Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪತಿ ಬಿಟ್ಟು ಲವರ್ ಜೊತೆಗೆ ಓಡಿ ಹೋಗಿದ್ದವಳನ್ನು ಸುಟ್ಟ ಹಾಕಿದ ಕುಟುಂಬಸ್ಥರು.!
ಕರ್ನಾಟಕಪ್ರಮುಖ

ಪತಿ ಬಿಟ್ಟು ಲವರ್ ಜೊತೆಗೆ ಓಡಿ ಹೋಗಿದ್ದವಳನ್ನು ಸುಟ್ಟ ಹಾಕಿದ ಕುಟುಂಬಸ್ಥರು.!

Share
1 Min Read
SHARE

ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮರ್ಯಾದೆ ಕಳೆದಳು ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಯೊಬ್ಬಳನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಎಂಬಾಕೆಯೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಆಕೆ ತನ್ನ ಪತಿಯನ್ನು ಬಿಟ್ಟು ತಾನು ಪ್ರೀತಿಸುತ್ತಿದ್ದ ಕೃಷ್ಣಾ ಪಾಟೀಲ (28) ಎಂಬಾತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಈ ಹಿಂದೆ ನಾಪತ್ತೆ ದೂರು ಕೂಡ ದಾಖಲಾಗಿತ್ತು.

ಕೃತ್ಯ ನಡೆದ ಹಿನ್ನೆಲೆ:

ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಆಕೆಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 13 ರಂದು ಆಕೆಯನ್ನು ಕೊಲೆ ಮಾಡಿದ ಕುಟುಂಬಸ್ಥರು, ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕಾಶ ಹಳವರ (ಯುವತಿಯ ಚಿಕ್ಕಪ್ಪ), ಶಾನೂರ ಹಳವರ (ಯುವತಿಯ ಸಹೋದರ), ಮೊರಬದ ಕಲ್ಲಪ್ಪ (ಯುವತಿಯ ಸಹೋದರಿಯ ಪತಿ)

ಪೊಲೀಸ್ ತನಿಖೆ:

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಈ ಕೃತ್ಯವು ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

TAGGED:Family members set a woman on fire after she left her husband and ran away with her lover!
Share This Article
Facebook Twitter Copy Link Print
Previous Article ಇನ್ಮುಂದೆ ಕಾರ್ಖಾನೆ ಕೆಲಸವನ್ನೂ AI ನಿರ್ವಹಿಸಲಿದೆಯೇ?
Next Article ಸರ್ಕಾರಿ ನೌಕರರೇ ವರ್ಗಾವಣೆಗೆ ಸಿದ್ದರಾಗಿ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?