https://youtube.com/shorts/wcgOU8WO_jc?si=ko9vW9TLLev8Rg2l
newsics.com
ಚೆನ್ನೈ: ತಮಿಳಗಾ ವೆಟ್ರಿ ಕಳಗಂ(ಟಿವಿಕೆ) ಸಂಸ್ಥಾಪಕ, ನಟ-ರಾಜಕಾರಣಿ ವಿಜಯ್ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಚುನಾವಣಾ ಅಫಿಡವಿಟ್ ನಲ್ಲಿ 520 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ನಟ ಚೆನ್ನೈನ ಪೆರಂಬೂರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಇದು ಅವರ ರಾಜಕೀಯ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಹೆಚ್ಚು ಕಡಿಮೆ 700 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವ ವಿಜಯ್ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಐಷಾರಾಮಿ ಕಾರು, ಬಂಗಲೆ, ಎಸ್ಟೇಟ್ ಇವೆಲ್ಲವೂ ಗಮನ ಸೆಳೆದಿದ್ದರೂ, ವಿಜಯ್ ಹಾಗೂ ಅವರ ಪತ್ನಿ ಬಳಿ ಇರುವ ಚಿನ್ನ ಹಾಗೂ ವಜ್ರದ ಮೌಲ್ಯವನ್ನು ಕಂಡು ದಂಗಾಗಿ ಹೋಗಿದ್ದಾರೆ.
ಸಂಗೀತಾ ಪತಿ ವಿಜಯ್ ವಿರುದ್ಧ ವಿಚ್ಛೇದನ ಪ್ರಕರಣವನ್ನು ದಾಖಲಿಸಿದ್ದರು. ಇಲ್ಲಿಂದ ಇಬ್ಬರ ದಾಂಪತ್ಯ ಜೀವನದ ಬಗ್ಗೆ ಅವರ ಬೆಂಬಲಿಗರಲ್ಲಿ ಆತಂಕ ಸೃಷ್ಟಿಯಾಗಿತ್ತು. ಪರಿಸ್ಥಿತಿ ಹೀಗಿದ್ದರೂ, ವಿಜಯ್ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಪತ್ನಿ ಸಂಗೀತಾ ಬಳಿಕ ಇರುವ ಚಿನ್ನಾಭರಣ ಹಾಗೂ ವಜ್ರದ ಒಡವೆಗಳ ಬಗ್ಗೆ ಅಚ್ಚರಿಯ ಮಾಹಿತಿಯನ್ನು ನೀಡಿದ್ದಾರೆ.
ತಮಿಳು ವೆಟ್ರಿ ಕಳಗಂ’ ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಬಳಿ 883 ಗ್ರಾಂ ಚಿನ್ನಾಭರಣ ಎಂದು ಘೋಷಿಸಿಕೊಂಡಿದ್ದಾರೆ. ಹಾಗೇ ಪತ್ನಿ ಸಂಗೀತಾ ಬಳಿ 3,132 ಗ್ರಾಂ ಚಿನ್ನಾಭರಣ, 134.91 ಕ್ಯಾರೆಟ್ ವಜ್ರದ ಒಡವೆಗಳು ನಮೂದಿಸಿದ್ದಾರೆ. ಈ ಪಟ್ಟಿ ಹೊರಬೀಳುತ್ತಿದ್ದಂತೆ ತಮಿಳಿಗರು ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಚೆನ್ನೈನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 13 ಸಾವಿರ ಇದೆ ಎಂದು ಅಂದಾಜಿಸಲಾಗಿದ್ದು, ಅದರ ಆಧಾರದ ಮೇಲೆ ವಿಜಯ್ ಬಳಿಕ 1.23 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಸಂಗೀತ ಬಳಿಕ 4.07 ಕೋಟಿ ರೂ. ಮೌಲ್ಯದ ಹಾಗೂ 1 ಕೋಟಿ ರೂ. ಮೌಲ್ಯದ ವಜ್ರದ ಒಡವೆಗಳು ಇದೆ ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನಲ್ಲಿ ಬಾಕ್ಸಾಫೀಸ್ ಕಿಂಗ್ ಆಗಿ ಮೆರೆದಿರುವ ವಿಜಯ್ ಆಸ್ತಿಯ ಮೌಲ್ಯವನ್ನು ಕಂಡು ತಮಿಳುನಾಡಿನ ಜನ ಹೌಹಾರಿದ್ದಾರೆ.