https://youtube.com/shorts/EOt-aJYYg5k?si=DmDCY_9WwqDDfAlH
newsics.com
ಇಂದಿನ ಫ್ಯಾಷನ್ ಯುಗದಲ್ಲಿ ಎಷ್ಟೇ ಸಂಬಳವಿದ್ದರೂ ಖರ್ಚು ವೆಚ್ಚಗಳು ದುಬಾರಿ. ಬ್ರ್ಯಾಂಡೆಡ್ ಬಟ್ಟೆ, ಐಷಾರಾಮಿ ವಾಹನ, ಮನೆ ಎಂದು ಇಎಂಐಗೆ ಸಂಬಳ ವ್ಯಯಿಸಬೇಕಾಗುತ್ತದೆ. ಆದರೆ ಆದರೆ, ಇಲ್ಲೊಬ್ಬರು 27 ವರ್ಷದ ಬೆಂಗಳೂರಿನ ಟೆಕ್ಕಿ ವರ್ಷಕ್ಕೆ ಬರೋಬ್ಬರಿ 50 ಲಕ್ಷ ರೂ. ಗಳಿಗೂ ಅಧಿಕ ವೇತನ ಪಡೆಯುತ್ತಿದ್ದರೂ, ಇವರು ಮಾತ್ರ ಐಷಾರಾಮಿ ವಸ್ತುಗಳಿಗಿಂತ ಭವಿಷ್ಯದ ಉಳಿತಾಯ ಹಾಗೂ ನೆಮ್ಮದಿಯ ಜೀವನಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಇಂದಿನ ಯುವಜನತೆಗೆ ಹಣಕಾಸು ನಿರ್ವಹಣೆಯ ಅತ್ಯುತ್ತಮ ಪಾಠವನ್ನು ಹೇಳಿಕೊಟ್ಟಿದ್ದಾರೆ.
ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಈ ಯುವತಿ, ಇನ್‌ಸ್ಟಾಗ್ರಾಮ್‌ನಲ್ಲಿ @thinking.mori ಎಂಬ ಖಾತೆಯ ಮೂಲಕ ತಮ್ಮ ಜೀವನಶೈಲಿ ಮತ್ತು ಹಣಕಾಸು ನಿರ್ಧಾರಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಯುವಕ-ಯುವತಿಯರು ಪ್ರತಿಷ್ಠೆಗಾಗಿ ಖರೀದಿಸುವ ಲೇಟೆಸ್ಟ್ ಮಾಡೆಲ್‌ನ ಐಫೋನ್, ಝರಾ (Zara) ದಂತಹ ಬ್ರಾಂಡೆಡ್ ಬಟ್ಟೆಗಳು, ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್‌ಗಳು ಹಾಗೂ ಐಷಾರಾಮಿ ಕಾರುಗಳನ್ನು ತಾವು ಉದ್ದೇಶಪೂರ್ವಕವಾಗಿಯೇ ಖರೀದಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇವು ಕೇವಲ ತಾತ್ಕಾಲಿಕ ಖುಷಿ ನೀಡುವ ವಸ್ತುಗಳಷ್ಟೇ ಹೊರತು, ದೀರ್ಘಕಾಲಿಕ ನೆಮ್ಮದಿ ನೀಡುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.
ಇದರ ಬದಲಾಗಿ ಅವರು ಅನುಭವಗಳಿಗೆ ಹಣ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಅಂದರೆ, ಹೊಸ ಜಾಗಗಳ ಪ್ರವಾಸ, ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅವರ ಮೊದಲ ಆದ್ಯತೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದರೂ, ಐಷಾರಾಮಿ ಜೀವನ ಏಕೆ ನಡೆಸುತ್ತಿಲ್ಲ ಎಂಬುದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ನನ್ನ ಕೈಯಲ್ಲಿ ಹಣವಿದ್ದರೂ, ಅದರ ಜೊತೆಗೆ ಜವಾಬ್ದಾರಿಗಳು ಮತ್ತು ಸಾಲಗಳೂ ಇವೆ. ಹಾಗಾಗಿ ವಸ್ತುಗಳಿಗಿಂತ ಅನುಭವಗಳಿಗೆ ನಾನು ಆದ್ಯತೆ ನೀಡುತ್ತೇನೆ. ದುಬಾರಿ ಹ್ಯಾಂಡ್‌ಬ್ಯಾಗ್‌ಗಳೆಂದರೆ ನನಗೂ ಇಷ್ಟ, ಆದರೆ ಅವುಗಳಿಗಿಂತ ನನ್ನ ಹಣಕಾಸಿನ ಭದ್ರತೆ ಹಾಗೂ ಶಿಸ್ತು ನನಗೆ ಹೆಚ್ಚು ಮುಖ್ಯ ಎಂದು ಅವರು ವಿವರಿಸಿದ್ದಾರೆ.
ಅವರು ತಮ್ಮ ಹೆತ್ತವರಿಗಾಗಿ ಖರೀದಿಸಿದ ಮನೆಗೆ ಪ್ರತಿ ತಿಂಗಳು 30,000 ರುಪಾಯಿ EMI ಆಗಿ ಪಾವತಿಸುವುದಾಗಿಯೂ ತಿಳಿಸಿದ್ದಾರೆ. “ಮನೆ ಒಂದು ಹೊಣೆಗಾರಿಕೆ ಎಂದು ನನಗೆ ತಿಳಿದಿದೆ. ನನ್ನ ಹೆತ್ತವರಿಗಾಗಿ ನಾನು ಇದನ್ನು ಮಾಡಲು ಬಯಸಿದ್ದೆ. ಏಕೆಂದರೆ ಅವರು ನನಗಾಗಿ ತುಂಬಾ ಮಾಡಿದ್ದಾರೆʼʼ ಎಂದಿದ್ದಾರೆ. ವಸ್ತುಗಳಿಗಿಂತ ಹೆಚ್ಚಾಗಿ ಪ್ರಪಂಚ ಸುತ್ತಲು ಇಷ್ಟಪಡುವ ಇವರು, 2025ರಲ್ಲಿ ಪ್ರವಾಸಕ್ಕಾಗಿ ಮಾತ್ರವೇ 7 ಲಕ್ಷ ರುಪಾಯಿ ವ್ಯಯಿಸಿದ್ದಾರೆ. ಅವರು ತಿಂಗಳಿಗೆ ಸುಮಾರು 3 ಲಕ್ಷ ರುಪಾಯಿ ಗಳಿಸುತ್ತಾರೆ. ಅದರಲ್ಲಿ ಮತ್ತು SIPಗಳಲ್ಲಿ 1 ಲಕ್ಷ ರುಪಾಯಿ ಹೂಡಿಕೆ ಮಾಡುತ್ತಾರೆ. ಜೀವನ ನಿಭಾಯಿಸಲು 6 ತಿಂಗಳಿಗಾಗುವಷ್ಟು ಹಣವನ್ನು ಪ್ರತ್ಯೇಕವಾಗಿ ಇರಿಸಿದ್ದಾರೆ.
https://www.instagram.com/reel/DXFEeb5CfFS/?igsh=b3RweW95Ymt0ODFw