newsics.com
ಶನಿವಾರದಿಂದ(ಮಾ.14) ಇಂಡಿಗೋ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನದ ಟಿಕೆಟ್‌ಗಳ ಮೇಲೆ ಇಂಧನ ಸರ್‌ಚಾರ್ಜ್ ಅನ್ನು ಪರಿಚಯಿಸಲಿದೆ.
ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ USD 100ರಷ್ಟು ಹೆಚ್ಚಾಗಿದೆ. ಏರ್ ಇಂಡಿಯಾ ನಂತರ ಇಂಧನ ಶುಲ್ಕವನ್ನು ಘೋಷಿಸಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಆಗಿದೆ.
ಹೆಚ್ಚುವರಿ ಶುಲ್ಕವು ಮಾರ್ಚ್ 14ರ ಮಧ್ಯರಾತ್ರಿಯಿಂದಲೇ (ಶನಿವಾರ ರಾತ್ರಿ 12 ಗಂಟೆ) ಜಾರಿಗೆ ಬರಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಯೇ ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಮಾನಯಾನ ಸಂಸ್ಥೆ ಇಂಡಿಗೋ ( IndiGo) ತಿಳಿಸಿದೆ.
ಪ್ರಯಾಣದ ಮಾರ್ಗ ಮತ್ತು ದೂರವನ್ನು ಅವಲಂಬಿಸಿ ಪ್ರತಿ ಪ್ರಯಾಣಿಕರಿಗೆ 425 ರೂ.ನಿಂದ 2,300 ರೂ.ವರೆಗೆ ಸರ್‌ಚಾರ್ಜ್ ವಿಧಿಸಲಾಗುತ್ತದೆ. ಜಾರಿಗೆ ಬರುವ ದಿನಾಂಕದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಬುಕಿಂಗ್‌ಗಳಿಗೆ ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ.
ನಾಳೆಯಿಂದ (ಮಾರ್ಚ್ 14) ಜಾರಿಗೆ ಬರುವಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಇಂಡಿಗೋ ಇಂಧನ ಶುಲ್ಕವನ್ನು ಹೇರಲಿದೆ. ಇಂಡಿಗೋ ವಿಮಾನಗಳಲ್ಲಿನ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಒಟ್ಟಾರೆ ಬೆಲೆಗಳು ಈ ಕೆಳಗಿನ ಹೆಚ್ಚುವರಿ ಇಂಧನ ಶುಲ್ಕವನ್ನು ಒಳಗೊಂಡಿರುತ್ತವೆ. ಭಾರತದೊಳಗೆ 425 ರೂ., ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ ಮತ್ತು ಚೀನಾಗೆ 1800 ರೂ., ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ 1800 ರೂ. ಮತ್ತು ಯುರೋಪ್ಗೆ 2,300 ರೂ. ಟಿಕೆಟ್ ದರ ಹೆಚ್ಚಳವಾಗಲಿದೆ.
‘ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳ ನಂತರ ಇಂಧನ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
https://x.com/ANI/status/2032463383736545785?ref_src=twsrc%5Etfw%7Ctwcamp%5Etweetembed%7Ctwterm%5E2032463383736545785%7Ctwgr%5E880985902b164ed05b2d1ff0ed1dfaa2910e211b%7Ctwcon%5Es1_c10&ref_url=https%3A%2F%2Fapi-news.dailyhunt.in%2F