Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Horoscope ಇಂದಿನ ರಾಶಿ ಭವಿಷ್ಯ, 15-04-2026, ಬುಧವಾರ
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ, 15-04-2026, ಬುಧವಾರ

Share
5 Min Read
SHARE

newsics.com

ಶುಭ ದಿನ

15-04-2026, ಬುಧವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಚೈತ್ರ ಮಾಸ ಕೃಷ್ಣ ಪಕ್ಷ ತ್ರಯೋದಶಿ.

* ಪ್ರದೋಷ

* ಮಾಸಿಕ ಶಿವರಾತ್ರಿ

* ಸೌರಮಾನ ಯುಗಾದಿ (ವಿಷು ಹಬ್ಬ)

* ಶ್ರೀ ರಮಣ ಮಹರ್ಷಿ ಆರಾಧನೆ

* ಭಕ್ತ ಕುಂಬಾರ ಪುಣ್ಯದಿನ

* ಶ್ರೀ ಸ್ವಾಮಿ ಸಮರ್ಥರ ಪುಣ್ಯತಿಥಿ, ಅಕ್ಕಲಕೋಟೆ, ಮಹಾರಾಷ್ಟ್ರ

ಇಂದಿನ ಪಂಚಾಂಗ:

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಬಾಲವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:25 – 13:58, ಯಮಗಂಡ ಕಾಲ 07:45 – 09:18, ಗುಳಿಕ ಕಾಲ 10:51 – 12:25

===============

ಮೇಷ

ಕಾರ್ಯದ ಶಿಸ್ತಿನಿಂದ ಸಾಗಲು ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ಮಾಡುವುದು ಸರಿ ಕಾಣದು. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆನಿಸುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. ಅದನ್ನು ಕ್ಷಮಾಪಣೆಯಿಂದ ಸರಿಮಾಡಿಕೊಳ್ಳಿ.

ವೃಷಭ 

ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ ಈಗ ಅವಕಾಶಗಳು ಸಿಗುವ ಸಾಧ್ಯತೆ ಇದೆ, ಅವರು ಪ್ರಯತ್ನಿಸಬೇಕು. ಇತರರ ತಪ್ಪು ಕೆಲಸದಿಂದ ನಿಮಗೆ ತೊಂದರೆ. ನೀವು ಅದನ್ನು ತಿದ್ಸಬೇಕಸದೀತು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು.

ಮಿಥುನ 

ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ಅಸಂಬದ್ಧ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಿ ಇರುವುದು. ಸಂಗಾತಿಯನ್ನು ಎಲ್ಲಿಗಾದರೂ ದೂರ ಕರೆದುಕೊಂಡು ಹೋಗಲು ಆಸೆಯಾಗುವುದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವಿದೇಶದಲ್ಲಿ ಇರವವರಿಗೆ ಅಸಮಾಧಾನ ಹೆಚ್ಚಿರುವುದು.

ಕರ್ಕಾಟಕ 

ನಿಮ್ಮ ಅಧಿಕೃತ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ವಿಷಯಗಳಲ್ಲಿ ಪ್ರೀತಿಪಾತ್ರರ ಸಲಹೆಯ ಅಗತ್ಯವಿರುತ್ತದೆ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಶೀಘ್ರದಲ್ಲೇ ಸಂಬಂಧಗಳನ್ನು ಸುಧಾರಿಸುವ ಅವಕಾಶವನ್ನು ನೀವು ಪಡೆಯಬಹುದು. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.

ಸಿಂಹ 

ಗುರು ಹಿರಿಯರಿಂದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ. ಉನ್ನತ ಅಧಿಕಾರಿಯ ಜೊತೆ ಆಗಬೇಕಾದ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೀರಿ. ನಿಮ್ಮ ಸಲಹೆಯನ್ನು ಅಧಿಕಾರಿ ವರ್ಗ ಸ್ವೀಕರಿಸುವುದು. ನಿಮ್ಮ ಗುಣಮಟ್ಟವು ನಿಮ್ಮದೇ ಕಾರಣದಿಂದ ತಗ್ಗಬಹುದು. ಆಡಳಿತದಲ್ಲಿ ಆಗಬೇಕಾದ ಬದಲಾವಣೆಯನ್ನು ನೀವು ತರುವಿರಿ. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು.

