Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಪ್ರೇಮ್ ಹೇಳಿದ್ದೇನು?
ಪ್ರಮುಖಮನರಂಜನೆ

ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಪ್ರೇಮ್ ಹೇಳಿದ್ದೇನು?

Share
3 Min Read
SHARE

https://youtube.com/shorts/DiU6l59Harw?si=ZuaOlVBTxzvWqxLP

newsics.com

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿದ್ದು, ಪ್ರೇಮ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿ ಸ್ವತಃ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಿರ್ದೇಶಕ ಪ್ರೇಮ್, ‘ಯಾರೂ ಸಹ ಬೇಕೆಂದು ಅಥವಾ ತಿಳಿದು-ತಿಳಿದು ತಪ್ಪು ಮಾಡುವುದಿಲ್ಲ. ಸಾಕಷ್ಟು ಹಾಡುಗಳನ್ನು ನಾನು ಈ ವರೆಗೆ ಬರೆದಿದ್ದೇನೆ. ತಾಯಿಯ ಬಗ್ಗೆ, ದೇವರ ಬಗ್ಗೆ, ಅಣ್ಣ-ತಮ್ಮ, ಪ್ರೀತಿ ಬಗ್ಗೆ, ಜನಪದ ಹೀಗೆ ಹಲವು ರೀತಿ ಹಾಡು ಬರೆದಿದ್ದೀನಿ. ಜನ ಸಹ ಪ್ರೇಮ್ ಸಿನಿಮಾನಲ್ಲಿ ಒಳ್ಳೆಯ ಹಾಡುಗಳು ಇರುತ್ತವೆ ಎಂದೇ ಸಿನಿಮಾಕ್ಕೆ ಬರುತ್ತಾರೆ. ಅದಕ್ಕೆ ಋಣಿಯಾಗಿ ಇರುತ್ತೇನೆ. ಈ ಹಾಡು (ಸರ್ಸೆ ಸೆರಗು) ಬರೆದಾಗ ನಾನು ಬೇರೊಂದು ದೃಷ್ಟಿಕೋನದಿಂದ ಬರೆದಿದ್ದೆ’ ಎಂದಿದ್ದಾರೆ.
‘ಆ ಹಾಡು ಬರೆಯುವಾಗ ನನ್ನ ದೃಷ್ಟಿಕೋನದಲ್ಲಿ ನಾನು ಬರೆದೆ. ಎಣ್ಣೆ ಬಾಟಲಿ, ಉಪ್ಪಿನಕಾಯಿ ಇದನ್ನು ಕಲ್ಪಿಸಿಕೊಂಡು ಹಾಡು ಬರೆದಿದ್ದೆ. ಬಾಟಲ್ನ ಮೇಲೆತ್ತಿ ಎಂದು ಬರೆಯಬೇಕಿತ್ತು ಆದರೆ ಆ ಬಾಟಲಿ ಪದವನ್ನು ನಾನು ಕೊನೆಯಲ್ಲಿ ಬಳಸಿದೆ. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ನನ್ನ ವಿರುದ್ಧ ಕಾಲೆಳೆಯಲು, ಹೀಗಳೆಯಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲೈಕು, ಕಮೆಂಟಿಗಾಗಿ ವಿಡಿಯೋ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಪ್ರೇಮ್.
‘ನಾನು ಈ ವರೆಗೆ ಕೆಟ್ಟ ಅರ್ಥದ ಹಾಡುಗಳನ್ನು ಬರೆದಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ. ನಾನು ಬರೆದಿದ್ದ ಅರ್ಥವೇ ಬೇರೆ ಆಗಿತ್ತು. ಇದನ್ನು ಈ ಹಿಂದೆಯೂ ನಾನು ಮೀಡಿಯಾ ಮುಂದೆ ಹೇಳಿದ್ದೇನೆ. ಆದರೆ ಹಾಡು ಕೇಳಿದ ಕೆಲವರಿಗೆ ಹರ್ಟ್ ಆಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು. ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ಅಪ್ಲೋಡ್ ಮಾಡುತ್ತೀವಿ, ನಿಮಗೆ ಹರ್ಟ್ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ ಪ್ರೇಮ್.
ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ಗೊಂದಲ ಇತ್ತು. ಹಿಂದಿ ಪದಗಳು ಕೆಲವು ನನಗೆ ಇಷ್ಟವಾಗಲಿಲ್ಲ. ಆದರೆ ಭಾಷೆ ಸಮಸ್ಯೆಯಿಂದ ನಾನು ಪ್ರಶ್ನೆ ಮಾಡಲಿಲ್ಲ. ಆದರೆ ಹಿಂದಿ ಹಾಡು ಬರೆದಿರುವ ರತಿ ಬಾಲಮ್ ಅವರು ಎಲ್ಲ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ. ಅಸಲಿಗೆ ನನ್ನ ಹಿಂದಿನ ಹಿಟ್ ಹಾಡುಗಳನ್ನು ಕನ್ನಡದಿಂದ ಹಿಂದಿಗೆ ಬರೆದಿದ್ದು ಅವರೇ. ಆದರೆ ಅವರು ಸಮಜಾಯಿಷಿಕೊಳ್ಳಲಿಲ್ಲ, ಎಲ್ಲ ತಪ್ಪು ನನ್ನ ಮೇಲೆ ಹಾಕಿದರು, ಬಹುಷಃ ಭಯಪಟ್ಟು ನನ್ನ ಮೇಲೆ ಹಾಕಿದ್ದಾರೆ’ ಎಂದಿದ್ದಾರೆ ಪ್ರೇಮ್.
ಇನ್ನು ನಟಿ ನೋರಾ ಫತೇಹಿ ಸ್ಪಷ್ಟನೆ ಬಗ್ಗೆಯೂ ಮಾತನಾಡಿರುವ ಪ್ರೇಮ್, ‘ನೋರಾ ಫತೇಹಿ ಮಾತನಾಡಿರುವುದು ತಪ್ಪು. ಅವರಿಗೆ ಸಾಹಿತ್ಯ ಗೊತ್ತಿತ್ತು. ಸಾಹಿತ್ಯ ಗೊತ್ತಿಲ್ಲದೆ ಯಾವ ನಟರೂ ನಟಿಸುವುದಿಲ್ಲ, ಸಾಹಿತ್ಯ ಗೊತ್ತಿಲ್ಲದೆ ಎಕ್ಸ್ಪ್ರೆಷನ್ ಹೇಗೆ ಬರುತ್ತೆ? ಅವರು ಹಾಗೆ ಮಾತನಾಡಬಾರದಿತ್ತು. ಈಗ ಆಗಿರುವ ವಿವಾದದಿಂದ ತಪ್ಪಿಸಿಕೊಳ್ಳಲು ಹಾಗೆ ಮಾಡಿದ್ದಾರೆ. ಅನಿಸುತ್ತದೆ. ಇತ್ತೀಚೆಗೆ ನಡೆದ ಆಡಿಯೋ ಪ್ರೋಗ್ರಾಂನಲ್ಲಿ ಸಹ ಅವರು ಹಾಡಿನ ಬಗ್ಗೆ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದರು. ಆದರೆ ಈಗ ಹೀಗೆ ಮಾತನಾಡುತ್ತಿದ್ದಾರೆ. ಇರಲಿ ನಾನು ಹಾಡನ್ನು ರೀರೈಟ್ ಮಾಡುತ್ತೀನಿ. ಮತ್ತೆ ಅಪ್ಲೋಡ್ ಮಾಡುತ್ತೀನಿ’ ಎಂದಿದ್ದಾರೆ ಪ್ರೇಮ್.

https://www.instagram.com/reel/DWBrUvck4c2/?igsh=dG54MWFtMW9lbTNo

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟಿದೆ?; ಭಾರತಕ್ಕೆ ಎಷ್ಟು ಎಲ್ಪಿಜಿ ಬೇಕು?

TAGGED:'Sarse Seragu' song controversy: What did Prem say to the allegations?
Share This Article
Facebook Twitter Copy Link Print
Previous Article ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟಿದೆ?; ಭಾರತಕ್ಕೆ ಎಷ್ಟು ಎಲ್ಪಿಜಿ ಬೇಕು?
Next Article ಅಂಬಾನಿ ಕೈ ಹಿಡಿದ್ರೂ, ದೂರ ಸರಿದ ನೀತಾ

Popular Posts

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?