https://youtube.com/shorts/wcgOU8WO_jc?si=ko9vW9TLLev8Rg2l
newsics.com
ಸೌಥ್ ಸಿನಿಮಾ ಅಂಗಳದ ನಟಿ ರಮ್ಯಾ ಕೃಷ್ಣನ್ ಕನ್ನಡ, ತಮಿಳು, ತೆಲಗು ಸೇರಿದಂತೆ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮಾತೆ ಶಿವಗಾಮಿ ಅಂತಾನೇ ರಮ್ಯಾಕೃಷ್ಣನ್ ಅವರನ್ನು ಇಡೀ ಭಾರತ ಗುರುತಿಸುತ್ತದೆ. ಈ ಚಿತ್ರದ ಮೂಲಕ ರಮ್ಯಾಕೃಷ್ಣ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟಿಯಾಗಿದ್ದಾರೆ. ಇದೀಗ ರಮ್ಯಾಕೃಷ್ಣನ್ ಅವರ ವೈಯಕ್ತಿಕ ಜೀವನ ಮುನ್ನಲೆಗೆ ಬಂದಿದೆ.
ನಿರ್ದೇಶಕ ಕೃಷ್ಣ ವಂಶಿ ಅವರನ್ನು ರಮ್ಯಾ ಪ್ರೀತಿಸಿ ಮದುವೆಯಾಗಿದ್ದು, ಸಿನಿ ಅಂಗಳದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ರಮ್ಯಾಕೃಷ್ಣ-ಕೃಷ್ಣವಂಶಿ ಮದುವೆ 2003ರಲ್ಲಿ ನಡೆದಿತ್ತು. ಮದುವೆ ಬಳಿಕವೂ ರಮ್ಯಾಕೃಷ್ಣ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದಾರೆ.
ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಹಲವು ಬಾರಿ ವದಂತಿಗಳು ಹಬ್ಬಿದ್ದವು. ರಮ್ಯಾ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ನಿರ್ದೇಶಕ ಕೃಷ್ಣ ವಂಶಿ ಸ್ಪಷ್ಟನೆ ನೀಡಿದ್ದರು. ಶೂಟಿಂಗ್‌ಗಾಗಿ ರಮ್ಯಾ ಚೆನ್ನೈಗೆ ಹೋಗಿ ಬರುತ್ತಾರೆ, ನಾವು ನಿಯಮಿತವಾಗಿ ಭೇಟಿಯಾಗುತ್ತೇವೆ, ನಮ್ಮ ನಡುವೆ ಯಾವುದೇ ಅಂತರವಿಲ್ಲ ಎಂದು ಅವರು ಹೇಳಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ, ಹಬ್ಬಿರುವ ವದಂತಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.
ಒಮ್ಮೆ ಸಂದರ್ಶನವೊಂದರಲ್ಲಿ ನಿರ್ದೇಶಕ ಕೃಷ್ಣ ವಂಶಿ, ರಮ್ಯಾ ಕೃಷ್ಣನ್ ಬಗ್ಗೆ ಒಂದು ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದರು. ‘ರಮ್ಯಾ ಕೃಷ್ಣನ್‌ಗೆ ನಾನು ಗಂಡನಲ್ಲ, ನನಗೇ ಆಕೆ ಗಂಡ’ ಎಂದಿದ್ದರು. ಇದಕ್ಕೆ ರಮ್ಯಾ ಕೃಷ್ಣನ್ ಪ್ರತಿಕ್ರಿಯಿಸಿದ್ದರು. ‘ಕ್ವೀನ್’ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ‘(ನಗುತ್ತಾ) ಯಾರು ಯಾರಿಗೆ ಗಂಡನಾದರೇನು? ಅವರು ತಮಾಷೆಗಾಗಿ ಹಾಗೆ ಹೇಳಿರಬಹುದು. ಕೆಲವೊಮ್ಮೆ ಅವರು ಹೆಂಡತಿ, ನಾನು ಗಂಡ ಆಗಬಹುದು. ಪಾತ್ರಗಳನ್ನು ಬದಲಾಯಿಸಿಕೊಳ್ಳಬಹುದು.
ಗಂಡ-ಹೆಂಡತಿ ನಡುವೆ ತಿಳುವಳಿಕೆ ಇರಬೇಕು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ನಾವು ಇದನ್ನೇ ನಂಬುತ್ತೇವೆ’ ಎಂದು ರಮ್ಯಾ ಕೃಷ್ಣನ್ ತಿಳಿಸಿದ್ದರು. ಈ ಸಂದರ್ಶನದ ತುಣುಕು ಈಗ ವೈರಲ್ ಆಗಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ರಮ್ಯಾ ಕೃಷ್ಣನ್ ಸದ್ಯ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
https://www.newsics.com/2026/03/31/effect-of-middle-east-war-cement-prices-rising/