ಕನ್ಯಾ 

ವ್ಯಾಪಾರ ಮಾಡುವಾಗ ಹಣದ ಕುರಿತು ಬಹಳ ಎಚ್ಚರಿಕೆ ಅಗತ್ಯವಾಗಿ ಮಾಡಿ. ಇಂದು ಅನಿವಾರ್ಯ ಓಡಾಟವು ಬರಲಿದ್ದು ವಾಹನ ಚಲಾಯಿಸುವಾಗ ನಿಮಗೆ ಜಾಗರೂಕತೆ ಬೇಕಾಗುವುದು. ಕೊಡಬೇಕಾದವರಿಗೆ ಸರಿಯಾದ ಗೌರವವನ್ನು ಕೊಡಿ. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ತುಲಾ 

ಸರ್ಕಾರಿ ಕೆಲಸ ಮಾಡುವವರು ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು. ಬದಲಾಗುತ್ತಿರುವ ವ್ಯಕ್ತಿಗಳಿಗೆ ತಕ್ಕಂತೆ ಬದಲಾವಣೆಗಳನ್ನು ನೀವೇ ಮಾಡುಕೊಳ್ಳುವಿರಿ. ಕುಟುಂಬಕ್ಕೆ ನಿಮ್ಮ ಸಂಗಾತಿಯ ಸಮರ್ಪಣೆಯು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ.

ವೃಶ್ಚಿಕ 

ಬಟ್ಟೆ ವ್ಯಾಪಾರಿಗಳು ಮಾತಿನಿಂದ ಯೋಗ್ಯವಾದ ರೀತಿಯಲ್ಲಿ ವ್ಯಾಪಾರ ನಡೆಸಿ ಲಾಭ ಗಳಿಸುವೆರು. ನಿಮ್ಮ ಕುಟುಂಬದಲ್ಲಿ ಹೊರಗಿನವರಿಗೆ ಹಸ್ತಕ್ಷೇಪ ಮಾಡಲು ಬಿಡುವುದು ಬೇಡ. ನೀವು ಇಂದು ಉದ್ಯಮದ ಕಾರಣಕ್ಕೆ ಸ್ನೇಹಬಂಧವನ್ನು ಬಿಗಿ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನೀವು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.

ಧನುಸ್ಸು

ವಿದ್ಯಾರ್ಥಿಗಳು ಕಷ್ಟಕರವಾದ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. ಬಹು ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ, ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಅಂದುಕೊಂಡಷ್ಟು ಸರಳವಾಗಿ ಇಂದಿನ ಕಾರ್ಯವು ಸಮಾಪ್ತಿಯಾಗದು.

ಮಕರ 

ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೂರದೃಷ್ಟಿಯ ಅಗತ್ಯವಿದೆ. ಕುಟುಂಬ ಸದಸ್ಯರ ಜೊತೆ ಚರ್ಚಿಸಿದ ಅನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅತಿಯಾದ ದುರಾಸೆಯಿಂದ ನೀವು ಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಸಂಬಂಧವನ್ನು ಚೆನ್ನಾಗಿ ನಿಭಾಯಿಸುವ ಕಲೆಯು ಗೊತ್ತಿದೆ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.

ಕುಂಭ 

ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು.‌ ವ್ಯವಹಾರದಲ್ಲಿ ಕಠಿಣ ಪರಿಶ್ರಮವಿರುತ್ತದೆ, ಯೋಜನೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಕಛೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಿಮ್ಮ ವರ್ತನೆ ಬದಲಾದೀತು. ನಿಮಗೆ ಅನೇಕರು ಪ್ರಭಾವಿತರಾಗಬಹುದು.‌ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.

ಮೀನ 

ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯೋಗದ ಸಂದರ್ಭದಲ್ಲಿ ಕೆಲಸಗಳ ಮೇಲೆ ಗಮನ ಹೆಚ್ಚಿಸಬೇಕು. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು.

 

 

TAGGED:#almanac #zodiac #prediction #15-04-2026 #wednesday #horoscope #planetary #positions
Share This Article
Facebook Twitter Copy Link Print
Previous Article ಇಂದು ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಭೇಟಿ : ಎಲ್ಲೆಡೆ ಬಿಗಿ ಭದ್ರತೆ
Next Article ಸಿನಿಮಾ ಶೈಲಿಯಲ್ಲಿ ಅಟ್ಯಾಕ್: ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ

Popular Posts

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

You Might Also Like

ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?