Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 16,706 ಕೋಟಿ ರೂಪಾಯಿಗೆ ಮಾರಾಟವಾದ RCB: ಹೊಸ ಮಾಲೀಕರು ಯಾರು?
ಕರ್ನಾಟಕಪ್ರಮುಖ

16,706 ಕೋಟಿ ರೂಪಾಯಿಗೆ ಮಾರಾಟವಾದ RCB: ಹೊಸ ಮಾಲೀಕರು ಯಾರು?

Share
2 Min Read
SHARE

newsics.com

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ಖರೀದಿಸಿದೆ.
ಈ ಬೃಹತ್ ವ್ಯವಹಾರದ ಮೌಲ್ಯ 1.78 ಬಿಲಿಯನ್ ಯುಎಸ್ ಡಾಲರ್ (ಸುಮಾರು 16,706 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡಿದ್ದ 28 ವರ್ಷದ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಈಗ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿಯ ಹೊಸ ಚೇರ್ಮನ್‌ ಎನಿಸಿಕೊಂಡಿದ್ದಾರೆ. 2018ರ ಐಪಿಎಲ್‌ನಲ್ಲಿ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ರಾಜಸ್ಥಾನ ರಾಯಲ್ಸ್‌ ತಂಡದ ಭಾಗವಾಗಿದ್ದರು.
ಆರ್‌ಸಿಬಿ ಖರೀದಿಸಿದ ಒಕ್ಕೂಟ
ಬ್ರಿಟಿಷ್ ಕಂಪನಿ ‘ಡಿಯಾಜಿಯೋ’ (Diageo) ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನಿಂದ ಆರ್‌ಸಿಬಿಯ ಶೇ. 100ರಷ್ಟು ಪಾಲನ್ನು ಈ ನಾಲ್ಕು ಪ್ರಮುಖ ಸಂಸ್ಥೆಗಳು ಒಟ್ಟಾಗಿ ಖರೀದಿಸಿವೆ. ಆದಿತ್ಯ ಬಿರ್ಲಾ ಗ್ರೂಪ್ (ABG), ದ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (ToI), ಬೋಲ್ಟ್ ವೆಂಚರ್ಸ್ (Bolt) ಹಾಗೂ ಬ್ಲ್ಯಾಕ್‌ಸ್ಟೋನ್ (Blackstone – BXPE) ಜಂಟಿಯಾಗಿ ಆರ್‌ಸಿಬಿಯನ್ನು ಖರೀದಿ ಮಾಡಿದ್ದು, ಈ ಒಪ್ಪಂದವು ಆರ್‌ಸಿಬಿಯ ಪುರುಷರ (IPL) ಮತ್ತು ಮಹಿಳೆಯರ (WPL) ಎರಡೂ ತಂಡಗಳನ್ನು ಒಳಗೊಂಡಿದೆ.
ಹೊಸ ಮಾಲೀಕತ್ವದ ಟೀಮ್‌
ಆರ್‌ಸಿಬಿಯ ಹೊಸ ಚೇರ್ಮನ್‌ ಆಗಿ, ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕ ಆರ್ಯಮನ್ ವಿಕ್ರಮ್ ಬಿರ್ಲಾ ಇರಲಿದ್ದಾರೆ, ಉಪಾಧ್ಯಕ್ಷರಾಗಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ, ಒಕ್ಕೂಟದಲ್ಲಿ ಬೋಲ್ಟ್ ವೆಂಚರ್ಸ್ ಸ್ಥಾಪಕ ಡೇವಿಡ್ ಬ್ಲಿಟ್ಜರ್ ಮತ್ತು ಬ್ಲ್ಯಾಕ್‌ಸ್ಟೋನ್‌ನ ಸಿಇಒ ವೈರಲ್ ಪಟೇಲ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪ್ರಕ್ರಿಯೆಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಭಾರತೀಯ ಸ್ಪರ್ಧಾ ಆಯೋಗದ (CCI) ಅಧಿಕೃತ ಅನುಮೋದನೆಗೆ ಒಳಪಟ್ಟಿದೆ.
“ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿಯಾಗಿ ಬೆಳೆದಿದೆ. ಆರ್‌ಸಿಬಿ ಒಂದು ವಿಶಿಷ್ಟ ವೇದಿಕೆಯಾಗಿದ್ದು, ಈ ಆಸ್ತಿಯ ಪಾಲಕರಾಗಲು ನಾವು ಸಂತೋಷಪಡುತ್ತೇವೆ. ಈ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ’ ಎಂದು ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.
“ಆರ್‌ಸಿಬಿ ಐಪಿಎಲ್‌ನ ಹಾಲಿ ಚಾಂಪಿಯನ್ ಮತ್ತು ಅತ್ಯಂತ ಜನಪ್ರಿಯ ಬ್ರಾಂಡ್ ಆಗಿದೆ. ಕರ್ನಾಟಕ ಮತ್ತು ಬೆಂಗಳೂರಿನ ಅಭಿಮಾನಿಗಳ ಜೊತೆ ನಾವು ಸದಾ ಇರುತ್ತೇವೆ. ಶನಿವಾರ ಆರ್‌ಸಿಬಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮೈದಾನಕ್ಕಿಳಿಯಲಿದ್ದು, ತಂಡಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದು ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ ಅಧ್ಯಕ್ಷ ಸತ್ಯನ್ ಗಜ್ವಾನಿ ಹೇಳಿದ್ದಾರೆ.
“ಆರ್‌ಸಿಬಿ ವಿಶ್ವದರ್ಜೆಯ ಅಭಿಮಾನಿ ಬಳಗವನ್ನು ಹೊಂದಿದೆ. ಜಾಗತಿಕವಾಗಿ ಹಲವು ಲೀಗ್‌ಗಳಲ್ಲಿ ಹೂಡಿಕೆ ಮಾಡಿರುವ ನನಗೆ ಆರ್‌ಸಿಬಿಯಲ್ಲಿನ ಅವಕಾಶ ಅದ್ಭುತವಾಗಿ ಕಾಣಿಸುತ್ತಿದೆ ಎಂದು ಬೋಲ್ಟ್ ವೆಂಚರ್ಸ್ ಡೇವಿಡ್ ಬ್ಲಿಟ್ಜರ್ ತಿಳಿಸಿದ್ದಾರೆ.
ಆರ್‌ಸಿಬಿ ಖರೀದಿಯ ಬಗ್ಗೆ ಮಾತನಾಡಿದ ಹೊಸ ಚೇರ್ಮನ್‌ ಆರ್ಯಮನ್ ವಿಕ್ರಮ್ ಬಿರ್ಲಾ “ಆರ್‌ಸಿಬಿಯ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುವುದು ಒಂದು ಗೌರವದ ವಿಷಯ. ಕ್ರೀಡೆ, ಮಾಧ್ಯಮ ಮತ್ತು ಗ್ರಾಹಕ ವ್ಯವಹಾರಗಳ ಅನುಭವದೊಂದಿಗೆ ನಾವು ಮೈದಾನದಲ್ಲಿ ಮತ್ತು ಅಭಿಮಾನಿಗಳಿಗಾಗಿ ‘ಪ್ಲೇ ಬೋಲ್ಡ್’ (Play Bold) ಆಟವನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ.

ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?

TAGGED:706 crore: Aditya Birla-Times Group is the new owner!RCB sold for Rs 16
Share This Article
Facebook Twitter Copy Link Print
Previous Article ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?
Next Article Personal Health ಇದೇನಿದು‌ ಮೌತ್ ಕಾಂಡೋಮ್? ಓರಲ್ ಕ್ಯಾನ್ಸರ್‌ಗೆ ಕಡಿವಾಣ ಹಾಕುತ್ತಾ?

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?