ಗಳಿಸುವಿರಿ. ಪ್ರೀತಿಯ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ಲಭಿಸುವುದು. ನಿಮ್ಮ ರೋಮ್ಯಾಂಟಿಕ್ ಜೀವನ ಸಂತೋಷದಿಂದ ಕೂಡಿರಲಿದೆ. ಈ ಮೊದಲೇ ಮಾಡಿದಂತಹ ಕೆಲಸ ಹಾಗೂ ಹೂಡಿಕೆಗಳಿಂದ ಅಪಾರ ಲಾಭವನ್ನು ಪಡೆಯುವಿರಿ.
ಪರಿಹಾರ: ನೀವು ದುರ್ಗಾ ದೇವಿಯ ಪೂಜೆ ಮಾಡಬೇಕು ಮತ್ತು ಸಪ್ತಶತಿಯ ಹನ್ನೊಂದನೇಯ ಅಧ್ಯಾಯವನ್ನು ಪಠಣ ಮಾಡಬೇಕು.

ಸಿಂಹ ರಾಶಿಗೆ ಸೇರಿದ ಜನರಿಗೆ ಇಂದು ಸೂರ್ಯ, ಚಂದ್ರರ ಸಂಚಾರದಿಂದಾಗಿ ಶುಭವಾಗಲಿದೆ. ಸೂರ್ಯ ಏಳನೇ ಮನೆಯಲ್ಲಿ ಚಲಿಸುವ ಮೂಲಕ ನಿಮ್ಮ ಮನೋಬಲ ಹೆಚ್ಚಾಗುವುದು ಮತ್ತು ಚಂದ್ರ ಗುರುವಿನ ಸಂಯೋಗದಿಂದಾಗಿ ನಿಮ್ಮ ಯೋಚಿಸುವ ಸಾಮರ್ಥ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಹೊಂದುವಿರಿ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆದುಕೊಳ್ಳುವಿರಿ. ಆರ್ಥಿಕ ಯೋಜನೆಗಳಿಂದಾಗಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗುವುದು. ಆರ್ಥಿಕ ಲಾಭವನ್ನು ಗಳಿಸಲು ಉತ್ತಮ ಅವಕಾಶ ದೊರಕುವುದು. ನಿಮ್ಮ ಕಲಾತ್ಮಕ ಸಾಮರ್ಥ್ಯದಿಂದಾಗಿ ಅಪಾರ ಲಾಭವನ್ನು ಗಳಿಸುವಿರಿ.
ಪರಿಹಾರ: ನೀವು ಮಂಗಳಮುಖಿಯರಿಗೆ ಹಣವನ್ನು ದಾನ ಮಾಡಬೇಕು.

ಕನ್ಯಾ ರಾಶಿಗೆ ಸೇರಿದ ಜನರಿಗೆ ಇಂದು ಪ್ರಗತಿದಾಯಕವಾಗಿರುವುದು. ಬುಧನು ನಿಮ್ಮ ರಾಶಿಯ ಮೇಲೆ ದೃಷ್ಟಿಯನ್ನು ಹೊಂದುವ ಕಾರಣ, ವೃತ್ತಿ ಜೀವನದಲ್ಲಿ ಪ್ರಗತಿ ದೊರಕುವ ಯೋಗವಿದೆ. ನಿಮ್ಮ ಪ್ರಭಾವ ಹಾಗೂ ಗೌರವ, ಖ್ಯಾತಿ ಹೆಚ್ಚಾಗುವುದು. ನಿಮ್ಮ ಕರ್ಮದ ಮನೆಯಲ್ಲಿ ಗಜಕೇಸರಿ ಯೋಗದ ನಿರ್ವಾಣದಿಂದಾಗಿ ವೃತ್ತಿ ಜೀವನದಲ್ಲಿ ಪ್ರಗತಿಗಾಗಿ ಉತ್ತಮ ಅವಕಾಶಗಳು ಲಭಿಸಲಿದೆ. ನಿಮ್ಮ ಯಾವುದಾದರು ದೊಡ್ಡ ಆಸೆ ಈಡೇರುವುದು. ನಿಮ್ಮ ಯೋಜನೆಗಳು ಹಾಗೂ ವ್ಯಾಪಾರ ಕೌಶಲ್ಯದಿಂದಾಗಿ ನೀವು ಲಾಭವನ್ನು ಗಳಿಸುವಿರಿ. ಶಿಕ್ಷಣಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವ ಯೋಗವಿದೆ. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆದಾಯದಲ್ಲಿ ವೃದ್ದಿಯಾಗುವುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕುವುದು ಮತ್ತು ಸುಖ, ಸಮೃದ್ಧಿಯಲ್ಲಿ ಅಪಾರ ವೃದ್ದಿಯೂ ಕೂಡ ಆಗುವುದು.
​ಪರಿಹಾರ: ನೀವು ಹಸಿರು ಹುಲ್ಲನ್ನು ಹಸುವಿಗೆ ತಿನ್ನಿಸಬೇಕು. ಓಂ ಗಂ ಗಣಪತಯೇ ನಮಃ ಮಂತ್ರವನ್ನು ಜಪಿಸಿರಿ.

