https://youtube.com/shorts/JFDfzeRUAUw?si=UPiQjhCFAIkLXEhb
newsics.com
ವಾಷಿಂಗ್ಟನ್: ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ಖಾರ್ಗ್ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಅಮೆರಿಕದ ವಾಯುಪಡೆ ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ದಾಳಿಯನ್ನು ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದು ಎಂದು ಅವರು ಬಣ್ಣಿಸಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನಡೆಸಿದ ಈ ಕಾರ್ಯಾಚರಣೆಯಲ್ಲಿ ಖಾರ್ಗ್ ದ್ವೀಪದಲ್ಲಿದ್ದ ಇರಾನ್‌ನ ಎಲ್ಲಾ ಮಿಲಿಟರಿ ಗುರಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ನಮ್ಮ ಶಸ್ತ್ರಾಸ್ತ್ರಗಳು ಜಗತ್ತಿನಲ್ಲೇ ಅತ್ಯಂತ ಅತ್ಯಾಧುನಿಕವಾಗಿವೆ. ಆದರೆ ಮಾನವೀಯ ದೃಷ್ಟಿಯಿಂದ ನಾನು ಸದ್ಯಕ್ಕೆ ಅಲ್ಲಿನ ತೈಲ ಮೂಲಸೌಕರ್ಯಗಳನ್ನು ನಾಶಪಡಿಸದಿರಲು ತೀರ್ಮಾನಿಸಿದ್ದೇನೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ನಲ್ಲಿ ಬರೆದುಕೊಂಡಿದ್ದಾರೆ.
ಒಂದು ವೇಳೆ ಇರಾನ್ ಏನಾದರೂ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ ಅಥವಾ ಪ್ರತಿದಾಳಿ ನಡೆಸಿದರೆ, ಮುಂದಿನ ಗುರಿ ಇರಾನ್‌ನ ತೈಲ ಕೇಂದ್ರಗಳೇ ಆಗಿರುತ್ತವೆ ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.