newsics.com
ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವದಿಂದ ಹೆದರಿ ವಿಚಿತ್ರವಾಗಿ ವರ್ತಿಸಿ ಕೊನೆಗೆ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುಳಾ(36) ಮೃತ ಮಹಿಳೆ. ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಮಂಜುಳಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಮೇಶ್ ಎನ್ನುವವರನ್ನು ಮದುವೆಯಾಗಿ 16 ವರ್ಷವಾಗಿದೆ. ದಂಪತಿ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲವಂತೆ. ಆದರೆ ಇತ್ತೀಚೆಗೆ ತವರು ಮನೆಗೆ ಹೋಗಿದ್ದು, ಮಾವನ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರಂತೆ.ವಾಪಸ್ ಗಂಡನ ಮನೆಗೆ ಬರುತ್ತಿದ್ದಂತೆ ವಿಚಿತ್ರವಾಗಿ ವರ್ತಿಸುವುದು, ಕುಂತ್ರು ನಿಂತ್ರು ಯಾರೋ ಎದುರುಗಡೆ ಬಂದು ಕಾಟ ಕೊಡುತ್ತಿರುವ ಅನುಭವ ಆಗುತ್ತಿತ್ತಂತೆ.
ಹೀಗಾಗಿ ಪತಿ ರಮೇಶ್ ಕೆಲಸ ಕಾರ್ಯ ಬಿಟ್ಟು ಒಂದು ವಾರದಿಂದ ದೇವರು ದಿಂಡಿರು, ಮಂತ್ರವಾದಿ ಎಂದು ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಮಂತ್ರವಾದಿ ಬಳಿ ಹೋಗಿ ತಾಯತ ಕಟ್ಟಿಸಿದ್ದರು. ಆದರೂ ವಾಸಿಯಾಗಿರಲಿಲ್ಲ. ಬಳಿಕ ವೈದ್ಯರ ಬಳಿ ತೋರಿಸಿದರೂ ಏನೂ ಪ್ರಯೋಜನವಾಗಿಲ್ಲ. ವಿಚಿತ್ರವಾಗಿ ವರ್ತಿಸಿ ಕೊನೆಗೆ ಪ್ರಾಣವನ್ನೇ ಬಿಟ್ಟಿದ್ದಾರೆ.ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2026/03/27/glorification-of-traitorous-underworld-don-on-bus/