ಕುಂಭ ರಾಶಿಗೆ ಸೇರಿದ ಜನರಿಗೆ ಇಂದು ಅತ್ಯಂತ ಲಾಭದಾಯಕವಾದ ದಿನವಾಗಿರುವುದು. ನಿಮ್ಮ ಅದೃಷ್ಟದ ಕ್ಷೇತ್ರದಲ್ಲಿ ಮುಂದೆ ಸಾಗಲು ಉತ್ತಮ ಅವಕಾಶಗಳನ್ನು ಪಡೆಯುವಿರಿ. ಕೆಲಸದಲ್ಲಿ ಬದಲಾವಣೆ ಬಗ್ಗೆ ಯೋಚಿಸುತ್ತಿರುವವರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಗಳಿಸುವರು. ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದೃಷ್ಟದ ಬೆಂಬಲದಿಂದಾಗಿ ಲಾಭಕ್ಕಾಗಿ ಉತ್ತಮ ಅವಕಾಶದಿಂದ ಲಾಭವನ್ನು ಗಳಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುವುದು. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಸಂತೋಷಮಯವಾದ ದಿನವಾಗಿರಲಿದೆ ಹಾಗೂ ರೋಮ್ಯಾನ್ಸ್ ಹೆಚ್ಚಾಗುವುದು. ಕೆಲಸಗಳಿಗೆ ಸಂಬಂಧಿಸಿದ ಜನರು ಹೊಸ ವಿಚಾರಗಳನ್ನು ಕಲಿಯುವವರು ಮತ್ತು ಉತ್ತಮ ಅವಕಾಶಗಳ ಪ್ರಾಪ್ತಿಯಾಗುವುದು. ಪರಿಚಿತರು ಅಥವಾ ಸ್ನೇಹಿತರನ್ನು ಭೇಟಿಯಾಗುವ ಸಂಭವವಿದೆ. ಹಾಗಾಗಿ ಅವಸರವನ್ನು ಹೊಂದದಂತೆ ಎಚ್ಚರ ವಹಿಸುವುದು ಉತ್ತಮ.
ಪರಿಹಾರ: ಕುಂಭ ರಾಶಿಗೆ ಸೇರಿದ ಜನರು ಪರಿಹಾರವಾಗಿ ರಾಹುಮಂತ್ರವಾದ ಓಂ ರಾಂ ರಾಹವೇ ನಮಃ ಮಂತ್ರವನ್ನು ಜಪ ಮಾಡಬೇಕು.

TAGGED:Dhan Yoga: Great luck for people of these five zodiac signsGajakesariToday is Neechabhanga Raja YogaVashi
Share This Article
Facebook Twitter Copy Link Print
Previous Article Today’s Horoscope ರಾಶಿ ಭವಿಷ್ಯ 22-04-2026, ಬುಧವಾರ, ಇಂದಿನ ನಿಮ್ಮ ಅದೃಷ್ಟದ ಬಣ್ಣ ಯಾವುದು?
Next Article ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?