newsics.com
ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಎಪಿಎಸ್ ಬಿಲ್ಡಿಂಗ್ ಬಳಿ ಪಾರ್ಕಿಂಗ್ ವಿಚಾರವಾಗಿ ದೊಡ್ಡ ಗಲಾಟೆ ನಡೆದಿದೆ.
ಪಾರ್ಕಿಂಗ್ ಜಾಗದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ. ಮಹಿಳೆ ಹಾಗೂ ಯುವಕನ ನಡುವೆ ಗಲಾಟೆ ನಡೆದು ಪರಸ್ಪರ ಕೈಕೈ ಮಿಲಾಯಿಸಿದ್ದು, ರಸ್ತೆ ಮಧ್ಯೆಯೇ ಸಿನಿಮೀಯ ಶೈಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಯುವಕ ತನ್ನ ಬೈಕ್ ನಿಲ್ಲಿಸಿದ್ದ ಜಾಗದಲ್ಲೇ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಆಟೋದಲ್ಲಿ ಬಂದು ಬೈಕ್ ತೆಗೆಯುವಂತೆ ಹೇಳಿದ್ದಾರೆ.
ಯುವಕ ನಾನು ಇಲ್ಲಿ ತನ್ನ ಬೈಕ್ ಪಾರ್ಕ್ ಮಾಡಬೇಕು ಎಂದು ಹೇಳಿದಾಗ ಮಹಿಳೆ ವಾಗ್ವಾದ ನಡೆಸಿದ್ದಾರೆ. ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಮಹಿಳೆ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಹಿಳೆ ಮತ್ತು ಆಕೆಯ ಕುಟುಂಬಸ್ಥರೂ ಕೂಡ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಗುಂಪೊಂದು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಮತ್ತು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದು ಕಂಡುಬಂದಿದೆ.