https://youtube.com/shorts/yMSO-E277Og?si=gFSvtQQHQjZ3lXBt
newsics.com
ಕುಂಬಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಂಟರ್ನೆಟ್ನಲ್ಲಿ ಅವರು ಆ ಪರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈಗ ಅವರ ಮದುವೆಯ ವಿಷಯ ಸಖತ್ ಚರ್ಚೆ ಆಗುತ್ತಿದೆ. ಯಾವುದೇ ಸೂಚನೆ ನೀಡಿದೇ ಸಡನ್ ಆಗಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿಸಾ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಮದುವೆ ಬಳಿಕ ಮೊನಾಲಿಸಾ ಬೋಸ್ಲೆ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುತ್ತಾರಾ ಎಂಬ ಪ್ರಶ್ನೆಗೆ ಕೆಲವರಿಗೆ ಮೂಡಿದೆ.
ಮದುವೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ‘ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಹಾಗಾಗಿ ಇದು ಲವ್ ಜಿಹಾದ್ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಣೆಯ ಮೇಲೆ ಸಿಂಧೂರ ಧರಿಸಿದ್ದ ಅವರು, ‘ಫರ್ಮಾನ್ ಈ ಮದುವೆಗೆ ಮೊದಲು ಒಪ್ಪಿರಲಿಲ್ಲ. ನಾನೇ ಒತ್ತಾಯ ಮಾಡಿ ಮದುವೆ ಆಗುವಂತೆ ಮಾಡಿದೆ’ ಎಂದು ಹೇಳಿಕೆ ನೀಡಿದ್ದಾರೆ.
ಈ ವೇಳೆ ಫರ್ಮಾನ್ ಖಾನ್ ಮಾತನಾಡಿ, ನಾವಿಬ್ಬರೂ ಕಲಾವಿದರು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಪ್ರೀತಿಯಲ್ಲಿ ಧರ್ಮ ಬದಲಾಯಿಸುವ ಅಗತ್ಯವಿಲ್ಲ’ ಎಂದಿದ್ದಾರೆ. ಆ ಮೂಲಕ ತಮ್ಮ ಪತ್ನಿ ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.