https://youtube.com/shorts/RcxcteKkGZ8?si=yxDv0iURLfg799X9
newsics.com
ನವದೆಹಲಿ: ನವದೆಹಲಿ (ಏ.16): ಪ್ರಮುಖ ಐವೇರ್ ಸ್ಟಾರ್ಟ್‌ಅಪ್ ಸಂಸ್ಥೆಯಾದ ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್ ಮಾರ್ಗಸೂಚಿಯಲ್ಲಿ ‘ಹಿಂದೂ ಸಂಪ್ರದಾಯದ ಕುರುಹುಗಳಾದ ಬಿಂದಿ, ತಿಲಕ ಮತ್ತು ಕೈಗೆ ಕಟ್ಟುವ ದಾರಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ’ ಎಂಬ ಆರೋಪದ ಮೇಲೆ ಭಾರಿ ಆಕ್ರೋಶ ಎದುರಿಸುತ್ತಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ, ಕಂಪನಿಯ ಸಿಇಒ ಪಿಯುಷ್ ಬನ್ಸಾಲ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೆನ್ಸ್‌ಕಾರ್ಟ್‌ನ ಹಳೆಯ ತರಬೇತಿ ದಾಖಲೆಯೊಂದು ವೈರಲ್ ಆಗಿತ್ತು. ಅದರಲ್ಲಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಬಿಂದಿ (ಬೊಟ್ಟು), ತಿಲಕ ಮತ್ತು ಕೈಗೆ ಧಾರ್ಮಿಕ ದಾರ (ಕಲಾವ) ಧರಿಸುವುದನ್ನು ನಿಷೇಧಿಸಲಾಗಿತ್ತು.
ಆದರೆ, ಹಿಜಾಬ್ ಮತ್ತು ಟರ್ಬನ್ ಧರಿಸಲು ಕೆಲವು ಷರತ್ತುಗಳೊಂದಿಗೆ ಅವಕಾಶ ನೀಡಲಾಗಿತ್ತು. ಇದು ಹಿಂದೂ ಸಂಪ್ರದಾಯದ ವಿರುದ್ಧದ ತಾರತಮ್ಯ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ‘ಬಾಯ್ಕಾಟ್ ಲೆನ್ಸ್‌ಕಾರ್ಟ್’ ಅಭಿಯಾನ ಆರಂಭವಾಗಿತ್ತು.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಸಿಇಒ ಪಿಯುಷ್ ಬನ್ಸಾಲ್ ಸಾಮಾಜಿಕ ಜಾಲತಾಣ ‘X’ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವೈರಲ್ ಆಗಿರುವ ದಾಖಲೆಯು ಹಳೆಯದು ಮತ್ತು ಅದು ಕಂಪನಿಯ ಅಧಿಕೃತ ಹೆಚ್‌ಆರ್ (HR) ನೀತಿಯಲ್ಲ. ಅದರಲ್ಲಿ ಬಿಂದಿ ಮತ್ತು ತಿಲಕದ ಬಗ್ಗೆ ಇದ್ದ ತಪ್ಪು ಸಾಲುಗಳನ್ನು ನಾವು ಫೆಬ್ರವರಿಯಲ್ಲೇ ತೆಗೆದುಹಾಕಿದ್ದೇವೆ. ಯಾರ ಭಾವನೆಗಾದರೂ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಲೆನ್ಸ್‌ಕಾರ್ಟ್ ಯಾವುದೇ ಧಾರ್ಮಿಕ ಆಚರಣೆಯನ್ನು ನಿರ್ಬಂಧಿಸುವುದಿಲ್ಲ, ಎಂದು ಅವರು ತಿಳಿಸಿದ್ದಾರೆ.
https://www.newsics.com/2026/04/19/six-people-who-had-gone-swimming-drowned/