https://youtube.com/shorts/JFDfzeRUAUw?si=UPiQjhCFAIkLXEhb
newsics.com
ಇರಾನ್-ಇಸ್ರೇಲ್ ಯುದ್ಧದ ಭೀತಿ ಇದೀಗ ಅಡುಗೆ ಎಣ್ಣೆಯ ಮೇಲೂ ಪರಿಣಾಮ ಬೀರಿದೆ. ಹೌದು, ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಮುನ್ನವೇ ಅಡುಗೆ ಎಣ್ಣೆಯ ದರ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಯುದ್ಧದ ಕಾರಣದಿಂದ ಅಡುಗೆ ಎಣ್ಣೆಯ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಏಜೆಂಟ್‌ಗಳಿಗೆ ಕೇಳಿದರೆ, 100-200 ಬಾಕ್ಸ್‌ಗಳ ಬದಲು ಕೇವಲ 10 ಪ್ರತಿಶತದಷ್ಟು (ಸುಮಾರು 20 ಆಯಿಲ್ ಟ್ಯಾಂಕರ್‌ಗಳು) ಮಾತ್ರ ಪೂರೈಕೆಯಾಗುತ್ತಿದೆ. ಬೆಂಗಳೂರಿನ ಅಡುಗೆ ಎಣ್ಣೆ ಅಂಗಡಿ ಮಾಲೀಕರಾದ ಅಜಯ್ ಅವರು, ಬ್ರಾಂಡೆಡ್ ಎಣ್ಣೆಯ ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ಲೀಟರ್ ಎಣ್ಣೆಗೆ 20 ರೂಪಾಯಿಗಳಷ್ಟು ಬೆಲೆ ಏರಿಕೆಯಾಗಿದೆ. ಸರಕು ಸಿಗದ ಕಾರಣ ವ್ಯಾಪಾರಕ್ಕೆ ಹಿನ್ನಡೆಯಾಗಿದ್ದು, ಗ್ರಾಹಕರು ಬ್ರಾಂಡೆಡ್ ಉತ್ಪನ್ನಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಸರಬರಾಜಿನ ಕೊರತೆಯಿಂದಾಗಿ ಹಬ್ಬದ ಸಿದ್ಧತೆಗಳಿಗೂ ತೊಂದರೆಯಾಗುವ ಸಾಧ್ಯತೆಯಿದೆ.
ಯುದ್ಧ ಹಿನ್ನೆಲೆ, ಮೊಟ್ಟೆ ಉದ್ಯಮಕ್ಕೂ ತಟ್ಟಿದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ನಷ್ಟ