Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮೆಟಾ ಇತಿಹಾಸದಲ್ಲೇ ಬೃಹತ್ ಲೇಆಫ್‌ಗೆ ಸಜ್ಜಾದ ಮಾರ್ಕ್‌ ಜುಕರ್‌ಬರ್ಗ್‌!
ಪ್ರಮುಖವಿದೇಶ

ಮೆಟಾ ಇತಿಹಾಸದಲ್ಲೇ ಬೃಹತ್ ಲೇಆಫ್‌ಗೆ ಸಜ್ಜಾದ ಮಾರ್ಕ್‌ ಜುಕರ್‌ಬರ್ಗ್‌!

Share
2 Min Read
SHARE

https://youtube.com/shorts/8vXYZAagRTI?si=TOMvue_f8l6FavIl

newsics.com

ಬರೋಬ್ಬರಿ 15 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು, ಮೆಟಾ ಮಾಲೀಕ ಮಾರ್ಕ್‌ ಜುಕರ್‌ಬರ್ಗ್‌ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೆಟಾ ಉದ್ಯೋಗ ಕಡಿತ ಆತಂಕ ಈಗಾಗಲೇ ಸಿಲಿಕಾನ್‌ ವ್ಯಾಲಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ಮಂಗಳವಾರ ರಾತ್ರಿ, ಮೆಟಾ ಕಂಪನಿಯ ವೇರಿಯಬಲ್ಸ್ ಮತ್ತು ಆ್ಯಡ್ಸ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಹೆಚ್‌ಆರ್‌ ವಿಭಾಗದಿಂದ ಅನಿರೀಕ್ಷಿತ ಇಮೇಲ್ ಬಂದಿದೆ. “ಬುಧವಾರ ಯಾರೂ ಕಚೇರಿಗೆ ಬರುವಂತಿಲ್ಲ, ಮನೆಯಿಂದಲೇ ರಿಮೋಟ್ ಆಗಿ ಕೆಲಸ ಮಾಡಿ. ಮುಂದಿನ ಮಾಹಿತಿಯನ್ನು ನಾಯಕತ್ವ ತಂಡ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ” ಎಂಬುದು ಆ ಇಮೇಲ್‌ನ ಸಾರಾಂಶವಾಗಿತ್ತು. ಈ ಮೇಲ್‌ ನೋಡಿದ ತಕ್ಷಣ ಉದ್ಯೋಗಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಏಕೆಂದರೆ ಕಾರ್ಪೊರೇಟ್‌ ಜಗತ್ತಿನಲ್ಲಿ, ಅದರಲ್ಲೂ ವಿಶೇಷವಾಗಿ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಇಂತಹ ಇಮೇಲ್‌ಗಳ ಅರ್ಥ ಲೇಆಫ್‌ ಎಂದೇ ಪರಿಗಣಿಸಲಾಗುತ್ತದೆ.
ವರದಿಗಳ ಪ್ರಕಾರ ಮೆಟಾ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ. 20ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಪ್ರಸ್ತುತ ಮೆಟಾ ಕಂಪನಿಯಲ್ಲಿ ಸುಮಾರು 79,000 ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ. 20ರಷ್ಟು ಎಂದರೆ ಸರಿಸುಮಾರು 15,800 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಇದು ಮೆಟಾ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತವಾಗಲಿದೆ ಎಂಬ ಮಾತುಗಳು ಸಿಲಿಕಾನ್‌ ವ್ಯಾಲಿಯಲ್ಲಿ ಕೇಳಿಬರುತ್ತಿವೆ. 2022-23ರಲ್ಲಿ “ವರ್ಷದ ದಕ್ಷತೆ” ಹೆಸರಿನಲ್ಲಿ, ಮೆಟಾದಿಂದ 11,000 ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಲಾಗಿತ್ತು. ಎರಡನೇ ಹಂತದಲ್ಲಿ 10,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಈ ವರ್ಷದ ಜನವರಿಯಲ್ಲೇ ರಿಯಾಲಿಟಿ ಲ್ಯಾಬ್ಸ್‌ನಿಂದ 1,500 ಜನರನ್ನು ತೆಗೆದುಹಾಕಿತ್ತು. ಆದರೆ ಈ ಬಾರಿ ನಡೆಯುತ್ತಿರುವ ಕಡಿತ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಲಾಗುತ್ತಿದೆ

ಇತ್ತೀಚಿನ ಗಳಿಕೆ ವರದಿಯಲ್ಲಿ ವೇರಿಯಬಲ್ಸ್ ವಿಭಾಗವನ್ನು 2026ರ ಪ್ರಮುಖ ಹೂಡಿಕೆ ಕ್ಷೇತ್ರಗಳಲ್ಲಿ ಒಂದು ಎಂದು ಮೆಟಾ ಬಣ್ಣಿಸಿತ್ತು. ಆದರೆ ಕೇವಲ ಕೆಲವೇ ದಿನಗಳ ಅಂತರದಲ್ಲಿ ಅದೇ ವಿಭಾಗದ ಉದ್ಯೋಗಿಗಳನ್ನು ಕೈಬಿಡಲು ಮೆಟಾ ನಿರ್ಧರಿಸಿದಂತಿದೆ. ಮೆಟಾ ಇದೀಗ ಸಂಪೂರ್ಣವಾಗಿ ಎಐ ಕಡೆಗೆ ಮುಖ ಮಾಡಿದ್ದು, 2028ರ ವೇಳೆಗೆ ಬೃಹತ್ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಬರೋಬ್ಬರಿ 600 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. ಕೇವಲ 2026ರ ಬಂಡವಾಳ ವೆಚ್ಚವೇ 135 ಬಿಲಿಯನ್ ಡಾಲರ್‌ ತಲುಪುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಅದರಿಂದ ಉಳಿಯುವ ವೆಚ್ಚವನ್ನು AI ತಂತ್ರಜ್ಞಾನ ಅಭಿವೃದ್ಧಿಗೆ ಬಳಸಿಕೊಳ್ಳುವುದು ಮೆಟಾದ ಯೋಜನೆಯಾಗಿದೆ. ಇದರ ಸ್ಪಷ್ಟ ಸುಳಿವನ್ನು ಮಾರ್ಕ್ ಜುಕರ್‌ಬರ್ಗ್ ಕಳೆದ ಜನವರಿಯಲ್ಲೇ ನೀಡಿದ್ದರು. “ಹಿಂದೆ ದೊಡ್ಡ ದೊಡ್ಡ ತಂಡಗಳು ಸೇರಿ ಮಾಡಬೇಕಾಗಿದ್ದ ಪ್ರಾಜೆಕ್ಟ್‌ಗಳನ್ನು ಈಗ ಕೇವಲ ಒಬ್ಬನೇ ಪ್ರತಿಭಾವಂತ ವ್ಯಕ್ತಿ ಮಾಡಬಲ್ಲ” ಎಂದು ಜುಕರ್‌ಬರ್ಗ್ ಹೇಳಿದ್ದರು. ಅಂದರೆ, ಎಐ ತಂತ್ರಜ್ಞಾನ ಮತ್ತು ಆಟೊಮೇಷನ್‌ನಿಂದಾಗಿ ಮನುಷ್ಯರ ಅಗತ್ಯ ಕಡಿಮೆಯಾಗುತ್ತಿದೆ ಎಂಬುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.

ಪೆದ್ದಿ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ

TAGGED:Mark Zuckerberg is preparing for the biggest layoff in Meta's history!
Share This Article
Facebook Twitter Copy Link Print
Previous Article ಪೆದ್ದಿ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ
Next Article ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಸೂಚನೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?