newsics.com
ಬೆಳಗಾವಿ: ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೇ ಅಂತರ್ಜಾತಿ ವಿವಾಹ ಯಾಗಿ, 15 ವರ್ಷಗಳಕಾಲ ಪ್ರೀತಿಸಿದವಳನ್ನು ಒಂದು ಸಣ್ಣ ಕಾರಣಕ್ಕೆ ಹೆಂಡತಿಯನ್ನೇ ಪತಿ ಕಲ್ಲಿನಿಂದ ಜಜ್ಜಿ ನಡುರಸ್ತೆಯಲ್ಲೇ ಹತ್ಯೆಗೈದಿರುವ ಘಟನೆಯೊಂದು ಬೆಳಗಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ, ಶಿವಕ್ಕ ಬಸವರಾಜ್ ಜೋಡಳ್ಳಿ (33) ಕೊಲೆಯಾದ ಮಹಿಳೆ. ಬಸವರಾಜನ ಕೊಲೆ ಮಾಡಿದ ಆರೋಪಿ ಪತಿ.
ಮೊದಲನೇ ಪತಿಯ ಅಕಾಲಿಕ ಮರಣದ ನಂತರ ಶಿವಕ್ಕ ಬಸವರಾಜನನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿನ ಗಲಾಟೆಗಳು ಹೆಚ್ಚಾಗಿ ಶಿವಕ್ಕ ತನ್ನಿಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಮತ್ತೊಂದೆಡೆ, ಬಸವರಾಜ ಮೊದಲ ಮಗಳನ್ನು ತನ್ನ ತಾಯಿ ಬಳಿ ಇಟ್ಟು ಡ್ರೈವರ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಆರೋಪಿ ಬಸವರಾಜ ಅಪರೂಪಕ್ಕೆ ಗೋವನಕೊಪ್ಪ ಗ್ರಾಮಕ್ಕೆ ಬಂದುಹೋಗಿ ಮಾಡುತ್ತಿದ್ದನು. ಇತ್ತ ಶಿವಕ್ಕ ನರಗುಂದಕ್ಕೆ ಶಿಫ್ಟ್ ಆಗಿದ್ದು, ಅಲ್ಲಿಂದ ಕಳೆದ ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದಳಂತೆ. ತನ್ನ ಮೊದಲ ಹೆಣ್ಣುಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದ ಶಿವಕ್ಕನನ್ನು ಹಾಸಿಗೆಯಲ್ಲಿಂದ ಎಳೆದುಕೊಂಡು ಬಂದು ನಡುರಸ್ತೆಯಲ್ಲೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿ ತನಿಖೆ ಮುಂದು ವರೆಸಿದ್ದಾರೆ.
ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್!
ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಒಪ್ಪಲಾಗದು; ಪ್ರಧಾನಿ ಮೋದಿ ಖಂಡನೆ
ಕೋವಿಡ್ ಕಾಲದಂತೆ ಯುದ್ಧದ ದುಷ್ಪರಿಣಾಮ ಎದುರಿಸಲು ಸಜ್ಜಾಗಿ: ದೇಶದ ಜನರಿಗೆ ಮೋದಿ ಕರೆ