https://youtube.com/shorts/7-1-Ue0Sh8o?si=IPl4cpVzjeJG3YdO
newsics.com
ಮಾರ್ಚ್ 28 ರಿಂದ ಐಪಿಎಲ್ 19ನೇ ಸೀಸನ್ ಆರಂಭವಾಗಲಿದೆ, ಒಟ್ಟು 74 ಪಂದ್ಯಗಳು 65 ದಿನಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30 ಕ್ಕೆ ಎದುರಿಸಲಿದೆ.
ಈ ಆವೃತ್ತಿಯ ಎಲ್ಲಾ 74 ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮಧ್ಯಾಹ್ನದ ಪಂದ್ಯಗಳು 3:30 ಕ್ಕೆ, ಸಂಜೆಯ ಪಂದ್ಯಗಳು 7:30 ಕ್ಕೆ ಆರಂಭವಾಗುತ್ತವೆ.
ಐಪಿಎಲ್ 2026 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿದ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕನ್ನಡಿಗರು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಪಂದ್ಯಗಳ ನೇರ ಪ್ರಸಾರವನ್ನು ಮೊಬೈಲ್‌ನಲ್ಲಿ, ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ YuppTV ಯಲ್ಲಿಯೂ ನೇರ ಪ್ರಸಾರವು ಲಭ್ಯವಿರುತ್ತದೆ.