https://youtube.com/shorts/JFDfzeRUAUw?si=UPiQjhCFAIkLXEhb
newsics.com
ಪಾಟ್ನಾ: ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಹರಿದಾಡುತ್ತಿದೆ. ಯುವಕನೊಂದಿಗೆ ಮಹಿಳೆಯೊಬ್ಬಳು ಏಕಾಏಕಿ ಜಗಳಕ್ಕೆ ಇಳಿದಿದ್ದು, ಚಪ್ಪಲಿ ತೋರಿಸಿ ಆತನಿಗೆ ಬೈಯಲು ಶುರು ಮಾಡಿದ್ದಾಳೆ. ಆದರೂ ಕೂಡ ಎಲ್ಲವನ್ನೂ ಕೇಳಿಸಿ ಸಹಿಸಿಕೊಂಡು ಸುಮ್ಮನಾಗಿದ್ದಾನೆ. ಆದರೆ ಮಹಿಳೆ ಯಾವಾಗ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರುಮಾಡುತ್ತಿದ್ದಂತೆ ಕೆರಳಿದ ಯುವಕ ಆಕೆ ಮಹಿಳೆಯೆಂದು ಲೆಕ್ಕಿಸದೇ ಮುಖಮೂತಿ ನೋಡದೆ ಸರಿಯಾಗಿ ಜಾಡಿಸಿದ್ದಾನೆ. ಸದ್ಯ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.
ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕುತ್ತಿರುವುದು, ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್, ನನ್ನ ಪತಿ ಸೂಪರ್‌ವೈಸರ್ ಎಂದು ಅಹಂಕಾರದಿಂದ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೂ ಕೂಡ ಶಾಂತ ರೀತಿಯಿಂದಲೇ ಯುವಕ ವರ್ತಿಸಿರುವುದನ್ನು ಕಾಣಬಹುದು. ಆದರೆ ತನ್ನ ಪತ್ನಿಗೆ ಮುಜುಗರಕ್ಕೀಡುಮಾಡುವಂತಹ ಪದಗಳನ್ನು ಮಹಿಳೆ ಬಳಸುತ್ತಿದ್ದಂತೆ ಕೋಪಗೊಂಡ ಯುವಕ ಏಕಾಏಕಿ ಸೀಟಿನಿಂದ ಎದ್ದು ಸರಿಯಾಗಿ ಆ ಹೆಂಗಸಿಗೆ ಕಾಪಾಳಮೋಕ್ಷ ಮಾಡಿದ್ದಾನೆ. @bihta_vision ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಹಿಳೆಯ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ರೈಲು ಪ್ರಯಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
https://www.instagram.com/reel/DVxr-SkD_T0/?igsh=NXhqbmp1dXUwOGNn
ನಗೆಪಾಟಲಿಗೀಡಾಗಿದ್ದ ಕೆನರಾ ಬ್ಯಾಂಕ್! ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