newsics.com
ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಒಡೆತನದ ‘ಬೀಸ್ಟ್ ಲೈಫ್’ ಸಂಸ್ಥೆಯು ವಿಶ್ವದ ಮೊಟ್ಟಮೊದಲ ಪ್ರೋಟೀನ್ ಕೊಂಡೋಮ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಇಂಟರ್ನೆಟ್’ನಲ್ಲಿ ಸಂಚಲನ ಮೂಡಿಸಿದೆ.
ಏಪ್ರಿಲ್ 1ರ ‘ಮೂರ್ಖರ ದಿನ’ ಹತ್ತಿರವಿರುವ ಬೆನ್ನಲ್ಲೇ ಬಂದಿರುವ ಈ ವಿಚಿತ್ರ ಪ್ರಕಟಣೆ, ಇದು ನಿಜವಾದ ಉತ್ಪನ್ನವೋ ಅಥವಾ ಕೇವಲ ಮಾರ್ಕೆಟಿಂಗ್ ತಂತ್ರವೋ ಎಂಬ ಗೊಂದಲ ಮತ್ತು ಕುತೂಹಲವನ್ನು ನೆಟ್ಟಿಗರಲ್ಲಿ ಏಕಕಾಲಕ್ಕೆ ಹುಟ್ಟುಹಾಕಿದೆ.
ಪ್ರೋಟೀನ್ ಕೇವಲ ಮಸಲ್ ಬಿಲ್ಡಿಂಗ್ಗೆ ಮಾತ್ರವಲ್ಲ, ಇನ್ನು ಮುಂದೆ ಬೆಡ್ರೂಮ್ಗೂ ಎಂಟ್ರಿ ಕೊಡಲಿದೆ! ಏನಿದು ‘ಬೀಸ್ಟ್ ಲೈಫ್’ ಕಂಪನಿಯ ಹೊಸ ಪ್ರೋಟೀನ್ ಕೊಂಡೋಮ್ ಐಡಿಯಾ? ಇಲ್ಲಿದೆ ಪೂರ್ಣ ಮಾಹಿತಿ.
ಹೌದು. ಇತ್ತೀಚೆಗೆ ಭಾರತದ ಪ್ರಸಿದ್ಧ ಫಿಟ್ನೆಸ್ ಬ್ರಾಂಡ್ ಆದ ‘ಬೀಸ್ಟ್ ಲೈಫ್’ (Beast Life), ಪ್ರಪಂಚದ ಮೊಟ್ಟಮೊದಲ ‘ಪ್ರೋಟೀನ್ ಕಾಂಡೋಮ್ ‘ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಈ ಬ್ರಾಂಡ್ ಅನ್ನು ಪ್ರಸಿದ್ಧ ಯೂಟ್ಯೂಬರ್ ಮತ್ತು ಫಿಟ್ನೆಸ್ ಪ್ರಿಯ ಗೌರವ್ ತನೇಜಾ (Flying Beast) ಸ್ಥಾಪಿಸಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆಯು, “ಪ್ರಪಂಚದ ಮೊದಲ ಪ್ರೋಟೀನ್ ಕೊಂಡೋಮ್ ಅನ್ನು ಪರಿಚಯಿಸುತ್ತಿದ್ದೇವೆ.. ನಿಮ್ಮ ರಾತ್ರಿಯ ಪ್ರದರ್ಶನವನ್ನು (Night Performance) ಅಪ್ಗ್ರೇಡ್ ಮಾಡಲು ನಾವು ಬರುತ್ತಿದ್ದೇವೆ” ಎಂದು ಕ್ಯಾಪ್ಷನ್ ನೀಡಿದೆ.
ಏಪ್ರಿಲ್ ಫೂಲ್ ಗಿಮಿಕ್?: ಏಪ್ರಿಲ್ 1 ಹತ್ತಿರ ಬರುತ್ತಿರುವುದರಿಂದ, ಇದು ಕೇವಲ ಒಂದು ‘ಏಪ್ರಿಲ್ ಫೂಲ್’ ಪ್ರಾಂಕ್ ಅಥವಾ ಬ್ರಾಂಡ್ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ.: ಹಿಂದೆ ಜರ್ಮನಿಯ ಸಂಸ್ಥೆಯೊಂದು ವಿಡಿಯೋ ರೆಕಾರ್ಡಿಂಗ್ ತಡೆಯಲು ‘ಡಿಜಿಟಲ್ ಕೊಂಡೋಮ್’ ಆಯಪ್ ಪರಿಚಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.